ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

4 ಳ ತೆಕಂ * ೩೭ 1 ಕಲೆಯ ಗುರಿ ಜನತೆಗೆ ಆತ್ಮಸ್ಥೆರ್ಯ, ಬದುಕಿನಲ್ಲಿ ಹರ್ಷ, ಮಡಿಮೆಯಲ್ಲಿ ವಿಶ್ವಾಸ ಹಾಗೂ ಆದರ್ಶ ರಾಷ್ಟ್ರ ನಿರ್ಮಾಣಗಳೆಂದು ಒಪ್ಪುವುದಾದರೆ ಆ ಕೆಲಸವನ್ನು ಜನತಾ ರಂಗಭೂಮಿಗಿಂತ ಯಶಸ್ವಿಯಾಗಿ ಸಾಧಿಸುವ ಸಾಧನ ಬೇರೊಂದಿಲ್ಲ. ಜನತೆಯ*ರಾಷ್ಟ್ರೀಯ ರಂಗಭೂಮಿಯನ್ನು ಸ್ಥಾಪಿಸುವ ಪ್ರಯತ್ನ ಕಲ್ಕತ್ತೆ, ಮುಂಬಯಿ, ಬೆಂಗಳೂರಿನಲ್ಲಿ ಆಗಾಗ್ಗೆ ನಡೆದಿದೆ. ಆದರೆ ಪ್ರಯತ್ನ ಪ್ರಯತ್ನವಾಗಿಯೇ ಉಳಿದಿದೆ. ಈ ಮಹಲಸಕ್ಕೆ ಮನಸ್ಸು ಕೊಟ್ಟು, ೧೯೩೮ರಿಂದ ತ್ರಿಕರಣಪೂರ್ವಕ ನಾಗಿ ದುಡಿಯುತ್ತಿರುವವರಲ್ಲಿ ಶ್ರೀ ಪಾರ್ಶ್ವನಾಥ ಅಳತೇಕರರೊಬ್ಬರು. ಉದಯೋನ್ಮುಖ ಕಲಾವಿದರನ್ನು ಈ ಕೆಲಸಕ್ಕೆ ಸಿದ್ಧಗೊಳಿಸಲು ೧೯೩೮ರಲ್ಲಿ * ನ್ಯಾಷನಲ್ ಥಿಯೇಟರ್ ಅಕೆಡಮಿ ' (The National Theatre Academy) ಸಂಸ್ಥೆಯನ್ನು ಮುಂಬಯಿಯಲ್ಲಿ ಸ್ಥಾಪಿಸಿ ಅಳತೇಕರರು ಸ್ವಂತ ಖರ್ಚಿನಿಂದ ನಡೆಸಿಕೊಂಡು ಬಂದಿದ್ದಾರೆ. ಇಂಥ ಸಂಸ್ಥೆ ನಡೆಸಲು ಅಳತೇಕರರು ಎಲ್ಲ ವಿಧದಿಂದಲೂ ದಕ್ಷರೂ ಸಮರ್ಥರೂ ಆಗಿದ್ದಾರೆ. ೧೯೩೨ರಿಂದ ಅವರಿಗೆ ಸಿನಿಮಾ ಪ್ರಪಂಚದ ಪರಿಚಯ. ಮಕಚಿತ್ರ (Silent Pictures) ಯುಗದಲ್ಲಿ ಸುಮಾರು ೧೦ ಚಿತ್ರಗಳನ್ನು ದಿಗ್ನರ್ತಿಸಿದ್ದಾರೆ. ಹಿಂದಿ, ಮರಾಟಿ, ಕನ್ನಡ, ತಮಿಳು ಭಾಷಾ ಚಿತ್ರಗಳನ್ನು ಅಳತೇಕರರು ದಿಗ್ದರ್ಶಿಸಿದ್ದಾರೆ. ಎಳತೇಕರರು ಉತ್ತಮ ದಿಗ್ದರ್ಶಕರು ಹೇಗೋ ಹಾಗೆ ಉತ್ತಮ ನಟರು. ಚಿತ್ರಗಳಲ್ಲಿ ಪಾತ್ರ ವಹಿಸಿದ್ದಾರೆ ; ನಾಟಕಗಳಲ್ಲಿ ಪಾತ್ರ ವಹಿಸಿ ದ್ದಾರೆ. ಮಹಾರಾಷ್ಟ್ರದ ಪ್ರಮುಖ ಪ್ರಗತಿಶೀಲ ಸಾಹಿತಿಗಳಾದ ಮಾಮಾ ನರೇರಕರ್ ಅವರ ಹಲವು ನಾಟಕಗಳನ್ನು ಆಡಿಸಿ, ಅವುಗಳಲ್ಲಿ ಪಾತ್ರವಹಿಸಿ ಮಹಾರಾಷ್ಟ್ರ ರಂಗಭೂಮಿಯ ಪುನರುಜ್ಜಿವನಕ್ಕೆ ಅಳತೇಕರರು ನೆರ ವಾಗಿದ್ದಾರೆ. ತಮ್ಮ ನ್ಯಾಷನಲ್ ಥಿಯೇಟರ್ ಅಕೆಡಮಿಗೆ ನೆರವು ದೊರಕಿಸಲು ಒಳತೇಕರರು ಸಂಚಾರ ಕೈಗೊಂಡು ಬೆಂಗಳೂರಿಗೆ ಬಂದಿದ್ದರು. ಇಲ್ಲಿ