ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಾರ್ಶ್ವನಾಥ ನೈ, ಅಳತೇಕರ್‌ ಈಶದ ಪ್ರಗತಿಗೆ ಅದರ ರಾಜಕಾರಣ, ಆರ್ಥಿಕ ಸಮಸ್ಯೆ, ಶಿಕ್ಷಣ, ಲಲಿತ * ಕಲೆಗಳು ಹಾಸುಹೊಕ್ಕಾಗಿ ಹೊಂದಿಕೊಂಡಿವೆ. ಒಂದನ್ನು ಬಿಟ್ಟು ಒಂದನ್ನು ಬೆಳಸುತ್ತೇವೆಂದು ಹೊರಡುವುದು ಜಾಣತನವಲ್ಲ. ದೇಹ ಸಂಪುಷ್ಟವೂ ಸರ್ವಾ೦ಗಸುಂದರವೂ ಆಗಬೇಕಾದರೆ ಅದರ ಎಲ್ಲ ಅಂಗಾಂಗ ಗಳೂ ಪ್ರಮಾಣಬದ್ಧವಾಗಿ ಬೆಳೆಯಬೇಕು. ಇಂದಿನ್ನೂ ಭಾರತಕ್ಕೆ ಆ ದೃಷ್ಟಿ ಬಂದಿಲ್ಲ. ಲಲಿತ ಕಲೆಗಳು ವಿಹಾ "ರವ ಕುಲ್ಲ ಜಗತ್ತನ್ನು ಬಿಟ್ಟು ಹೊರಬಂದಿಲ್ಲ. ಮಾನವ ವಿಕಾಸಕ್ಕೆ, ರಾಷ್ಟ್ರದ ಉತ್ಕರ್ಷಕ್ಕೆ ಲಲಿತ ಕಲೆಗಳು ಪರನು ಸಾಧನವೆಂಬ ದೃಷ್ಟಿ ಇನ್ನೂ ಬೆಳೆದಿಲ್ಲ. ಇದಕ್ಕೆ ನಮ್ಮ ಮುಂದಾಳುಗಳ ಸಂಕುಚಿತ ದೃಷ್ಟಿ, ಯೇ ಕಾರಣ. ಸ್ವತಂತ್ರ ನಾಟಕ, ಸಂಗೀತ, ಚಿತ್ರಕಲಾ, ಶಿಲ್ಪ, ವಾಸ್ತುಶಿಲ್ಪ .ಗಳನ್ನು ಬೆಳೆಸಿದ ಭಾರತ ಇಂದು ಪರಕೀಯರ ಬಾಯೆಂಜಲಿಗೆ ಕೈಯಾನು ತಿದೆ. ನವೀನತೆಯ ದೃಷ್ಟಿಯಲ್ಲಿ ನಡೆದ ಪ್ರಯೋಗಗಳು ಭಾರತದ 'ಲಲಿತಕಲೆಗಳ ವ್ಯಕ್ತಿತ್ವವನ್ನು ಅಳಿಸಿಹಾಕಿವೆ. ಸ್ವತಂತ್ರ ಭಾರತ ಜಗತ್ತಿಗೆ ನೀಡಬೇಕಾದ ಕಾಣಿಕೆಗಳಲ್ಲಿ ಅದರ