ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮ ಕರ್ನಾಟಕದ ಕಲಾವಿದರು ತ್ರಿಭಂಗಿಯಲ್ಲಿವೆ. ಸ್ವಯಂ ನರ್ತಕರಾದ ಸ್ವಾಮಿಯವರು ನೃತ್ಯ ಮೂರ್ತಿ ಗಳನ್ನು ಅನ್ಯಾದೃಶವಾಗಿ ಚಿತ್ರಿಸಿದ್ದಾರೆ.' ಈ ಚಿತ್ರಮಾಲೆ ಮುಗಿದಮೇಲೆ ಸ್ವಾಮಿಯವರು ಅಮೇರಿಕೆಗೆ ಹೋಗಿ ಅಲ್ಲಿ ಅದನ್ನು ಪ್ರಕಟಿಸಬೇಕೆಂದು ಉದ್ದೇಶಪಟ್ಟುಕೊಂಡಿದ್ದಾರೆ. ಈಚೆಗೆ ಸ್ವಾಮಿಯವರು ಷಾಲಿಮಾರ್ ಚಿತ್ರ ಸಂಸ್ಥೆಯ “ ಮಾರಾ ? ಚಿತ್ರದ ನೃತ್ಯ ದಿಗ್ದರ್ಶನಮಾಡಿ ಬಂದಿದ್ದಾರೆ. ಅದೇ ಸಂಸ್ಥೆಯ ( ಕೃಷ್ಣ ಭಗವಾನ್' ಚಿತ್ರದಲ್ಲಿ ನೃತ್ಯ ದಿಗ್ದರ್ಶನಮಾಡಿ ಪ್ರಭಾತ್ ಸಂಸ್ಥೆಯ ಫಲಾಲರೊಂದಿಗೆ ಕೆಲಕಾಲ ಕಲಾದಿಗರ್ರನ ಮಾಡಲು ಒಪ್ಪಿ ಕಂಡಿದ್ದಾರೆ. ಭಾರತದ ವೈಸರಾಯರಾಗಿದ್ದ ಲಾರ್ ಮೌಂಟ್ ಬ್ಯಾಟನ್ ಅವರು ಸ್ವಾಮಿಯವರನ್ನು ನವದೆಹಲಿಗೆ ಕರೆಸಿಕೊಂಡು ತಮ್ಮ ಭಾವಚಿತ್ರವನ್ನು ಜನರಿಂದ ರೂಪಿಸಿದರು. ಸ್ವಾಮಿಯವರ ಕೃತಿಕೌಶಲ್ಯವನ್ನು ಮೆಚ್ಚಿಕೊಂಡ ಮೌಂಟ್ ಬ್ಯಾಟನ್ ಅವರು ಲಂಡನ್ನಿಗೆ ಅವರನ್ನು ಸ್ವಾಗತಿಸಿದರು. ಬಾಪೂ ಮರಣಕ್ಕೆ ಕೆಲವು ತಿಂಗಳ ಹಿಂದೆ ಅವರ ದರ್ಶನ ಪಡೆಯುವ ಸುಯೋಗ ಸ್ವಾಮಿಯವರಿಗೆ ಲಭಿಸಿತು. ಬಾಪೂ ಮುಂದೆ ಕುಳಿತು ಅವರ ಭಾವಚಿತ್ರವನ್ನು ರೂಪಿಸಿದರು. ರೂಢಿಚಿತ್ರಗಳಲ್ಲಿ ಕಾಣುವುದಕ್ಕಿಂತ ಬಾಘ್ರ ಸ್ವಲ್ಪ ತುಂಬಿಕೊಂಡಿದ್ದಾರೆ. ಅದೇ ಆಳವಾದ ಮನೋಭಾವ, ಅದೇ ಸ್ಮಿತವದನ, ಬಾಪುವಿನ ಗ೦ಭೀರ್ಯ ಲಾಲಿತ್ಯಗಳನ್ನು ಅನ್ಯ ದೃಶ ನi) ಸೆರೆಹಿಡಿದಿದ್ದಾರೆ ಸ್ವಾಮಿ ತಮ್ಮ ಕುಶಲಕುಂಚದಲ್ಲಿ. ನಾನು ನೋಡಿ ರನ ಬಾಪು ಚಿತ್ರಗಳಲ್ಲಿ ಸ್ವಾಮಿಯವರ ಕೃತಿಗೆ ಶ್ರೇಷ್ಟ ಸ್ಥಾನ ಕೊಡಲಿಚ್ಚಿಸು ಸಿ. ಸ್ವಾಮಿಯವರು ಹಲವು ವಿಧದಲ್ಲಿ ಕನ್ನಡ ಸೇವೆಯನ್ನು ಮಾಡುತ್ತಿ ದ್ದಾರೆ. ನೃತ್ಯ ಪ್ರದರ್ಶನಗಳಲ್ಲಿ ದೇವರ ನಾಮಗಳಿಗೆ ಇವರು ಅಭಿನಯ ಒಡಿಯುವ ರೀತಿ ಕನ್ನಡಿಗರ ಹೃದಯ ತಣಿಸದಿರದು. ಚಿತ್ರ, ನಾಟ್ಯ, ಶಿಲ್ಪಗಳೆಲ್ಲದರಲ್ಲಿಯೂ ವಿಶಿಷ್ಟ ಪ್ರೌಢಿಮೆಯನ್ನು ದೊರಕಿಸಿಕೊಂಡು, ಅದನ್ನು ಕನ್ನಡನಾಡಿನ ಸೇವೆಗೆ ಮಾಸಲುಮಾಡಿ ಸ್ವಾಮಿಯವರು ಧನ್ಯರಾಗಿದ್ದಾರೆ. ತುಂಬಿದ ವಿದ್ಯೆಯನ್ನು ಸರಿಗಟ್ಟುವ 3 6 -