ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದೊರೆಸ್ವಾಮಿ ಅಯ್ಯಂಗಾರ್ಯ ೩೩ ಬಾದು, ಬೆಂಗಳೂರು ಸಂಗೀತ ರಸಿಕರಿಗೆ ದೊರೆಸ್ವಾಮಿ ಅವರ ವೀಣಾವಾದನು ಹುಚು ಹಿಡಿಸಿದೆಯೆಂದರೆ ಅತಿಶಯೋಕ್ತಿಯಾಗಲಾರದು. . ಸಂಗೀತಾಭ್ಯಾಸದ ಜತೆಗೆ ದೊರೆಸ್ವಾಮಿ ಅಯ್ಯಂಗಾರ್ಯರು ಕಾಲೇಜ್ ಶಿಕ್ಷಣವನ್ನು ಮುಂದುವರಿಸಿ ೧೯೪೪ರಲ್ಲಿ ಬಿ.ಎ. ಡಿಗ್ರಿಯನ್ನು ದೊರಕಿಸಿ ಕೊಂಡುದು ಹೆಚ್ಚಿನ ವಿಷಯ. ಸಂಗೀತಗಾರರ ವಿದ್ಯಾವಿಹೀನತೆ, ಅಸಂ ಸ್ಕೃತಿಗಳೇ ಬಹುಮಟ್ಟಿಗೆ ಸಂಗೀತದ ಪ್ರಗತಿಗೆ ಕಂಟಕವಾಗಿರುವಾಗ ಸುಶಿಕ್ಷಿತ ತರುಣರು ಸಂ\ತವನ್ನು ಒಂದು ಉದ್ಯೋಗವನ್ನಾಗಿ ಆಯ್ತು ರೂಢಿಸುವು ದಕ್ಕೆ ಮುಂದೆ ಬರುತ್ತಿರುವುದು ಶುಭಚಿನ್ನೆ, ಇಂತಹ ಸುಶಿಕ್ಷಿತ ಕಲಾವಿದ ರಿಂದ ನಾಡು ಹೆಚ್ಚಿನ ಸೇವೆಯನ್ನು ನಿರೀಕ್ಷಿಸುತ್ತದೆ. ದೊರೆಸ್ವಾಮಿ ಅಯ್ಯಂಗಾರ್ಯರ ವೀಣಾವಾದನದಲ್ಲಿ ಅಪೂರ್ವ ನಾದ ಸಂಸತ್ತಿದೆ. ಅವರ ವೀಣೆಯ ಒಂದು ಮಾತಿಗೆ ಜಡಪ್ರಕೃತಿಯೆದ್ದು ಲಾಸ್ಯ ವಾಡುತ್ತದೆ. ಜನ್ಯ ಜನಕರಾಗಗಳನ್ನು ಒಂದೇ ಬಗೆಯ ಆತ್ಮಸ್ಥೆರ್ಯ ದಿಂದ ನುಡಿಸುತ್ತಾರೆ. ಎಲ್ಲ ಪ್ರಯಾಸದ ಆಭಾಸವಾಗಲಿ, ಅತಿ ಬುದ್ದಿ ಪ್ರದರ್ಶನದ ಅವಿವೇಕವಾಗಲಿ ಕಂಡು ಬರುವುದಿಲ್ಲ. ಸಂಡಿತ ಪಾಮರ ರಿಬ್ಬರನ್ನೂ ಮೆಚ್ಚಿಸಿ ಒಲಿಸಿಕೊಳ್ಳುವ ಜಾಣ್ಮ ಇವರಿಗಿದೆ. ತಾನಗಳನ್ನು ಬಿಡಿಸಿ ಬಿಡಿಸಿ ರಸಸೌಧವನ್ನು ಕಟ್ಟಿ, ಮನಸ್ಸಿನ ಮೇಲೆ ಓಜಸ್ವೀ ಪರಿಣಾಮ ವಾಗುವ ಹಾಗೆ ಮಾಡುತ್ತಾರೆ ದೊರೆಸ್ವಾಮಿ, ಕಾಂಬೋದಿ, ಭೈರವಿ, ಕಲ್ಯಾಣಿ, ಶಹನಾ, ಕಾಸಿ ರಾಗಗಳಲ್ಲಿ ದೊರೆಸ್ವಾಮಿ ಹೆಚ್ಚಿನ ಸಿದ್ಧಿ ಗಳಿಸಿ ದ್ದಾರೆ. ರಾಗವಿಸ್ತಾರದಲ್ಲಿ ಹೆಚ್ಚಿನ : ಮನೋ ಧರ್ಮ' ಬೇಕೆನಿಸಿದರೂ ವಯೋಧರ್ಮದ ದೃಷ್ಟಿಯಿಂದ ಈಗಿನ ಪರಿಣತೆ ಸಾಧಾರಣವಾದುದಲ್ಲ. ಅನುಭವ ಬೆಳೆಯುತ್ತಾ, ವಿಚಾರ ವಿಕಾಸವಾಗುತ್ತಾ ದೊರೆಸ್ವಾಮಿ ಅವರ ವಾದ್ಯವಾದನ ಸಂಗೀತ ಪ್ರಪಂಚದಲ್ಲಿ ಒಂದು ವಿಶಿಷ್ಟ ಸ್ಥಾನ ಗಳಿಸುವುದೆಂಬ ದೃಢ ವಿಶ್ವಾಸ ನನಗಿದೆ. ತಮ್ಮ ಗುರುಗಳಾದ ವೆಂಕಟಗಿರಿಯಪ್ಪನವರ ಕಲಾನೈಪುಣ್ಯವನ್ನು ದೊರೆಸ್ವಾಮಿ ಬಹಳ ಮೆಚ್ಚುತ್ತಾರೆ. ಇವರ ಎಲ್ಲ ಶ್ರೇಯಸ್ಸಿಗೆ ಇವರ ವಿನಯ, ಗುರುಭಕ್ತಿಯೇ ಕಾರಣ, ಇತರ ವಿದ್ವಾಂಸರ ಪ್ರತಿಭೆಯನ್ನು ಮೆಚ್ಚಿಕೊಂಡು, ಅವರ ವಿದ್ಯಾವೈಭವವನ್ನು ಪುರಸ್ಕರಿಸುವುದಕ್ಕೆ ದೊರೆ