ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

'ದೊರೆಸ್ವಾಮಿ ಅಯ್ಯಂಗಾರ್ಯ ೩೧ ದಕ್ಷಿಣ ಹಿಂದೂಸ್ಥಾನದಲ್ಲಿ ವೀಣೆಯ ಆರಾಧನೆ ಅನಾದಿಕಾಲದಿಂದ ನಡೆದುಬಂದಿದೆ. ಆದರೆ ವೀಣೆಯ ಸರ್ವಾಂಗಪರಿಪೂರ್ಣ ಕಲಾವೈಭವವನ್ನು ಸಾರಿದವರು ಕೀರ್ತಿಶೇಷ ವೈಣಿಕ ಶಿಖಾಮಣಿ ಶೇಷಣ್ಣನವರು, ವೈಣಿಕಶಿಖಾ ಮಣಿ ಸುಬ್ಬಣ್ಣನವರು. ವೈಣಿಕ ಪ್ರವೀಣ ವೆಂಕಟಗಿರಿಯಪ್ಪನವರೂ ಶೇಷಣ್ಣ ನವರ ಪರಂಪರೆಯನ್ನು ಬೆಳಸಿದರು. ಇವರ ಸಾಧನೆ, ತಪಸ್ಸುಗಳಿ೦ದ ಮೈಸೂರಿಗೆ ಅಚ್ಚಳಿಯದ ಕೀರ್ತಿ ದೊರೆತು, ಮೈಸೂರಿನ ಸಂಗೀತಕ್ಕೆ ಹಿರಿಯ ಸ್ನಾನ ಲಭಿಸಿತು. ಸಂಗೀತ ಸಾರ್ವಭೌಮರಾದ ಶೇಷಣ್ಣನವರು, ಸುಬ್ಬಣ್ಣನವರು ಇವರ ಕಾಲ ಮುಗಿದ ಮೇಲೆ ಈ ಪರಂಪರೆಯನ್ನು ಸಾಗಿಸಿಕೊಂಡು ಬರುವವರು ಯಾರು ? ವೀಣಾವಾದನದಲ್ಲಿ ಮೈಸೂರು ಗಳಿಸಿದ್ದ ಕೀರ್ತಿಯನ್ನು ಕಾಪಾಡಿಕೊಂಡು ಬರುವವರು ಯಾರು ಎಂಬ ಯೋಚನೆ ಸಹಜವಾಗಿ ಕಲಾಭಿಮಾನಿಗಳನ್ನು ಕೊರೆಯುತ್ತಿದೆ. ಹಿರಿಯರ ಹೆಸರಿಗೆ ಕೀರ್ತಿತರಬಲ್ಲ ವೈಣಿಕರು ಮೈಸೂರಿನಲ್ಲಿ ನನ್ನ ದೃಷ್ಟಿಯಲ್ಲಿ ಇಬ್ಬರು- ವೀಣೆ ಕೇಶವಮೂರ್ತಿ ಗಳು ಮತ್ತು ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರು. ವೀಣಾಭಿಮಾನ ದೇವತೆಯ ಎರಡು ಕಣ್ಣುಗಳಂತಿರುವ ಈ ವಿದ್ವಾಂಸರ ಭವಿಷ್ಯವನ್ನು ಕನ್ನಡ ನಾಡು ಅತ್ಯಂತ ಕುತೂಹಲ, ಆದರದಿಂದ ನೋಡುತ್ತಿದೆ. ದೊರೆಸ್ವಾಮಿ ಅಯ್ಯಂಗಾರ್ಯರು ವಯಸ್ಸಿನಲ್ಲಿ ತುಂಬ ಚಿಕ್ಕವರು. ಈಗಿನ್ನೂ ಅವರಿಗೆ ೨೬ನೆಯ ವರ್ಷ ನಡೆಯುತ್ತಿದೆ. ಆದರೆ ಇವರ ಹೆಸರು ಮನೆಮಾತಾಗಿದೆ. ಸಂಗೀತದ ತೌರುಗಳಂತರುವ ಊರುಗಳಲ್ಲಿ, ಸ್ಥಳಗಳಲ್ಲಿ, ಸಂಸ್ಥೆಗಳಲ್ಲಿ ಕಛೇರಿ ಮಾಡಿ 'ಭಲೆ' ಎನಿಸಿಕೊಂಡು ಬಂದಿದ್ದಾರೆ. ಅರಿಯಾ ಕುಡಿ, ದ್ವಾರಂ, ಮುಸಿರಿ ಮೊದಲಾದ ಕಲಾ ತಪಸ್ವಿಗಳು ಇವರ ವಾದ್ಯ ವಾದನಕ್ಕೆ ತಲೆತೂಗಿದ್ದಾರೆ. ಎಳಸಾದ ದೇಹ. ನಸುನೀಳವಾದ ಮೂಗು, ಪ್ರಮಾಣಮಾರಿದ ಕಿವಿ, ಬಾಯಿ, ಕಿವಿಗೆ ಕಡುಕು, ಯಾವ ಆಡಂಬರವನ್ನೂ ತೋರದ ಸರ್ವ ಸಾಧಾರಣ ಉಡುಪು, ಹಳ್ಳಿಯ ಶ್ಯಾನುಭೋಗರ ಮಕ್ಕಳಂತೆ ಕಾಣುತ್ತಾರೆ ದೊರೆಸ್ವಾಮಿ, ಅಹಂಕಾರವಿಲ್ಲದ ನಡತೆ, ಆತ್ಮಸ್ತುತಿಯಿಂದ ದೂರಾದ

  • ಇವರ ಪರಿಚಯಕ್ಕೆ - ಕರ್ನಾಟಕ ಕಲಾವಿದರು '-ಭಾಗ ೧ ನೋಡಿ.