ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಕರ್ಣಾಟಕ ಕವಿಚರಿತೆ [15 ನೆಯ



ಸೂಳೆಬೊಮ್ಮಲ ದೇವಿ, ಸೂಳೆಸದ್ಮಲದೇವಿ, ಸೂಳೆಕಾಮಲದೇವಿ, ಸೂಳೆಸಂಕಲದೇವಿ, ಭಿಲ್ಲಮರಾಯ, ಕೋಲಶಾಂತಯ್ಯ, ನನ್ನ ಯ್ಯ, ನೀಲಲೋಚನೆ, ಅಜಗಣ್ಣ, ನಿಜ ಗುಣದೇವ. ಇವರುಗಳೆಲ್ಲಾ ಕವಿಯ ಕಾಲಕ್ಕೆ ಹಿಂದೆ ಇದ್ದಿರಬೇಕು. ಕೆಲವರು ಮಾತ್ರ ಸಮಕಾಲದವರಾಗಿ ಕಾಣುತ್ತಾರೆ. ಇವನ ಶರಣುಬಸವರಗಳೆಯಲ್ಲಿ 108 ಕಂದಗಳಿವೆ ಎಂದು ಬರೆದಿ ರುವುದು ತಪ್ಪು , 108 ವಾಕ್ಯಗಳು ಅಥವಾ ನುಡಿಗಳು ಇವೆ ಎಂದಿರ ಬೇಕು. ಅಂತ್ಯದಲ್ಲಿ ಮಾತ್ರ ಒಂದು ಕಂದವಿದೆ. ಈ ನುಡಿಗಳಲ್ಲಿ ಎರಡನ್ನು ಉದಾಹರಿಸುತ್ತೇವೆ.___ ಅಚಲಶೈವಧರ್ಮಸಿಣ೯ಯಾವತಾರ ಶರಣು ಒಸವ| ವಿಕಟಧವಸ-ತ್ಸಮೂಹ ತಿಹೋತ್ರ, ಶರಣು ಬಸವ |

ಈತನು ಸದ್ಗುರುರಗಳೆ, ಚೆನ್ನಬಸವಸ್ತೋತ್ರದರಗಳ ಎಂಬ ಗ್ರಂ ಧಗಳನ್ನೂ ಬರೆದಿದ್ದಾನೆ. ಇವುಗಳಿಂದ ಎರಡೆರಡು ನುಡಿಗಳನ್ನು ತೆಗೆದು ಬರೆಯುತ್ತೇವೆ---
                  ಸದ್ದು ರುರಗಳೆ
ಭವತಿವಿ:ರಹರದೀಪಿಕಾವರ್ತಿ ಸದ್ಗುರುವೆ |ಶ್ರೀಷಡಕ್ಷರಜಮನುಚಾಲಮುಖ ಸದ್ಗುರುವೆ |
            ಚೆನ್ನ ಬಸವಸ್ತೋತ್ರದ ರಗಳೆ
ಬಸವಗುರುವಚೋಮೃತಗತವೃಜಿನಪಂಕ ಚೆನ್ನಬಸವ|

ಬಸವಸಾದಕಮಲಕರ್ಣಿಕಾನಿವಾಸ ಚೆನ್ನಬಸವ|

                    _____________
           ದೇವೇಂದ್ರಮುನಿ  ನು. 1200
    ಈತನು ಬಾಲಗ್ರಹಚಿಕಿತ್ಸೆಯನ್ನು ಬರೆದಿದ್ದಾನೆ. ಇವನು ಜೈನ ಕವಿ ; ಸುಮಾರು 1200ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ.

ಇವನ ಗ್ರಂಧವು ಬಹಳಮಟ್ಟಿಗೆ ವಾಕ್ಯರೂಪವಾಗಿದೆ. - - - - - - - I, Vol. I, 233