ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಕೈಲಾಸಂರ ಸೌಢ ವಿಚಾರಸರಣಿ ನೋಡಿ {\tಲ್ ಗುಡ್ ಮುಗ್ಧರಾದರು. ರಾಮಗೋಪಾಲ್ ತುಟಿಪಿಟಕ್ಕೆನ್ನದೆ ಕುಳಿತಿದ್ದರು. ಎರಡು ಗಂಟೆಗಳು ಹೀಗೆ ಕಳೆದಿರಬಹುದು. ಯಾರೋ ಕೇಳಿದರು ಏಕೆ ರಾಮ್, ನೀನೇನೂ ಮಾತನಾಡಲೇ ಇಲ್ಲ.' ರಾಮಗೋಪಾಲ್ ಹೇಳಿದರು ಈ ಇಬ್ಬರು ಕಲಾ ತಪಸ್ವಿಗಳ ಅಮೃತವಾಣಿ ಕೇಳುವುದಕ್ಕಿಂತ ಇನ್ನು ಭಾಗ್ಯ ಬೇಕೇ ?' ಎಂದು. ಮಗುವಿನ ಮುಗ್ಧತೆ, ಪ್ರೌಢನ ಅಹಂಕಾರ, ನಿಸ್ಸಿನ ಭಕ್ತಿ, ಅಷ್ಟೇ ಉತ್ಕಟ ವಾದ ವಿಚಾರಶೀಲತೆ, ಮಿತವರಿಯದ ಔದಾರ್ಯ, ಕಟ್ಟು ಕಟ್ಟಳೆಗೆ ಸಿಲುಕದ ಲೆಕ್ಕಾಚಾರಗಳೆಲ್ಲದರ ಸಾರ ರಾಮಗೋಪಾಲರಲ್ಲಿ ನೋಡಬಹುದು. - ಈ ಕಲಾವಿದ ಭಾರತದ ಕಲಾಪೆರೆಯನ್ನು ಸಮುದ್ರದಾಚೆ ಒಯು ನಮ್ಮ ಸಾಂಸ್ಕೃತಿಕ ಹೆಚ್ಚಳವನ್ನು ಸಾರಿ ಬಂದಿದ್ದಾನೆ. ಇದೇ ಅಲ್ಲವೇ ಬಾಳಿನ ಸಾರ್ಥಕತೆ !