ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನಕ್ಕೆ ಹಿಂದೆ) ಅಮೃತನಂದಿ, ಏಕಾಂತದಲಿ ಧನದ ಗೋಷ್ಠಿ | ಲೋಕಾಂತದಲಿ ವೈರಾಗ್ಯದ ಗೋಷ್ಟಿ | ಶ್ರೀಕಾಂತನ ಸೇವೆಗೆ ಅನುಮಾನ | ಭೂಕಾಂತನ ಸೇವೆಗೆ ಸನನ |2|| ಭಜಿಸು ಬ್ರಹ್ಮಾದಿವಂದಿತಹರಿಯ | ತ್ಯಜಿಸು ಕಾಮಾದಿಶತ್ರುಗಳ | ಸುಜನವಂದಿತನಾದ ನರಹರಿಯ | ಭಜಿಸು ಶ್ರೀಹರಿರಘುಪತಿಯ |3|| ಯಶಶ್ಚಂದ್ರ, ಸು 1300 ಈ ಕವಿಯ ಹೆಸರನ್ನು ಮಧುರನು' (ಸು 1385) ತನ್ನ ಧರ್ಮನಾಥ ಪುರಾಣದಲ್ಲಿಯೂ ಭಾಸ್ಕರನು(1424) ತನ್ನ ಜೀವಂಧರಚರಿತ್ರೆಯಲ್ಲಿಯೂ ಹೇಳಿದ್ದಾರೆ. ಭಾಸ್ಕರನು ಯಶಸ್ಟಂದ್ರನ ಬಹುಜ್ಞತೆ ಎಂದು ಈತನನ್ನು ಗೌರವಿಸಿದ್ದಾನೆ. ಇವನು ಆವ ಗ್ರಂಧವನ್ನು ಬರೆದಿದ್ದಾನೆಯೋ ತಿಳಿಯದು. ಇವನ ಕಾಲವು ಸುಮಾರು 1300 ಆಗಿರಬಹುದು. ಪದ್ಮಪ್ರಭ, ಸು. 1300 ಇವನು ವಿಂಶತಿಪ್ರರೂಪಣೀಟೀಕೆಯನ್ನು ಬರೆದಿದ್ದಾನೆ. ಈತನು ಜೈನಕವಿ, ಸುಮಾರು 1250 ರಲ್ಲಿ ಹುಟ್ಟಿದ ಮಾಘಣಂದಿ ಶ್ರಾವಕಾಚಾರ ದಿಂದ ಅನುವಾದಮಾಡುವುದರಿಂದ ಆ ಕಾಲಕ್ಕೆ ಈಚೆ ಸುಮಾರು 1300 ರಲ್ಲಿ ಇದ್ದಿರಬಹುದು. ಇವನ ಗ್ರಂಧದಿಂದ ಇಂಡಿರ್ಯ ಆಂಟಿಕ್ಟರಿಯಲ್ಲಿ? ಉದ್ಧರಿಸಿರುವ ಸ್ವಲ್ಪ ಭಾಗವನ್ನು ಬರೆಯುತ್ತೇವೆ-- ಅಚ್ಚುದವದೊತ್ತಿ ಅಜೀವಾ ಆಜೀವಾ, ಅಂಬಿಲಕೂತನುಂಬರ', ಅಚ್ಚುದಪದೊತ್ತಿ, ಅಚ್ಚುತಕಲ್ಪ ಪಠ್ಯಂ ತಂ ಪುಟ್ಟುವರ್‌ ಅಮೃತನಂದಿ, ಸು. 1300 ಇವನು ಅಕಾರಾದಿ ವೈದ್ಯನಿಘಂಟುವನ್ನು ಬರೆದಿದ್ದಾನೆ, ಈತನು ಜೈನಕವಿ : ಸುಮಾರು 1300 ರಲ್ಲಿ ಇದ್ದಿರಬಹುದೆಂದು ತೋರುತ್ತದೆ, ಇವನ ನಿಘಂಟುವಿನಲ್ಲಿ ಸಂಸ್ಕೃತಪದಗಳಿಗೆ ಕನ್ನಡದ ಪದ್ಯಾಯ ಶಬ್ದ ಗಳು ಹೇಳಿವೆ. - * - ಯೂ" ಈ Vol. I, 347 2 Fol 19T2, 89 5