ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೨ ಕರ್ನಾಟಕದ ಕಲಾವಿದರು ಮರೆಯುತ್ತಾರೆ. ನರೇಖು ಪ್ರಿಯರಾದ ದ್ವಾರಂ ಎಲ್ಲಿಯೂ ವಿದ್ವತ್ಪದರ್ಶನ ಕ್ರೋಸುಗ ಕಲೆಯ ಸಂಹಾರ ಮಾಡುವುದಿಲ್ಲ. ತಾನ ವಿತಾನಗಳು ಇವರ ವಾದ್ಯದಿಂದ ಓತಪ್ರೋತವಾಗಿ ನಿರ್ಮಲ ತುಂಗಾಸಲಿಲದಂತೆ ಪ್ರವಹಿಸು ತದೆ. ನಾದಸೌರಭದಿಂದ ಗಾನಮಂದಿರ ಶಾ೦ತಿರಸ ಪರಿಪ್ಪು ತವಾಗಿ ದೇವಮಂದಿರವಾಗುತ್ತದೆ. ಅಶಾಂತ ಮನಸ್ಸು, ವಿಪ್ಲವ ಚೇತನ ಪ್ರಶಾಂತ ವಾಗಿ ಮಲಿನ ನೀಗಿಕೊಂಡ ಮಿಸುನಿಯಂತೆ ಶುಭವಾಗುತ್ತದೆ. ಇಂದ್ರಿ ಯಾಸಕ್ತಿಯನ್ನು ಪೂರೈಸುವುದು ಉತ್ತಮ ಕಲೆಯ ಗುರಿಯಲ್ಲ, ಮಾನಸಿಕ ಉತ್ಕಾಂತಿಯನ್ನು ಅದು ಸಾಧಿಸಬೇಕೆಂಬ ಘನ ತತ್ವದ ನಿತ್ಯತೆ ದ್ವಾರಂ ಅವರ ವಾದ್ಯ ವಾದನದ ಗಾರುಡಿಯಲ್ಲಿದೆ. ಇವರ ವಿದ್ವತ್ತಿಗೆ ಈ ಆಧ್ಯಾತ್ಮಿಕ ಬುನಾದಿ, ಇವರ ವಾದ್ಯ ವಾದನಕ್ಕೆ ಈ ರಸಚೇತನ ದೊರಕುವುದಕ್ಕೆ ಕಾರಣ ದ್ವಾರಂ ಅವರ ಪಾಂಡಿತ್ಯವಲ್ಲ, ಅಂತರಂಗ ಶುದ್ದಿ. ಅಹಂಕಾರವಿಲ್ಲದ ನಿಸ್ಸಹ ವ್ಯಕ್ತಿ. ವಿನಯವೇ ಮೂರ್ತಿವೆತ್ತು ಬಂದಂತಿರುವ ನಡತೆ, ಪರರ ವೃದ್ಧಿಗೆ ಕರುಬದ ಔದಾರ್ಯ, ಕಲೆಯ ಅನಂತಗರ್ಭದಲ್ಲಿ ಹುದುಗಿರುವ ಅನರ್ಥ್ಯರತ್ನಗಳನ್ನು ಸಂಗ್ರಹಿಸ. ಬೇಕೆಂಬ ಪರಮಾಕಾಂಕ್ಷೆ ದ್ವಾರಂ ಅವಸ ಜೀವನವನ್ನು ರೂಪುಗೊಳಿಸಿವೆ. ಸ್ವಪ್ರತಿಷ್ಠೆ ಪರನಿಂದೆಗಳೇ ಜೀವನದ ಸೋಪಾನಗಳೆಂದು ಭಾವಿಸಿರುವ ಸಂಗೀತ ವಿದ್ವಾಂಸರು ದ್ವಾರಂ ಅವರ ಪಾದಸೇವೆಯನ್ನು ಹಲವು ಕಾಲ ಮಾಡಿ ಅವರ ನೀತಿ, ನಡತೆಗಳ ಪಾಠ ಕಲಿಯಬೇಕು. ದ್ವಾರಂ ಅವರಿಗೆ ಎರಡು ಕಣ್ಣೂ ಕಾಣಿಸದು. ಕಣ್ಣಿದ್ದೂ, ಕುರುಡ ರಾಗಿರುವ ಜನಭರಿತ ಲೋಕದಲ್ಲಿ ಕಣ್ಣಿಲ್ಲದ ಈ ' ಕಾರು ' ಮೇಘಾ ಚ್ಛಾದಿತ ಗಗನದಲ್ಲಿ ಸುಳಿಯುವ ಮಿಂಚಿನ ಬಳ್ಳಿಯಂತಿದ್ದಾರೆ. ದ್ವಾರಂ ಅವರ ಪ್ರಿಯರಾಗಗಳನ್ನು ಗುರುತಿಸುವುದು ಕಷ್ಟ. ಅವರಿಗೆಲ್ಲ ರಾಗಗಳೂ ಪ್ರಿಯವೇ. ಒಂದು ದಿನ ಪೂರ್ವಿ ಕಲ್ಯಾಣಿಯಲ್ಲಿ ತಮ್ಮ ಹೃದಯವನ್ನು ತೋಡಿಕೊಂಡರೆ, ಇನ್ನೊಂದು ದಿನ ತೋಡಿಯಲ್ಲಿ ಅದೇ ದಿವ್ಯ ಪ್ರಭೆ ಕಾಣಬರುತ್ತದೆ. ಇವರ ಕಾಪಿ, ಬೇಹಾಗ್, ಸಿಂಹೇಂದ್ರ ಮಧ್ಯಮ, ಬೇಗಡೆ, ಜಂಜೂಟ ಕೇಳಿದಷ್ಟೂ ಹೊಸ ಹೊಸದಾಗಿ ಕಾಣು.