ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ, [15 ನೆಯ ಪ್ರಭಾಚಂದ್ರ, ಸು. 1300 ಈತನು ಸಿದ್ದಾಂತಸಾರ, ಚಾರಿತ್ರಸಾರ ಇವುಗಳಿಗೆ ಟೀಕೆಯನ್ನು ಬರೆದಿದ್ದಾನೆ. ಇವನು ಜೈನಕವಿ, ಇವನ ಕಾಲವು ಸುಮಾರು 1300 ಆಗಿರ ಬಹುದೆಂದು ಊಹಿಸುತ್ತವೆ. ಕನಕಚಂದ್ರ, ಸು 1300 ಈತನು ಕೊಂಡಕುಂದಾಚಾರನ ಮೋಕ್ಷಪ್ರಾಕೃತ ಅಥವಾ ಸಹ ಜಾತ್ಮ ಪ್ರಕಾಶ ಎಂಬ ಗ್ರಂಧಕ್ಕೆ ಕನ್ನಡವ್ಯಾಖ್ಯಾನವನ್ನು ಬರೆದಿದ್ದಾನೆ' ಇವನು ಜೈನಕವಿ; ಸುಮಾರು 1300 ರಲ್ಲಿ ಇದ್ದಿರಬಹುದು. ನಾಗರಾಜ, 1 1331 ಈತನ ಪುಣಾಗ್ರವವನ್ನು 2 ಆಠ್ಯಸೇನನು ತಿದ್ದಿ ಅಂದಗೊಳಿಸಿದ ನೆಂದು ಶ್ರುತವಾರ್ಧಿಯಾಗ್ಯಸೇನ | ವ್ಯತಿಪತಿ ಕೊಂಡಾಡಿ ತಿರ್ದಿ ಕನ್ನ ಚದೊಳಂ | ಪ್ರತಿಪಾದಿಸಿದನೆನಲ್ಕಿ | ಕೃತಿ ಪೆರ್ಮೆಯನಾಂತುದೆಂಬುದೇನಚ್ಚರಿಯೇ || ಎಂಬ ಪದ್ಯದಲ್ಲಿ ಹೇಳಿದ್ದಾನೆ, ಈ ಆದ್ಯಸೇನನೂ ಕವಿಯಾಗಿದ್ದಿರ ಬೇಕೆಂದು ತೋರುತ್ತದೆ. ಆವ ಗ್ರಂಥಗಳನ್ನು ಬರೆದಿದ್ದಾನೆಯೋ ತಿಳಿ ಯದು. ಗುರುದೇವ ಸು. 1350 ಈತನು ಮಹಿನ್ನಸ್ತೋತ್ರ, ಮಾಣಸ್ತೋತ್ರ, ಮಲೆಯರಾಜಸ್ಕೋ ತ್ರ, ಅನಾಮಯಸ್ತೋತ್ರ, ಹಲಾಯುಧಸ್ತೋತ್ರ, ಭೈಂಗಿಸ್ಕವ ಇವುಗಳಿಗೆ ಕನ್ನಡವಾಖ್ಯಾನವನ್ನು ಬರೆದಿದ್ದಾನೆ. ಇವನು ವೀರಶೈವಕವಿ; ಮಲ್ಲಿಕಾರ್ಜುನಪಂಡಿತಾರಾಧ್ಯನ (ಸು. 1160) ವಂಶೋದ್ದವನು, ಸಂಸ್ಕೃತದಲ್ಲಿ ಈತನು ಬರೆದಿರುವ ವೀರಶೈವಾ ಚಾರಪ್ರದೀಪಿಕೆಯಲ್ಲಿ ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ - - I, Vol. I, 331, 2. Ibid., 332,