ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಿವರುದ್ರಪ್ಪ ನವರು ಆಳಿದ ಮಹಾಸ್ವಾಮಿಯವರ ಸನ್ನಿಧಿಯಲ್ಲಿ ವಾದ್ಯ ನುಡಿಸುವ ಕಟ್ಟಳೆ ಒಬ್ಬ ಸಂಗೀತ ವಿದ್ವಾಂಸರಿಗಿತ್ತು. ಒಂದು ದಿನ ಅವರು ಸನ್ನಿಧಿಗೆ ಸ್ವಲ್ಪ ಹೊತ್ತು ಮಾರಿಹೋದರು ಮಹಾಸ್ವಾಮಿಯವರು “ ಏಕಪ್ಪಾ, ಇಷ್ಟು ತಡವಾಯಿತು ” ಎಂದು ಕೇಳಿದರು. ವಿದ್ವಾಂಸರು ಭಯಗ್ರಸ್ತರಾಗಿ ಕೈ ಜೋಡಿಸಿ “ಮಹಾಸ್ವಾಮಿ, ನಾನು, ಕುರುಡ. ವೇಳೆ ನನಗೆ ಗೊತ್ತಾಗುವುದಿಲ್ಲ. ವೇಳೆ ತಿಳಿದುಕೊಳ್ಳುವುದಕ್ಕೂ ನಾನು ಕಂಡವರ ಅಶ್ರಯ ಮಾಡಬೇಕಾಗಿದೆ” ಎಂದು ಬಿನ್ನವಿಸಿಕೊಂಡರು. ಕೆಲವು ಕಾಲಾನಂತರ ಮಹಾಸ್ವಾಮಿಯವರು ವಿಲಾಯತಿ ಯಾತ್ರೆ ಹೊರ ಟರು. ಹಿಂದಿರುಗಿ ಬರುವಾಗ ಕುರುಡರು ಉಪಯೋಗಿಸುವ ಒಂದು ಗಡಿಯಾರವನ್ನು ತಂದು ವಿದ್ವಾಂಸರಿಗಿತ್ತು ಅದನ್ನು ಉಪಯೋಗಿಸುವ ವಿಧಾನವನ್ನು ತಾವೇ ತಿಳಿಸಿಕೊಟ್ಟರು. ಈ ಕರುಣಾಘನಮೂರ್ತಿ ಆಳಿದ ಮಹಾಸ್ವಾಮಿಯವರಾದ ಶ್ರೀಮ, ನಾಲ್ವಡಿ ಕೃಷ್ಣರಾಜ ಒಡೆಯರು ; ಸಂಗೀತ ವಿದ್ವಾಂಸರು ಆನೇಕಲ್ ಶಿವರುದ್ರಪ್ಪನವರು. ಶಿವರುದ್ರಪ್ಪನವರು ೧೯೦೩ರಲ್ಲಿ ಆನೇಕಲ್ಲಿನಲ್ಲಿ ಹುಟ್ಟಿದರು. ಹುಟ್ಟಿದ ಎಂಟು ದಿವಸಕ್ಕೆ ಎರಡು ಕಣ್ಣುಗಳೂ ಕಾಣದಾದವು. ತಂದೆ ಶಿವಲಿಂಗ ದೇವರು ಎಲ್ಲಾ ಚಿಕಿತ್ಸೆಗಳನ್ನೂ ಮಾಡಿಸಿದರು, ಎಲ್ಲಾ ದೇವರುಗಳಿಗೂ ಮುಡಿಪು ಕಟ್ಟಿಟ್ಟರು. ಯಾವದೂ ಸಾರ್ಥಕವಾಗಲಿಲ್ಲ. ಹುಡುಗ ಕುರುಡ. ನಾಗಿಯೇ ಬೆಳೆಯತೊಡಗಿದ. ತಂದೆಗೆ ಅವನ ಭವಿಷ್ಯದ ಚಿಂತೆ ಬಲವಾ, ಯಿತು. ಕೊನೆಗೆ ಆನೇಕಲ್ ಮುನಿಶಂಕರಪ್ಪನವರೆಂಬ ಪಿಟೀಲು ವಿದ್ಯಾ