ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು

  • ಸಂಗೀತಾಭ್ಯಾಸ ಮುಂದುವರಿಸಬೇಕೆಂದು ತುಂಬ ಆಸೆ, ಕುರುಡಯಾರೂ ಕೈ ಹಿಡಿಯಲೊಲ್ಲರು.”

“ ಹಾಗೇನು ?” ಎಂದು ಕೂಡಲೆ ಗಾನವಿಶಾರದ ಬಿಡಾರಂ ಕೃಷ್ಣಪ್ಪನವರಿಗೆ ಹೇಳಿ ಕಳುಹಿಸಿ ಶಿವರುದ್ರಪ್ಪನವರನ್ನು ಅವರಿಗೊಪ್ಪಿಸಿದರು. ಕೃಷ್ಣಪ್ಪನವರು ಏಳು ವರ್ಷಕಾಲ ಶಿವರುದ್ರಪ್ಪನವರಿಗೆ ಪಾಠ ಹೇಳಿ, ತಾವೇ ಸನ್ನಿಧಾನದಲ್ಲಿ ಅರಿಕೆಮಾಡಿಕೊಂಡು ಶಿವರುದ್ರಪ್ಪನವರನ್ನು “ ಆಸ್ಥಾನ ವಿದ್ವಾನ್ ” ಪದವಿ ಗೇರಿಸಿದರು. ಔದಾರ್ಯದ ಗಣಿಯಂತಿದ್ದ ಕೃಷ್ಣಪ್ಪನವರು ಸದಾಸರ್ವದಾ ಶಿಷ್ಯನಲ್ಲಿ ಪಿತೃ ವಾತ್ಸಲ್ಯವನ್ನಿಟ್ಟು ಕೊಂಡು, ಅವನಿಗೆ ತಮ್ಮ ಅಪಾರವಿದ್ಯೆ ಯನ್ನು ಧಾರೆಯೆರೆದರು. ಅವರ ಕೃಪೆಯಿಂದ ಕಲ್ಲರಳಿ ಹೂವಾಯಿತು. . ಈ ವೇಳೆಗೆ ಶಿವರುದ್ರಪ್ಪನವರ ಪಿಟೀಲು ವಾದ್ಯವಾದನ ರಸಿಕರನ್ನಾ ಕರ್ಷಿಸತೊಡಗಿತ್ತು. ಹೊರಗಿನಿಂದಲೂ ಕರೆ ಬರಲಾರಂಭವಾಯಿತು. ೧೯೩೩ ಪ್ರವಾಸ ಕೈಗೊಂಡು ಚಿತ್ರದುರ್ಗ, ಕೊಲ್ಲಾಪುರ, ಹುಬ್ಬಳ್ಳಿ, ಮುಂಬಯಿ, ಮದರಾಸು ನಗರಗಳಲ್ಲಿ ಶಿವರುದ್ರಪ್ಪನವರು ಕಛೇರಿಮಾಡಿ ಬಂದರು. ಕಾಶಿಯಲ್ಲಿ ಪಂಡಿತ ದೇವೀದಾಸ ಶರ್ಮರು ಶಿವರುದ್ರಪ್ಪನವರಿಗೆ ಸಂಸ್ಕೃತದಲ್ಲಿ ಬಿನ್ನವತ್ತಳೆಯನ್ನು, ಸುವರ್ಣಪದಕದೊಂದಿಗೆ ಅರ್ಪಿಸಿ ಅವರ ಉಭಯ ಸಂಪ್ರದಾಯ (ಕರ್ನಾಟಕ, ಉತ್ತರಾದಿ) ಪಾಂಡಿತ್ಯವನ್ನು ಕೊಂಡಾಡಿದ್ದಾರೆ. ಆಗಲೇ ಅವರಿಗೆ ( ಪಿಟೀಲು ವಾದನ ವಿಶಾರದ' ಎಂಬ ಬಿರುದೂ ಲಭಿಸಿತು. ತಮ್ಮ ಚಿರಂಜೀವಿಯ ಅಭ್ಯುದಯವನ್ನು ಕಂಡು ಮಹಾಸ್ವಾಮಿ ಯವರು ತುಂಬ ಸಂತೋಷಿಸಿದರು. ವಿಲಾಯತಿಯಿಂದ " ಹಾರ್ ಫಿಡಲ್ ' 'ನಾದ್ಯವನ್ನು ತರಿಸಿ ಶಿವರುದ್ರಪ್ಪನವರಿಗಿತ್ತು ಆಶೀರ್ವದಿಸಿದರು. ಆಳುವ ಮಹಾಸ್ವಾಮಿಯವರಾದ ಶ್ರೀ ಜಯಚಾಮರಾಜ ಒಡೆಯ ರವರೂ ಶಿವರುದ್ರಪ್ಪನವರ ಬಗ್ಗೆ ಇದೇ ಪ್ರೇಮವನ್ನಿಟ್ಟುಕೊಂಡು ಬಂದಿ ದ್ದಾರೆ. ಸೊಗಸಾದ ಏಳು ತಂತಿ ಪಿಟೀಲನ್ನು ತರಿಸಿ ಶಿವರುದ್ರಪ್ಪನವರಿಗೆ ಅನುಗ್ರಹಸಿ, ಅವರ ಮಾಸಾಶನವನ್ನು ಹೆಚ್ಚಿಸಿದರು. ಪಿಟೀಲು ವಾದ್ಯವಾದನದಲ್ಲಿ ಶಿವರುದ್ರಪ್ಪನವರದು ಹೆಚ್ಚಿನ ಸಿದ್ದಿ.