ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು Dh . ಮಾತುಗಾರಿಕೆ, ಒಳಮುಖವಾದ ಭಾವನಾ ಪ್ರಧಾನ ಕಣ್ಣುಗಳು, ಬಳಿಗೆ ಬಂದವರಲ್ಲಿ ಸೋದರವಾತ್ಸಲ್ಯವನ್ನು ಪ್ರಚೋದಿಸುವ ಸುಹೃತ್ ಸಂಪತ್ತು. ದೊರೆಸ್ವಾಮಿ ಅಯ್ಯಂಗಾರ್ಯರ ತಂದೆ ವೆಂಕಟೇಶ ಅಯ್ಯಂಗಾರ್ಯರೇ ಇವರ ಪ್ರಥಮ ವಿದ್ಯಾಗುರುಗಳು. ಏಳನೆಯ ವರ್ಷದಿಂದ ತಂದೆಯಲ್ಲಿ ಸಂಗೀತ ಶಿಕ್ಷಣ ಆಂಭವಾಯಿತು, ತಂದೆ ಮಗನನ್ನು ತಮ್ಮ ಗೆಳೆಯರು ವೀಣೆ ವೆಂಕಟಗಿರಿಯಪ್ಪನವರ ಮಡಿಲಿಗೆ ಹಾಕಿ 'ವಿದ್ಯಾ ದಾನ ಮಾಡಿ ಎಂದರು. ವೆಂಕಟಗಿರಿಯಪ್ಪ ದೊರೆಸ್ವಾಮಿಯವರನ್ನು ಹಿರಿಯ ಮಗನೆಂದು. ಭಾವಿಸಿದರು. ಲಾಲಿಸಿ, ಪಾಲಿಸಿ ಮನತೆರೆದು ವಿದ್ಯಾದಾನ ಮಾಡಿದರುಒಂದಲ್ಲ ಎರಡಲ್ಲ ಹನ್ನೆರಡು ವರ್ಷ, ಶಿಲ್ಪಿಯಂತೆ ಶಿಷ್ಯನ ಮನಸ್ಸನ್ನು ಕಡೆದು ದೊರೆಸ್ವಾಮಿಯನ್ನು ' ವೀಣೆ ವಿದ್ವಾಂಸ 'ನನ್ನಾಗಿ ಮಾಡಿದರು. ವೆಂಕಟಗಿರಿಯಪ್ಪನವರ ವಾದ್ಯವಾದನವನ್ನು ಯಾರಾದರೂ ಅವರ ಮುಂದೆ ಹೊಗಳಿದರೆ ಅವರು ಹೇಳುವ ಮಾತು ' ನಮ್ಮ ದೊರೆಸ್ವಾಮಿ ವೀಣೆ ಕೇಳಿದ್ದೀರಾ?' ಎಂದು. ವೆಂಕಟಗಿರಿಯಪ್ಪನವರು ಗುರುವಾಗಿ ದೊರೆತುದು. ದೊರೆಸ್ವಾಮಿ ಅಯ್ಯಂಗಾರ್ಯರ ಪುಣ್ಯ ವಿಶೇಷ. ಆಳಿದ ಮಹಾಸ್ವಾಮಿಯವರು ೧೯೩೩ರಲ್ಲಿ ದೊರೆಸ್ವಾಮಿಯವರನ್ನು ಅರಮನೆಯ ವಾದ್ಯಮೇಳಕ್ಕೆ ಸೇರಿಸಿಕೊಂಡು ಒಂಬತ್ತು ವರ್ಷಗಳಾನಂತರ ೧೯೪೨ರಲ್ಲಿ ಅವರನ್ನು ಅರಮನೆ ವಿದ್ವಾಂಸರನ್ನಾಗಿ ಪರಿಗ್ರಹಿಸಿದರು. ಗುರು ಕರುಣೆಯಿಂದ ಪ್ರಭು ಕಟ್ಟಾಕ್ಷಬಿತ್ತು ದೊರೆಸ್ವಾಮಿಯವರ ಮೇಲೆ. ಈ ವೇಳೆಗಾಗಲೇ ದೊರೆಸ್ವಾಮಿ ವೆಂಕಟಗಿರಿಯಪ್ಪನವರೊಂದಿಗೆ ಮದರಾಸಿಗೆ ಹೋಗಿ ನುಡಿಸಿ ಬಂದಿದ್ದರು. ೧೯೩೯ರಲ್ಲಿ ಮದರಾಸು, ತಿರುಚಿನಾಪ ಆಕಾಶವಾಣಿಯಲ್ಲಿ ನುಡಿಸಿದರು. ೧೯೪೧ರಲ್ಲಿ ದೆಹಲಿ, ಸಿನ್ನಾ ನಗರಗಳಿಗೆ ಹೋಗಿ ' ಕರ್ನಾಟಕ ಸಂಗೀತ ಸಭೆ 'ಯ ಆಶ್ರಯದಲ್ಲಿ ಕಛೇರಿ ಮಾಡಿದರು. ೧೯೪೫ರಲ್ಲಿ ಹೈದರಾಬಾದಿನ ತ್ಯಾಗರಾಜ ಉತ್ಸವಕ್ಕೆ ಹೋಗಿ ನುಡಿಸಿ ಅಲ್ಲಿನ ರಸಿಕರಿಂದ ಸ್ವರ್ಣಪದಕವನ್ನು ಪಡೆದರು. ಅದೇ ವರ್ಷ ಡಿಸೆಂಬರಿನಲ್ಲಿ * ಮದರಾಸು ಅಕೆಡಮಿ 'ಯ ವಿದ್ವನ್ಮಣಿಗಳ ಮುಂದೆ ನುಡಿಸಿ ಅವರ ಮೆಚ್ಚು ಗೆಯನ್ನು ದೊರಕಿಸಿಕೊಂಡರು. ಮದರಾಸು, ತಿರುಚಿನಾಪಳ್ಳಿ, ಹೈದರಾ