ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Cಮಗೊಪಾಲ್ ಅವು ಭಾರತೀಯ ಸಂಸ್ಕೃತಿಯ ಚಿತ್ರವನ್ನು ಯುಕ್ತರೀತಿಯಲ್ಲಿ ಒದಗಿಸು ವುದೇ ಎಂದು ರಾಮಗೋಪಾಲರು ಯೋಚಿಸಬೇಕು. ಭಾರತೀಯರ ಉಡುಗೆ ತೊಡಿಗೆ ಸಂಗೀತವನ್ನು ಪ್ರದರ್ಶಿಸಿದ ಮಾತ್ರಕ್ಕೆ ಅವು ಭಾರತೀಯ ವಾಗುವುದಿಲ್ಲ. ಭಾರತದ ಹೊರಗೆ ಅದರ ಕಲೆಯನ್ನೊಯ್ಯುವ ಪ್ರತಿಯೊಬ್ಬನ ಮೇಲೂ ಗುರುತರವಾದ ಜವಾಬ್ದಾರಿ ಇದೆ ಎನ್ನುವುದನ್ನು ಮರೆಯಬಾರದು. ರಾಮಗೋಪಾಲರು ವಸ್ತುವಿನಲ್ಲಿ ಲೀನರಾಗಿ ಸ್ಫೂರ್ತಿಯಿಂದ ನರ್ತಿ ಸಿದುದನ್ನು ನಾನು ನೋಡಿದ್ದೇನೆ ; ಬೇಸರದಿಂದ ನೃತ್ಯವಸ್ತುಗಳನ್ನು ತುಂಡ 5ಸಿ ಪ್ರದರ್ಶನ “ ಆಯಿತು' ಎನಿಸಿದ್ದನ್ನೂ ನೋಡಿದ್ದೇನೆ. ಕಲಾವಿದನಕಲಾ ಕ್ರಿಯೆ ಪ್ರೇಕ್ಷಕರ ಪ್ರಮಾಣದ ಮೇಲಾಗಲಿ, ಅವರ ಮೆಚ್ಚುಗೆ ತೆಗಳಿ ಕೆಯ ಮೇಲಾಗಲಿ ಅವಲಂಬಿಸಬಾರದು. ರಂಗ ಕಲಾವಿದನ ದೇವಾಲಯ, ತನ್ನ ದೇವಾಲಯಕ್ಕೆ ಬಂದ ಭಕ್ತ ಬಾಹ್ಯ ಪ್ರಪಂಚವನ್ನು ಸಂಪೂರ್ಣವಾಗಿ ಮರೆಯಬೇಕು. ಪ್ರೇಕ್ಷಕವರ್ಗದಲ್ಲಿರುವ ಹತ್ತು ಜನ ಅವಿವೇಕಿಗಳನ್ನು ಕಂಡು ಕಲಾವಿದ ಬೇಸರಪಟ್ಟುಕೊಳ್ಳಬಹುದು. ಬೇಸರಿಕೆಯಿಂದ ಅವನ ಕಲಾಪಾಕ ಕೆಟ್ಟರೆ ಅವನಿಗೂ ಎಂದು ಅನ್ಯಾಯ, ಅವನ ಕಲಾ ಸೇವೆ ಯನ್ನು ಪ್ರೀತಿ ವಿಶ್ವಾಸಗಳಿಂದ ನೋಡಬಂದಿರುವ ನಾಲ್ಕು ಜನ ವಿವೇಕಿ ಗಳಿಗೂ ಅನ್ಯಾಯವಾಗುತ್ತದೆ. ರಾಮಗೋಪಾಲರು ಉತ್ತಮ ವರ್ಗದ ನೃತ್ಯಕಾರರಾಗಿರುವಂತೆ ಶ್ರೇಷ್ಠ ಕಲಾಭಿಮಾನಿಗಳೂ ಆಗಿದ್ದಾರೆ. ಅವರ ಪುಸ್ತಕ ಭಂಡಾರದಲ್ಲಿ ಹಲವು ಲಲಿತಕಲೆಗಳಿಗೆ ಸಂಬಂಧಪಟ್ಟ ಗ್ರಂಥಗಳಿವೆ. ದಕ್ಷಿಣದೇಶದ ಸುಂದರ ಲೋಹ ವಿಗ್ರಹಗಳಿವೆ. ದೇಶ ವಿದೇಶಗಳ ಚಿತ್ರ ಕೃತಿಗಳಿವೆ. ರಾಮಗೋಪಾಲರು ಸ್ವಾರಸ್ಯವಾಗಿ ಮಾತನಾಡಬಲ್ಲರು. ನಗೆ, ಅಣಕ, ಸವಿಮಾತುಗಳೆಲ್ಲವನ್ನೂ ತಮ್ಮ ಹರಟೆಯಲ್ಲಿ ಬೆರಸುವ ಜಾಣೆ ಅವರಿಗೆ ಸಾಧಿಸಿದೆ. ಎಷ್ಟು ಉತ್ಸಾಹದಿಂದ ಮಾತನಾಡಬಲ್ಲರೋ ಅಷ್ಟೇ ಉತ್ಸಾಹದಿಂದ ಕೇಳಲೂ ಬಲ್ಲರು. ಹಿಂದೊಮ್ಮೆ ಇಂಗ್ಲೆಂಡಿನ ಸುಪ್ರಸಿದ್ದ ನಟ ಜಾನ್ ಗೀಲ್ ಗುಡ್ ಬೆಂಗಳೂರಿಗೆ ಬಂದಿದ್ದಾಗ ಅವನಿಗೆ ರಾಮಗೋಪಾ ಲರ ಮನೆಯಲ್ಲಿ ಔತಣ. ಅಂದು ಕೈಲಾಸಂ, ಗೀಲ್ ಗುಡ್ ಸಂಭಾಷಿ ಸುತ್ತ ಕುಳಿತರು. ವಿಷಯ ಪ್ರಾಚ್ಯ ಪೌರಾತ್ಯ ಸಂಗೀತಗಳ ವಿಮರ್ಶೆ