ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಜಗತ್ತನ್ನು ಮಹಾಸಮರ ಕಬಳಿಸಿತು. ರಾಮಗೋಪಾಲರು ತಮ್ಮ ಪ್ರವಾಸ ನಿಲ್ಲಿಸಿ ಮಾತೃ ಭೂಮಿಗೆ ಮರಳಿ ಬಂದರು. ಭಾರತಾದ್ಯಂತ ಪ್ರವಾಸ ಮಾಡಿ ನೃತ್ಯ ಪ್ರದರ್ಶನಮಾಡಿದರು. ೧೯೪೫ರಲ್ಲಿ ಮುಂಬಯಿ, ದೆಹಲಿ ನಗರಗಳಲ್ಲಾದ ಅಖಿಲ ಭಾರತ ನೃತ್ಯ ಸಮಾರಂಭಗಳಲ್ಲಿ ಭಾಗ ವಹಿಸಿ ಭಾರತದ ಅದ್ವಿತೀಯ ನರ್ತಕರೆಂದು ಖ್ಯಾತಿಗಳಿಸಿದರು. ಭಾರತದ ನೃತ್ಯ ಕಲಾ ವೈಭವದ ಕಡೆಗೆ ಜಗತ್ತಿನ ಗಮನ ಮೊದಲು ಸೆಳೆದವಳು ರಷ್ಯದ ಆನಾ ಪವಲೋವಾ, ಪ್ರಸಿದ ನರ್ತಕಿಯಾದ ಈಕೆ ಭಾರತಕ್ಕೆ ಬಂದು ಇಲ್ಲಿನ ಬಗೆ ಬಗೆಯ ಸಂಪ್ರದಾಯಗಳ ಪರಿಚಯಮಾಡಿ ಕೊಂಡು, ಭಾರತದಲ್ಲಿಯೂ ನೃತ್ಯ ಪ್ರದರ್ಶನಗಳನ್ನಿತ್ತಳು. ಆಕೆಯ ಶಿಷ್ಯ ವರ್ಗದಲ್ಲಿದ್ದ ಉದಯಶಂಕರ್ ಮುಂದೆ ಯೂರೋಪ್, ಅಮೇರಿಕಾ, ಫ್ರಾನ್ಸ್ ದೇಶಗಳಿಗೆ ಹೋಗಿ ಭರತನೃತ್ಯ ಕಲೆಗೆ ವಿದೇಶಗಳಲ್ಲಿ ವಿಶೇಷ ಮನ್ನಣೆಯನ್ನು ದೊರಕಿಸಿದರು. ಇವರಿಬ್ಬರ ಪ್ರಯತ್ನದಿಂದ ಇಂದು ಭಾರತದಲ್ಲಿ ನೃತ್ಯ ಕಲೆಯ ಪರನು ಜಾಗೃತಿಯುಂಟಾಗಿದೆ. ಕುಲೀನ ಸ್ತ್ರೀ ಯರು ನೃತ್ಯಕಲೆಯನ್ನು ರೂಢಿಸಿಕೊಳ್ಳುವುದು ಪಾಪಕರವಲ್ಲವೆಂಬ ಭಾವನೆ ಮೊಳೆಯಲು ಕಾರಣವಾಗಿದೆ. ರಾಮಗೋಪಾಲರ ಕಲಾಸಾಧನೆ ಉದಯಶಂಕರರ ಸಾಧನೆಗಿಂತಲೂ ನಾಲ್ಕು ಹೆಜ್ಜೆ ಮುಂದೆ ಹೋಗಿದೆ. ಆರಂಭದಲ್ಲಿ ವಿದೇಶ ಸಂಪ್ರದಾಯಗಳ ಸಂಬಂಧವಿದ್ದು ದಕ್ಕೋ ಏನೋ ಉದಯಶಂಕರರ ನೃತ್ಯಗಳಲ್ಲಿ ದೇಶೀಯ ಕಡಿಮೆ. ರಷ್ಯ ಬಾಲೆ (Ball+t) ಪದ್ದತಿ ಅವರ ಮೇಲೆ ವಿಶೇಷ ಪರಿ ಣಾಮವನ್ನುಂಟುಮಾಡಿದೆ. ಪ್ರಾಚ್ಯ ಪೌರಾತ್ಯ ಪದ್ದತಿಗಳ ಸಂಕಲನ ಅವರ ಕಲಾ ಕ್ರಿಯೆಯಲ್ಲಿ ಕಂಡುಬರುತ್ತದೆ. ರಾಮಗೋಪಾಲರು ಆರಂಭ ದಲ್ಲಿಯೇ ಭರತನಾಟ್ಯವನ್ನು ಆಶ್ರಯಿಸಿದರು. ಮುಂದೆ ಕಥಾಕಳಿ, ಕಥಕ್, ಮಣಿಪುರಿ ಸಂಪ್ರದಾಯಗಳನ್ನವಲಂಬಿಸಿದರು. ಭಾರತದ ವಿವಿಧ ಸಂಪ್ರ ದಾಯಗಳನ್ನು ರಾಮಗೋಪಾಲರು ಸಶಾಸ್ತ್ರೀಯವಾಗಿ ಪ್ರದರ್ಶಿಸಬಲ್ಲರು. ಸಪ್ರಮಾಣವಾದ ದೇಹ, ಸುಂದರವಾದ ಅಂಗಾಂಗಗಳು, ಮಧುರ ಮುಖಭಂಗಿ ಇವಿಷ್ಟು ರಾಮಗೊಪಾಲರಿಗೆ ದೇವದತ್ತ, ನೈಸರ್ಗಿಕ ಆನು ಕೂಲ್ಯಗಳನ್ನು ಕಲೆಗಾಗಿ ರೂಪಿಸಿಕೊಳ್ಳಲು ಅವರು ಮಾಡಿರುವ ಸಾಧನೆ