ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ತಾವು ಚಿತ್ರಕಲೆಯನ್ನು ಮರೆತು ಸಂಗೀತದ ಬೆನ್ನು ಹತ್ತಿದ ವಸ್ತು. ವನ್ನಿಟ್ಟು ಕೊಂಡು ಶ್ರೀ ಕೆ. ವೆಂಕಟಪ್ಪನವರು ಒಂದು ಚಿತ್ರ ರಚಿಸಿದ್ದಾರೆ. ಅಂತಹದೇ ಸನ್ನಿವೇಶ ಸ್ವಾಮಿಯವರ ಜೀವನದಲ್ಲಿ ಒದಗಿತು. ಕುಂಚ, ವೇಶ್ಯ, ವರ್ಣಗಳನ್ನು ಗಂಟು ಕಟ್ಟಿಟ್ಟು, ಕಾಲಿಗೆ ಗೆಜ್ಜೆ ಬಿಗಿದರು. ಸುಪ್ತ ವಾಗಿದ್ದ ನಾಟ್ಯಾಭಿರುಚೆ ಪ್ರಚೋದಿತವಾಗಿ ಬೃಹದಾಕಾರ ತಾಳಿ ನಿಂತಿತು. ೧೯೩೮ರಲ್ಲಿ ಸ್ವಾಮಿಯವರು ಈ ವಿಷಯವನ್ನು ಬಿಡಾರಂ ಕೃಷ್ಣಪ್ಪನವರಲ್ಲಿ ಪ್ರಸ್ತಾಪಿಸಿದಾಗ ಅವರು ಜಟ್ಟಿ ತಾಯಮ್ಮನವರ ವಿದ್ವತ್‌ಢಿಮೆಯನ್ನು ಬಾಯಿತುಂಬ ಮನಸಾರೆ ಹೊಗಳಿದರು. ಸ್ವಾಮಿ ಗುರುವನ್ನರಸುತ ಹೊರಟರು. ತಾಯಮ್ಮನವರಿಗಾಗ ಎಂಭತ್ತುನಾಲ್ಕು ವಯಸ್ಸು, ತುಂಬಿದ ವಿದ್ಯೆ, ತುಂಬಿದ ಮನೆ, ತುಂಬಿದ ವಯಸ್ಸು, ಚಾಮರಾಜ ಒಡೆಯರವ ರಿಂದ ಚಿನ್ನದ ತೋಡ ದೊರಕಿಸಿಕೊಂಡ ವಿದ್ವದ್ವಿಲಾಸ, ತುಂಬು ವಯಸ್ಸಿನ ತಾಯಿ ಸ್ವಾಮಿಯವರನ್ನು ಶಿಷ್ಯರನ್ನಾಗಿ ಪರಿಗ್ರಹಿಸಿದರು. ಮರೆಮಾಜದೆ, ಇಲ್ಲದ ನೆಪ ಹೇಳದೆ, ಉತ್ತರ ವಯಸ್ಸಿನ ಇತಿಬಾಧೆಗಳನ್ನು ಗಣಿಸದೆ ತಾಯ ಮ್ಮನವರು ತಮ್ಮ ವಿದ್ಯೆಯನ್ನು ಶಿಷ್ಯನಿಗೆ ಅರೆದು ಹುಯ್ಯುತ್ತ ಬಂದರು. ಆರು ವರ್ಷ ಅವಿಚ್ಛಿನ್ನವಾಗಿ ಅಭ್ಯಾಸ ಸಾಗಿತು. ಮೈಸೂರಿನಲ್ಲಿ ಪರಂಪರಾಗತವಾಗಿ ಬೆಳೆದು ಬಂದ : ಭರತನಾಟ್ಯ ಸಂಪ್ರದಾಯದ ಕೊನೆಯ ಕೊಹಿನೂರು ತಾಯಮ್ಮನವರು. ಇವರ ಸನು ಕಾಲೀನರಾದ ಇತರ ಭರತನಾಟ್ಯ ನಿಪುಣೆಯರು ಸರಿಯಾದ ಶಿಷ್ಯರಿಗೆ ತಮ್ಮ ವಿದ್ಯೆಯನ್ನು ಧಾರೆಯೆರೆಯದೆ ಹೋದರು. ಅವರೊಂದಿಗೆ ಅವರ ವಿದ್ಯೆಯ ಗತಿಸಿತು. ತಾಯಮ್ಮನವರು ದೊಡ್ಡ ಮನಸ್ಸು ಮಾಡಿ ಸ್ವಾಮಿಯವರಿಗೆ ಭರತನಾಟ್ಯ ಶಿಕ್ಷಣ ಕೊಡದಿದ್ದರೆ ಮೈಸೂರಿನ ವಿಶಿಷ್ಟ ಕಲಾ ಸಂಪ್ರದಾಯ. ವೊಂದು ನಾಮಾವಶೇಷವಾಗುತ್ತಿತ್ತು. ದಕ್ಷಿಣದ ಭರತನಾಟ್ಯ ಸಂಪ್ರದಾಯಕ್ಕೂ, ಮೈಸೂರು ಸಂಪ್ರದಾ ಯಕ್ಕೂ ತುಂಬಾ ವ್ಯತ್ಯಾಸವಿದೆ. ಮೈಸೂರು ಸಂಪ್ರದಾಯ ಹದಿನಾರಾಣೆ ಕನ್ನಡ ಸಂಪ್ರದಾಯ. ಮುದ್ರೆಗಳಿಗೆ, ಭಾವ ಪ್ರದರ್ಶನಕ್ಕೆ ಇದರಲ್ಲಿ ಹೆಚ್ಚು ಪ್ರಾಧಾನ್ಯ, ಮೈಸೂರು ಸಂಪ್ರದಾಯದ ನಯ, ಕೋಮಲತೆ ದಕ್ಷಿಣಾದಿ. ಸಂಪ್ರದಾಯದಲ್ಲಿ ಕಂಡುಬರುವುದಿಲ್ಲ. ಸ್ವಾಮಿಯವರ ಕರಗತವಾಗಿರುವ