ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಾರಂ ವೆಂಕಟಸ್ವಾಮಿ ನಾಯಿಡು ೫೧ ವಯಸ್ಸಿನಿಂದ ಸಂಗೀತ ವೃತ್ತಿಯನ್ನೇ ಅವಲಂಬಿಸಿ ಸ್ವಂತ ಕಛೇರಿಗಳನ್ನಾ ರಂಭಿಸಿದರು. ಕೋಕನಾಡದಲ್ಲಿ ವಿಜೃಂಭಣೆಯಿಂದ ನಡೆಯುವ ದಸರಾ ಉತ್ಸವಗಳಲ್ಲಿ ದ್ವಾರಂ ಪಿಟೀಲು ನುಡಿಸಿ ಕೀರ್ತಿಗಳಿಸಿದರು. ೧೯೧೯ರಲ್ಲಿ ವಿಜಯನಗರದಲ್ಲಿ ಸರ್ ವಿಜಯರಾಮ ಗಜಪತಿ ಮಹಾರಾಜರು ಸಂಗೀತ ಕಲಾಶಾಲೆಯನ್ನು ಆರಂಭಿಸಿದಾಗ ದ್ವಾರಂ ಅವರನ್ನು ಪಿಟೀಲು ವಿದ್ವಾಂಸ ರಾಗಿ ನೇಮಿಸಿ ಅವರ ಯೋಗ್ಯತೆಗೆ ತಕ್ಕ ಪುರಸ್ಕಾರ ಮಾಡಿದರು. ಅಲ್ಲಿಂದ ಮುಂದೆ ಕೀರ್ತಿ, ಸಂಪತ್ತು ದ್ವಾರಂ ಅವರ ಬೆನ್ನು ಹತ್ತಿದವು. ಆಂಧ್ರದ 'ಜಮೀನುದಾರರೂ, ರಾಜ ಮಹಾರಾಜರೂ ಧನದಿಂದ, ಬಿರುದುಗಳಿಂದ ದ್ವಾರಂ ಅವರನ್ನು ಗೌರವಿಸಿದರು. ವಿಜಯನಗರ, ವಿಶಾಖಪಟ್ಟಣಗಳಲ್ಲಿ ಸಾರ್ವಜನಿಕ ಸಭೆಗಳೇರ್ಪಟ್ಟು ದ್ವಾರಂ ಅವರಿಗೆ ನಿಧಿ, ಸುವರ್ಣಪದಕ, ವಸ್ತ್ರ ಭೂಷಣಗಳು ಸಂದಾಯವಾದವು. ವಿಜಯನಗರದ ಸಾರ್ವಜನಿಕ ಸಭೆಯಲ್ಲಿ ದ್ವಾರಂ ಅವರಿಗೆ ಅರ್ಪಿಸಲ್ಪಟ್ಟ ಪಿಟೀಲು ವಾದ್ಯ ಸ್ಟಾಡಿವಾರಿಯ ವಾದ್ಯ ಮಾದರಿಯಲ್ಲಿ ರಚಿಸಲ್ಪಟ್ಟ ಪುರಾತನ ವಾದ್ಯ. ಇಂದಿಗೂ ದ್ವಾರಂ ಅದೇ ವಾದ್ಯವನ್ನು ಉಪಯೋಗಿಸುತ್ತಾರೆ. ಆಂಧ್ರದಿಂದ ತಮಿಳುನಾಡಿಗೆ ದ್ವಾರಂ ಅವರ ಕೀರ್ತಿ ಪಸರಿಸಿದ್ದು ೧೯೧೭ರಲ್ಲಿ. ಮದರಾಸಿನ ' ಮೂಸಿಕ್ ಅಕಾಡೆಮಿ' (ಸಂಗೀತ ಪರಿಷತ್ತು) ಯಲ್ಲಿ ದ್ವಾರಂ ನುಡಿಸಿ ತಮಿಳು ನಾಡಿನಲ್ಲಿ ತಮ್ಮ ಕೀರ್ತಿ ಧ್ವಜವನ್ನೇರಿ ಸಿದರು. ಅಲ್ಲಿಂದ ಅವರ ವಾದ್ಯವಾದನ ವೈಭವ ತಮಿಳು ನಾಡಿನ ಮೂಲೆ ಮೂಲೆಗೂ ಹರಡಿತು. ೧೯೪೬ರ ವರ್ಧಂತ್ಯುತ್ಸವದ ಸಮಯದಲ್ಲಿ ಮೈಸೂರಿನ ಶ್ರೀಮನ್ಮಹಾರಾಜರವರು - ಸಂಗೀತ ರತ್ನಾಕರ' ಬಿರುದನ್ನಿತ್ತು `ದ್ವಾರಂ ಅವರನ್ನು ಗೌರವಿಸಿದರು. ಸಮಕಾಲೀನ ಪಿಟೀಲು ವಾದ್ಯಗಾರರಲ್ಲಿ ದ್ವಾರಂ ತಮ್ಮದೇ ಆದ ಒಂದು ಹೆಚ್ಚಿನ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಇದರ ಮುಖ್ಯ ಕಾರಣ ಇವರ ವಾದ್ಯ ವಾದನದಲ್ಲಿನ ನಯ ಮತ್ತು ಕೋಮಲತೆ, ಅಪಸ್ವರ, ಅಸ ಶ್ರುತಿಗಳನ್ನು ಪಿಟೀಲಿನಲ್ಲಿ ಸಂಪೂರ್ಣವಾಗಿ ತಡೆಗಟ್ಟುವುದು ಸಾಹಸದ ಕೆಲಸ. ಅದು ಹೆಚ್ಚಿನ ಪ್ರಮಾಣದಲ್ಲಿ ದ್ವಾರಂ ಅವರಿಗೆ ಸಾಧಿಸಿದೆ. ಇನ್ನಿ ತರ ವಾದ್ಯಗಾರರು ಸ್ವರಪ್ರಾರದ ಆರ್ಭಟದಲ್ಲಿ ಮಾಧುರ್ಯವನ್ನು