ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದೊರೆಸ್ವಾಮಿ ಅಯ್ಯಂಗಾರ್ಯ - ರತೀಯ ಸಂಗೀತ ವಾದ್ಯಗಳಲ್ಲಿ ವೀಣೆಗೊಂದು ವಿಶಿಷ್ಟ ಸ್ನಾನ; ಹೆಚ್ಚಿನ * ಸ್ನಾನ. ವೀಣೆ ದೇವದತ್ತವಾದುವೆಂದೂ, ದೇವಾದಿದೇವತೆಗಳಿಗೆ `ಪ್ರಿಯವಾದುದೆಂದೂ, ಭಾರತೀಯರ ನಂಬಿಕೆ, ವಿದ್ಯೆಯ ಅಧಿಷ್ಠಾನ ದೇವತೆ ಸರಸ್ವತಿ ಕೈಯಲ್ಲಿ ವೀಣೆ ಹಿಡಿದಿರುತ್ತಾಳೆ ; ನಾರದ ನುಡಿಸಿದರೂ ವೀಣೆ. - ವೀಣೆಯ ಶುದ್ಧ ಸ್ತರ ವೈಖರಿ, -ನಾದ ಮಾಧುರ್ಯ, ಮನೋಹರ ರೂಪಗಳೇ ಇದರ ಹೆಚ್ಚುಗಾರಿಕೆಗೆ ಕಾರಣಗಳಾಗಿವೆ. ಮಾನವನ ದೇಹ ರಚನೆಯ ಮಾದರಿಯಲ್ಲಿ ಇದರ ಆಕಾರ-ಮಾನವನ ಮನಸ್ಸಿನ ವಿಹಾರ, ವಿಕಾಸಗಳ ಕಡೆಗೆ ಇದರ ಲಕ್ಷ, ವೀಣೆ ದಿವ್ಯ-ಮಾನವ'ನ ಆಕಾರ ತಳೆ ದಿರುವ ವಾದ್ಯ. ಇಂತಹ ವಾದ್ಯ ಜಗತ್ತಿನಲ್ಲೆಲ್ಲೂ ಇಲ್ಲದಿರುವುದು ಭಾರತೀ ಯರ ಕಲಾನೈಪುಣ್ಯಕ್ಕೆ ಪರಮ ಸಾಕ್ಷಿ,