ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦ . ಕರ್ನಾಟಕದ ಕಲಾವಿದರು ನಂತನಾಗಲಿ ಎಂದು ತಂದೆಯ ಇಚ್ಛೆ. ಮಗ ತಂದೆಯ ನಿರೀಕ್ಷೆಗಿಂತ ಹೆಚ್ಚು ಕೀರ್ತಿವಂತನಾದ ; ಬ್ಯಾರಿಸ್ಟರ್ ಆಗಿಯಲ್ಲ-ನೃತ್ಯ ಕಲಾ ಪ್ರವೀಣ ನಾಗಿ, ತಂದೆಯ ಆಗ್ರಹಕ್ಕೆ ತುತ್ತಾಗಿ ಮಗ ನೃತ್ಯ ಕಲೆಯನ್ನು ಅಭ್ಯಾಸ ಮಾಡಬೇಕಾಯಿತು. ತಾಯಿಯ ಮೂಕ ಸಹಾನುಭೂತಿಯೇ ತರುಣ ಕಲಾ ದಿಕುವಿನ ಬೆಂಬಲ, ಈ ದೆಸೆಯಲ್ಲಿ ರಾಮಗೊಪಾಲರನ್ನು ನೋಡಿದ ಮೈಸೂರಿನ ಯುವ ರಾಜರು ಶ್ರೀ ಕಂಠೀರವ ನರಸಿಂಹರಾಜ ಒಡೆಯರವರು- ಅವರಲ್ಲಿ ಹುದು ಗಿದ್ದ ಕಲಾಚೇತನವನ್ನು ಮೆಚ್ಚಿ ಜಾಗೃತಗೊಳಿಸಿದರು. ರಾಮಗೋಪಾ ಲರು ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ದೊರೆಯುತ್ತಿದ್ದ ನಟವರಲ್ಲಿ ಆರಂ ಭಿಸಿದರು. ಮನಸ್ಸು ಅಲ್ಲಿಗೆ ತೃಪ್ಯವಾಗಲಿಲ್ಲ. ನೃತ್ಯಕಲೆಯಲ್ಲಿ ಕಲಿಯುವುದು ಬಹಳ ಉಳಿದಿತ್ತು. ಆ ಹಂಬಲವೇ ಅವರನ್ನು ಕೇರಳ ಕಲಾಮಂಡಲ ಕೋಯಿತು. ಅಲ್ಲಿ ಕಥಾಕಳಿ ಸಂಪ್ರದಾಯವನ್ನು ಚೆನ್ನಾಗಿ ಅರಿತು ಪಂದ ನಲ್ಲೂರು ಖಾನಾಕ್ಷಿ ಸುಂದರಂ ಪಿಳ್ಳೆಯವರಲ್ಲಿ ಭರತನಾಟ್ಯ ಅಭ್ಯಸಿಸಲು ಹೋದರು. ಶಿಷ್ಯನ ಪ್ರತಿಭೆಯನ್ನು ಕಂಡ ಮಾನಾಕ್ಷಿಸುಂದರಂ ಪಿಳ್ಳೆ ಯವರು ರಾಮಗೋಪಾಲರಿಗೆ ( ಅಭಿನಯ ' ಕಲೆಯನ್ನು ಅರೆದು ಹೊಯ್ದರು. ರಾಮಗೋಪಾಲರ ಕಲಾಪರಿಣತಮತಿಯನ್ನು ಕುರಿತು ಮಾನಾಕ್ಷಿಸು೦ದರ೦ಪಿಳ್ಳೆ, ಹೀಗೆ ಹೇಳಿದ್ದಾರೆ : (( ಇದುವರೆಗೆ ಭರತನಾಟ್ಯದ * ಲಾಸ್ಯಭಾಗ'ವನ್ನು ಹೆಣ್ಣು ಮಕ್ಕಳು ಪ್ರದರ್ಶಿಸುತ್ತ ಬಂದಿದ್ದಾರೆ. ನನ್ನ ಶಿಷ್ಯರಲ್ಲಿ ಬಹುಮಂದಿ ಹೆಣ್ಣು ಮಕ್ಕಳೇ ಆಗಿದ್ದಾರೆ. ಭರತ ನಾಟ್ಯದ ಬಹು ಭಾಗವನ್ನು ಅದರ ವೀರಧೀರಭಾವ ಭಾಗವನ್ನು (ತಾಂಡವ) ಪುರು ಷರೇ ಪ್ರದರ್ಶಿಸಬೇಕೆಂದು ಅರ್ಜುನ ಶಾಸ್ತ್ರ' ವಿಧಾಯಕ ಮಾಡುತ್ತದೆ. ಅದರಲ್ಲಿ ಬರುವ ತವು ಜಾತಿಗಳನ್ನು ಸ್ತ್ರೀಯರು ಅಭಿನಯಿಸಿದರೆ ಬಹು ವಕ್ರವಾಗಿ, ಒರಟಾಗಿ ಕಾಣುತ್ತದೆ. ನಟನನಾಡಿನಾರ್ ಬಗೆಯ ತಿನನ್ನತ್ಯ, ಶ್ರೀಕೃಷ್ಣ ವಿಲಾಸಗಳನ್ನು ಪುರುಷರೇ ಪ್ರದರ್ಶಿಸಬೇಕು. ನರ್ತಕನಿಗೆ ಬೇಕಾದ ಪರಿಪೂರ್ಣ ದೇಹಪ್ರಮಾಣ, ಶಕ್ತಿ, ಲಾವಣ್ಯಗಳಿಂದ ಕೂಡಿದ ರಾಮಗೋಪಾಲರಿಗೆ 'ನಾನು ತಾಂಡವನೃತ್ಯವನ್ನು ಸಂಪೂರ್ಣವಾಗಿ ಪಾಠ ಹೇಳಿದ್ದೇನೆ.”