ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಮಗೋಪಾಲ್ ರಣಸಾಧನೆ. ದೇಹದ ಪ್ರತಿಯೊಂದು ಭಾಗದ ಮೇಲೂ ಅವರಿಗೆ ಪೂರ್ಣ ಸ್ವಾಮ್ಯ, ಮೈಯ್ಯ ಮಾಂಸಖಂಡಗಳ ಆಂದೋಲನದಲ್ಲಿ ಸುಳಿಗಾಳಿಯನ್ನೂ ಸಮುದ್ರದ ತೆರೆಗಳನ್ನೂ ಯಥಾವತ್ತಾಗಿ ಚಿತ್ರಿಸಬಲ್ಲ ಪ್ರತಿಭೆ. ರಸಭಾವ ಗಳು ಮುಖದ ಮೇಲೆ ಸಹಜವಾಗಿ ಸರಳವಾಗಿ ಮೂಡುತ್ತವೆ. ಎಲ್ಲಿಯೂ ಪ್ರಯತ್ನ ಪ್ರಯಾಸದ ಸುಳಿವಿಲ್ಲ. ರಾಮಗೋಪಾಲರ ನೃತ್ಯ ಭಾರತದ ನಾಲ್ಕು ಪ್ರಧಾನ ಸಂಪ್ರದಾಯಗಳ ನೃತ್ಯಗಳಿಂದ ಕೂಡಿರುತ್ತದೆ. ಅವರೇ ನಾಗನೃತ್ಯ, ತಿಲ್ಲಾನ, ರಜಪೂತ ಪ್ರೇಮ, ಸಂಧ್ಯಾನೃತ್ಯಗಳನ್ನು ತನಿಯಾಗಿ ಅಭಿನಯಿಸುತ್ತಾರೆ. ಸಂಗಡಿ. ಗರೊಂದಿಗೆ ಅಲರಿಪು, ಸುಗ್ಗಿ ಇತ್ಯಾದಿ ನೃತ್ಯಗಳನ್ನು ಅಭಿನಯಿಸುತ್ತಾರೆ. ಅಲರಿಪು ಭಾರತನಾಟ್ಯ ಪದ್ಧತಿಗೆ ಸೇರಿದುದು. ಗತಿ, ವೇಗ, ಭಾವ, ಭಂಗಿಗಳ ವಿಶಿಷ್ಟ ಗುಣಗಳಿಂದ ಕೂಡಿದ್ದು, ಹಲವು ಕಡೆಯಿಂದ ನೃತ್ಯ ಕಾರ ತಾಳವಿನ್ಯಾಸ ಮಾಡಿ ದೇಹ ಲಾವಣ್ಯ ಪ್ರದರ್ಶನ ಮಾಡುತ್ತಾನೆ. ನಾಗನೃತ್ಯದಲ್ಲಿ ರಾಮಗೋಪಾಲರು ಕಥಾಕಳಿಯ ಜನಪದ ಪದ್ದತಿ ಯಲ್ಲಿರುವ ಸೊಬಗನ್ನು ಎತ್ತಿ ತೋರುತ್ತಾರೆ. ಹಾವಿನಂತೆ ನೃತ್ಯಕಾರನ ದೇಹ ಬಳಕುತ್ತದೆ. ನಾಗ ಮೈತ್ರಿ, ತೋಷಗಳೆರಡೂ ರಾಮಗೋಪಾಲರ ಸಿದ್ದ ಕಲೆಯಲ್ಲಿ ಮೂರ್ತಿಭವಿಸುತ್ತವೆ. ರಜಪೂತ ಪ್ರೇಮದಲ್ಲಿ ನಿರೀಕ್ಷೆಯ ಭಾವಕ್ಕೆ ಪ್ರಾಧಾನ್ಯ, ರಾಜ ಕುಮಾರ ಅಜ ಕಮಲಕೊಳದ ಬಳಿ ಕುಳಿತು ತನ್ನ ಪ್ರಿಯೆಯ ನಿರೀಕ್ಷಣೆ ಯಲ್ಲಿರುತ್ತಾನೆ. ಪ್ರಕೃತಿಯ ಸುಭಗ ಸೌಂದರ್ಯಕ್ಕೆ ಅವನ ಮನಸ್ಸು ಸೋಲುತ್ತದೆ. ಅದನ್ನು ರಸವತ್ತಾಗಿ ಅವನು ವರ್ಣಿಸುತ್ತಾನೆ. ಮುಗುಳಿನ ವಿಕಾಸ, ದುಂಬಿಯ ಮಧುಪಾನ ಇತ್ಯಾದಿ. ತನ್ನ ಪ್ರಿಯೆಗಾಗಿ ಸೊಗ ಸಾದ ಮಲ್ಲಿಗೆಮೊಗ್ಗುಗಳನ್ನಾಯ್ತು ಹೂ ಮಾಲೆ ರಚಿಸುತ್ತಾನೆ. ತಾರುಣ್ಯದ ಭವ್ಯವಿಲಾಸವೇ ಈ ನೃತ್ಯದ ಜೀವಜೀವಾಳ. ರಾಮಗೋಪಾಲರ ಕೈಯಲ್ಲಿ ಈ ವಸ್ತು ನರವೇರಿಸಿದ ಏಸುನಿಯ ಕುಸುಮ. ರಾಮಗೋಪಾಲರ ಕಲಾವೈಭವ ಪೂರ್ಣ ವಿಕಾಸಗೊಂಡಿರುವುದು, ಸಂಧ್ಯಾ ನೃತ್ಯದಲ್ಲಿ, ಸಂಜೆ ಸಮಯ. ಪರಶಿವ ಧ್ಯಾನಾಸಕ್ತನಾಗಿದ್ದಾನೆ. ಮುಳುಗುವ ಸೂರ್ಯದೇವನಿಗೆ ಪರಶಿವ ತನ್ನ ಭಕ್ತಿಯ ಕಾಣಿಕೆಯನ್ನು