ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬ ಕರ್ನಾಟಕದ ಕಲಾವಿದರು ಪಂಡಿತ ಜವಹರಲಾಲಜೀಯವರ ಆಣತಿಯಂತೆ ಅಮೇರಿಕೆಯಲ್ಲಿ ಜರುಗಿದ ಅಂತರ ರಾಷ್ಟ್ರೀಯ ನೃತ್ಯ ಕಲಾ ಮಹೋತ್ಸವಕ್ಕೆ ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ಹೋಗಿದ್ದರು. ಸುಮಾರು ಎರಡು ವರ್ಷಕಾಲ ಪ್ರವಾಸ ಮಾಡಿ, ಹೋದ ಹೋದಲ್ಲಿ ಭಾರತದ ಕೀರ್ತಿ ವಿಸ್ತರಿಸಿ ಇದೇ ತೆರಿಗೆ ಬಂದಿರುಗಿದ್ದಾರೆ. ರಾಮಗೋಪಾಲರ ಕಲಾಭವಿಷ್ಯ ಉಜ್ವಲವಾದುದು ಕಲಾಜ್ಯೋತಿ ಯನ್ನು ಭಾರತದಲ್ಲಿ ಶಾಶ್ವತವಾಗಿ ಬೆಳಗಿಸುವ ಕೆಲಸ ರಾಮಗೋಪಾಲ ರಿಂದ ಆಗುತ್ತದೆಯೆಂದು ನಾಡು ನಿರೀಕ್ಷಿಸುತ್ತಿದೆ. ಈ ಸಂದರ್ಭದಲ್ಲಿ ಕಲಾವಿದರಾದ ರಾಮಗೋಪಾಲರಿಗೆ ಒಂದೆರಡು ಸಲಹೆಗಳನ್ನೀಯಬಹುದು. ಭಿಲ್ಲರ ನೃತ್ಯ, ಸುಗ್ಗಿಯ ಕುಣಿತ ಜಾನಪದ ನೃತ್ಯಗಳು)ಗಳಲ್ಲಿ ಆದಷ್ಟು ಸಾಮಾನ್ಯ ಜನತೆಯ ಉಡುಗೆ ತೊಡಿಗೆಗಳನ್ನೆ ನರ್ತಕ ನರ್ತಕಿಯರು ಧರಿಸುವುದೊಳ್ಳೆಯದು. ಭಿಲ್ಲರ ನೃತ್ಯದಲ್ಲಿ ಗಂಡಸರು ಭಿಲ್ಲರಹಾಗೂ, ಹೆಂಗಸರು ಕಾಲೇಜು ಹುಡುಗಿಯರ ಹಾಗೂ ಇರುತ್ತಾರೆ, ಸಾಮಾನ್ಯ ವಾಗಿ ನೃತ್ಯ ಪ್ರದರ್ಶನಗಳೆಂದರೆ ಹಾವಿನ ನೃತ್ಯ, ಪತಂಗ ನೃತ್ಯ, ಬೇಟೆಗಾರ, ಶಿವಪಾರ್ವತಿ, ರಾಧಾಕೃಷ್ಣ ಇದ್ದೇ ಇರುತ್ತವೆ. ಒಂದೇ ನೃತ್ಯವನ್ನು ಹಲವು ನೃತ್ಯಕಾರರು ತಿರುಗಿಸಿ ಮರುಗಿಸಿ ಜನಕ್ಕೆ ಬೇಸರಗಳನ್ನುಂಟುಮಾಡಿದ್ದಾರೆ. ರಾಮಗೋಪಾಲರಂತಹ ಕ್ರಿಯಾಶಾಲಿಗಳಾದ ಕಲಾವಿದರು ಪುರಾಣಗಳಿಂದ, ಇತಿಹಾಸಗಳಿಂದ, ಸಂತರ ಚರಿತ್ರೆಗಳಿಂದ ಜಾನಪದ ಗೀತೆ ಕಥೆಗಳಿ೦ದ ವಸ್ತುಗಳನ್ನಾಯ್ದು ಕೊಂಡು ನೃತ್ಯಕ್ಕೆ ಅಳವಡಿಸಬಹುದು. ರಾಮಗೋಪಾಲರು ನೃತ್ಯನಾಟಕಗಳ ಪುನರುದ್ಧಾರಕ್ಕೆ ವಿಶೇಷ ಗಮನಕೊಡುತ್ತಿದ್ದಾರೆ. ಪ್ರಾಚೀನ ಭಾರತದಲ್ಲಿ ನೃತ್ಯ ಒಂದು ಬಿಡಿ ತುಂಡಾಗಿದ್ದಂತೆ ಕಂಡು ಬರುವುದಿಲ್ಲ. ಅದು ರಾಮಾಯಣ, ಭಾರತ ಕಥೆ ಗಳನ್ನು ಆದ್ಯಂತವಾಗಿ ನಿರೂಪಿಸುವ ಒಂದು ಸಾಧನವಾಗಿತ್ತು. ಕಾಲ ಕ್ರಮೇಣ ಆ ಸದ್ದತಿ ಮಾಯವಾಯಿತು. ನೃತ್ಯನಾಟಕಗಳಿಗೆ ಪಾಶ್ಚಾತ್ಯ ದೇಶಗಳಲ್ಲಿ ವಿಶೇಷ ಆದರ. ರಾಮಗೊಪಾಲರ ನೃತ್ಯನಾಟಕಗಳನ್ನು ಪಾಶ್ಚಾತ್ಯರು ಬಹುವಾಗಿ ಮೆಚ್ಚಿ ಕೊಂಡಾಡಿದ್ದಾರೆ. ಆದರೆ ನೃತ್ಯ ನಾಟಕಗ ಳನ್ನು ಕೂಡಿಸುವಾಗ ಅವುಗಳನ್ನು ಪಾಶ್ಚಾತ್ಯರ ಮುಂದೆ ಪ್ರದರ್ಶಿಸುವಾಗ