ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಕರ್ಣಾಟಕ ಕವಿಚರಿತೆ. [15ನೆಯ

         ಉಪಾಧ್ಯಾಯರು, ಸಾಧುಗಳು ಎಂಬ  ಪಂಚಪರಮೇ‍ಷ್ಠಿಗಳ ನಾಮದ
         ಮಹಿಮೆಯನ್ನು ಬೋಧಿಸುತ್ತದೆ ವರ್ಧಮಾನಪುರಾಣಕರ್ತೃವಾದ ಆಚ 
         ಣ್ಣನಿಗೆ ಪಂಚಪರಮಗುರುಪದವಿನತ ಎಂಬ ಅಸಾಧಾರಣವಾದ ಬಿರುದು  
         ಇರುವುದರಿಂದ ಅವನೇ ಇದನ್ನೂ ಬರೆದಿರಬಹುದು ಎಂಬ ಉಕ್ತಿ ನಿರಾಧಾ  
         ರವಾದುದಲ್ಲ. ಈ ಗ್ರಂಥದ ಬಂಧವು ಪ್ರೌಢವಾಗಿದೆ , ಸುಮಾರು 94  
          ಕಂದಗಳಿವೆ. ಇದರ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ತಿಳಿಸಿದ್ದಾನೆ_
                     ನಿರಪಾಯಾತ್ಮಪ್ರಭಾವಂ ಪರಮಹಿಮಕರಂ ದೂಷಿತಾಶೇಷದೋಷಂ | 
                     ದುರಘವ್ರಾತಾಬ್ಜವಕ್ತ್ರಂ ವಿರಹಿಜನಹಿತಂ ಸತ್ಪಧಜ್ಯೋತಿಶಶ್ವ || 
                     ತ್ಪರಿಪೂಣ೯೦ ನಿಷ್ಕಳಂಕಂ ಬುಧಹೃದಯಗತಧ್ವಾಂತವಿಧ್ವಂಸಿತೇಜಂ || 
                     ಧರೆಯೊಳ್'ವರ್ತಿಕ್ಕೆ ನಿಚ್ಚಂ ಕುವಲಯಸುಖದಂ ಶ್ರೀಸದಾಶೀತಿಚಂದ್ರಂ || 
                     ಈ ಗ್ರಂಧದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ___
                            
                                    ಪಂಚವದ  
                  ಶ್ರೀಮತ್ಸಂಚಪದಂ ಗುರು | ನಾಮಾದಿತ್ರಿತಳಮತುಳರಮ್ಯಂ ಹಮ್ಯ೯೦ |
                  ದಾಮಮಯಂ ಸುಖಕಲಶೋ | ದ್ದಾಮಂ ವಿಶ್ರಾಮಧಾಮಮಕ್ಕೆ ಮಗನಿಶ೦||
                                   ಗುರುವದ 
                  ಸುಖದ ಕಣಿ ಸುಖದ ತಿಂತಿಣಿ |ಸುಖದ ಬನಂ ಸುಖದ ಸುಗ್ಗಿ ಸುಖದ ಬಸಂತಂ। 
                  ಸುಖದ ತಿಳಿ ಸುಖದ ಪೊಂಪು | ಸುಖದೊರ್ಬುಳಿ ಸುಖದ ಸೋನೆಯೆನಿಸದೆ
                                                                                       ನಿಸದಂ || 
                  ಸುಖದ ತನಿರಸದ ಪೆರ್ಮಡು | ಸುಖದೊತ್ತಿನ ಸುತ್ತು ಸುಖದತಣ್ಬುಲೆನಿಕುಂ। 
                  ಸುಖದದೊಣೆ ಸುಖದದೀರ್ಘಕೆ |ಸುಖದಕೊಳಂ ಸುಖದಯಂತ್ರಧಾರಾಗಾರಂ|| 
                  ಭುವನತ್ರಯಮಂ ನಿಜರುಚಿ | ನವಾಮೃತಾರ್ಣವದೊಳಾವಗಂ ತೇಂಕಿಸುತಿ |  
                  ರ್ಪವಿತರ್ಕ್ಯಕಾಂತಿಕಾಂತಂ |ಶಿವಪದಮಂ ಕುಡುಗೆ ನಮಗೆ ಗುರುಸದಮ ರಘ೦|| 
                  ಮರುಳಕ್ಕೆಮ ಪುರುಳಕ್ಕೆಮ | ದುರಿತಾಹಿತಭೀತಿಯಿಂ ಭವತ್ಪದಪದ್ಮಂ | 
                  ಶರಣೆಂದು ಪೊರ್ದಿದೆನ್ನ೦ | ಪರಿಪಾಳಿಸದಿರ್ದೊಡೆತ್ತ ನಿಮಗೆ ಗುರುತ್ವ೦||
                                     ಪ್ರಣವ 
                     ಅತಿಶಯಚಿಂತಾಮಣಿ ಎ | ಶ್ರುತವಿದ್ಯಾಕಲ್ಪಕಂದಳೀಕಂದಮಿಳಾ |  
                     ಸ್ತುತಬೋಧವಾರ್ಧಿವೇಳಾ|ಸಿತರುಚಿಸಂಪೂರ್ಣಬಿಂಬವಿಭವಂ ಪ್ರಣವಂ ||