ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು | ವಿಶಿಷ್ಟ ಕಲಾವೈಭವವೂ ಒಂದು. ಫ್ರಾನ್ಸ್ ನವನವ ಮಾರ್ಗಗಳನ್ನು ಆವಿಷ್ಕರಿಸಿ ಐರೋಪ್ಯ ಜಗತ್ತಿನ ಕಲಾರಂಗದ ಅಭಿಷಿಕ್ಕ ಸಮ್ರಾಟನಾ ಯಿತು ; ರಷ್ಯಾ ಜನತೆಯ ಕಲಾಕೇಂದ್ರಗಳನ್ನರಸಿ ಅವುಗಳನ್ನು ತನ್ನ ಅನುಕೂಲತೆಗೆ ಅಳವಡಿಸಿಕೊಂಡು ಒಂದು ಮಾದರಿ ಹಾಕಿಕೊಟ್ಟಿತು. ಭಾರತದ ಮುಂದೆ ಇವೆರಡು ಆದರ್ಶಗಳು ನಿಂತಿವೆ. ಈ ಆದರ್ಶಗಳಿಂದ ಸ್ಫೂರ್ತಿ ಪಡೆದು ತನ್ನ ಸಂಸ್ಕೃತಿಗನುಗುಣವಾದ ರೀತಿಯಲ್ಲಿ ಭಾರತ ವಿಕಸಿಸ ಬೇಕು. ಅನುಕರಣ ಪ್ರಗತಿಗೆ ವಿಘಾತಕ. ನಮಗೆ ಬೇಕಾದುದು ಅನು. ಕರಣವಲ್ಲ ಅನುರಣನ ಸದ್ಯಕ್ಕೆ ಇತರ ಲಲಿತಕಲೆಗಳನ್ನು ಬಿಟ್ಟು ಕೊಟ್ಟು ನಾಟಕ ಪ್ರಪಂಚ ವನ್ನು ವಿಚಾರಮಾಡಬಹುದು. ಹಿಂದೊಮ್ಮೆ ಗ್ರೀಕರಿಗೆ ನಾಟಕಕಲೆ ಯನ್ನು ಭಾರತ ಬಳುವಳಿಯಾಗಿ ಕೊಟ್ಟಿತು. ಕಾಳಿದಾಸ, ಶೂದ್ರಕ, ವಿಶಾಖದತ್ತ ಮೊದಲಾದ ಪ್ರತಿಭಾಶಾಲಿಗಳು ಭಾರತ ರಂಗಭೂಮಿಯನ್ನು ಜಗತ್ತಿನ ಆದರ್ಶ ರಂಗಭೂಮಿಯನ್ನಾಗಿ ಅಳವಡಿಸಿದರು. ನಾಟಕಕಲೆ ಯಲ್ಲಿ ಭಾರತದ ಪರಂಪರೆ ಭವ್ಯವಾದುದು. ಆದರಿಂದು ಪರಂಪರೆ ಶೂನ್ಯವಾಗಿದೆ ; ಪ್ರಾಗತಿವಾಗಿಲ್ಲ. ನಾಟಕ ಕಲೆ ನಾಮಶೇಷವಾಗಿದೆ. ಈ ಹಿಂದಿನ ಪರಂಪರೆ ಇಂದಿನ ಆವಶ್ಯಕತೆಗಳಿಗೆ ಅಳವಡುವುದಿಲ್ಲ. ರಂಗ ಭೂಮಿ ಬಂಡವಾಳಗಾರರ ಕೈಗೊಂಬೆಯಾಗಿ ಜನತೆಯ ಅಜ್ಞಾನ, ಕೀಳು ಅಭಿರುಚಿಗಳ ಆಧಾರದ ಮೇಲೆ ಬಲಿಯಾಗುವ ಪರಿಸ್ಥಿತಿ ಹೋಗಿದೆ. ಜನಕ್ಕೆ ಬೇಕಾದುದು ಅವರಿಗೆ ಅಫೀಮುಕೊಟ್ಟು ಮಲಗಿಸುವ ವಿಲಾಸೀ ರಂಗ ಭೂಮಿಯಲ್ಲ. ಅವರ ಆಶೋತ್ತರಗಳನ್ನು , ಅವರ ಸುಖದುಃಖಗಳನ್ನು, ಅವರ ಸಮಸ್ಯೆಗಳನ್ನು ಬಿಡಿಸಿ ತೋರಿಸಿ ಅವುಗಳ ಮೇಲೆ ಬೆಳಕು ಚೆಲ್ಲುವ ರಂಗಭೂಮಿ ಬೇಕು.' ಜನತೆಯ ಉದ್ದಾರ ಜನತೆಯಿಂದಲೇ ಆಗಬೇಕು. ಅವರ ರಂಗಭೂಮಿ ಅವರಲ್ಲಿಯೇ ಹುಟ್ಟಿ ಅವರ ಸಾಧನ, ಶ್ರದ್ದೆಯಿಂದಲೇ ಬೆಳೆಯಬೇಕು. ಜನತಾರಂಗಭೂಮಿ ಜನತೆಯ ವಿಹಾರಕ್ಕೆ ಒಂದು ಪವಿತ್ರ ಸಾಧನ ವಾಗುವುದಲ್ಲದೆ ಅನಿರೀಕ್ಷಿತವಾಗಿ ಅವರ ವಿಕಾಸವನ್ನೂ ಸಾಧಿಸುತ್ತದೆ.