ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

35 ವನಿ. ಶತಮಾನಕ್ಕೆ ಹಿಂದೆ] ಬಾಹುಬಲಿ ಪಂಡಿತ. ದ್ರಾಕ್ಷಾರಾಮದ ಕೋಟಿಪಲ್ಯಾಖ್ಯ ದೇಶಿಕ; ಮಗ ಭೀಮಪಂಡಿತ, ಅವನ ಹೆಂಡತಿ ಗೌರಮಾಂಬ, ಇವರ ಮಗ ಮಲ್ಲಿಕಾರ್ಜುನಪಂಡಿತ, ಇವನು ವೆನಾಡುಜೋಳನ ಆಸ್ಥಾನದಲ್ಲಿ ವಾದಿಗಳನ್ನು ಜಯಿಸಿದನು; ಮಗ ಪಂಡಿತಾರಾಧ್ಯ, ಮಗ ವೀರಾರಾಧ್ಯ , ತತ್ತ್ವ ತೀಕಸಂಭೂತ ಗುರುಬಸವ , ಮಕ್ಕಳು ಗಂಗಾಧರ, ಬಸವ ; ಬಸವನ ಮಕ್ಕಳು ಹಿಯಾರ್, ಪಂಡಿತಾರ ; ಪಂಡಿತಾರನ ಮಗ ಗುರುಲಿಂಗ ; ಮಕ್ಕಳು ಗುರುದೇವ, ಪಂಡಿತಾರ್, ಬಸವಾರಾಧ್ಯ, ಜಕ್ಕಾರಾಧ್ಯ ಈ ಗುರುದೇವನೇ ವ್ಯಾಖ್ಯಾಕಾರ, ವೀರಶೈವಾಚಾರಪ್ರದೀಪಿಕೆ ಯನ್ನು ನಿದ್ದ ದೇವನಿಗೋಸ್ಕರ ರಚಿಸಿದಂತೆ ಹೇಳುತ್ತಾನೆ. ಈ ಸಿದ್ದಗೇವ ನಾರೋ ತಿಳಿಯದು, ಮಲ್ಲಿಕಾರ್ಜುನಪಂಡಿತನಿಂದ (ಸು. 1160) 7ನೆಯ ತಲೆಯವನಾದುದರಿಂದ ಇವನ ಕಾಲವು ಸುಮಾರು 1350 ಆಗಬಹುದು, ಟೀಕೆಯ ಕೊನೆಯಲ್ಲಿ ಈ ಗದ್ಯವಿದೆ ಇತಿ ಶ್ರೀಮದ್ವೇದಾಗಮೋಪನಿಷತ್ಪುರಾಣೋಕ್ತಮಾರ್ಗ ಪ್ರವರ್ತನ ಪ್ರವೀಣ ಪಂಡಿತಾರಾಧ್ಯ ದೇವನಾಮಾಚಾರ ವರತನೂಭವಗುರುಲಿಂಗದೇವಾಯದೇಶಿಕೇಂದ್ರ ಪ್ರತೀಕೋದ್ಭವ ಗುರುದೇವಾಬೈನ ಕರ್ಣಾಟ ಭಾಷಾಕೃತಾ ಟೀಕಾ ಪರಿಸಮಾಪ್ತಾ. ಬಾಹುಬಲಿ ಪಂಡಿತ, 1352 ಈತನು ಧರ್ಮನಾಥಪುರಾಣವನ್ನು ಬರೆದಿದ್ದಾನೆ. ನಮಗೆ ಈ ಗ್ರಂ ಥದ ಕೊನೆಯ ಓಲೆ ಮಾತ್ರ ದೊರೆತಿರುವುದರಿಂದ ಕವಿಯ ವಿಷಯವಾ ಗಿಯೂ ಗ್ರಂಥದ ವಿಷಯವಾಗಿಯೂ ವಿಶೇಷಾಂಕಗಳನ್ನು ತಿಳಿಸಲು ಅನ ಕಾಶವಿಲ್ಲದೆ ಇದೆ. ಈತನು ಜೈನಕವಿ; ನಯಕೀರ್ತಿಯ ಶಿಶ್ನನು, ಈ ಗ್ರಂಥವನ್ನು ಶಕ 1274 ನಂದನದಲ್ಲಿ, ಎಂದರೆ 1352 ರಲ್ಲಿ, ಬರೆದಂತೆ ಸ್ವಸ್ತಿ ಶ್ರೀಶಕವತ್ಸರಂ ಸಲೆ ಚತುಸ್ಸಪ್ತದ್ವಯೇ ಕಾಂಕವಿ | ನ್ಯಸ್ತಂ ನಂದನವರ್ಷದಲ್ಲಿ ಮಧುಮಾಸಶ್ವೇತಪಕ್ಷಾಷ್ಟ ಮಾ | ವಿಸ್ತಾರೀಕೃತ ಸೋಮವಾರದೊಳಿದಂ ಸಂಪೂರ್ಣಮಂ ಮಾಡಿದಂ | ಪ್ರಸ್ತುತ್ಯಪ್ರತಿಭಾಪರಂ ಭುಜಬಲಿಪ್ರಖ್ಯಾತಯೋಗೀಶ್ವರಂ ||