ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

37 ಶತಮಾನಕ್ಕೆ ಹಿಂದೆ] ಅಭಿವನಚಂದ್ರ. ಇದರಿಂದ ಈತನು ದೊಡ್ಡ ಪಂಡಿತನೂ ಕವಿಯೂ ಆಗಿದ್ದಂತಯ ಕವಿಮಲ್ಲನಿಗ ವಿದ್ಯಾಗುರುವಾಗಿದ್ದಂತೆಯೂ ತಿಳಿಯುತ್ತದೆ, ಆವ ಗ್ರಂಥಗ ಳನ್ನು ಬರೆದಿದ್ದಾನೆಯೋ ತಿಳಿಯದು, ಇವನು ಸುಮಾರು 1380ರಲ್ಲಿ ಇದ್ದಿ ರಬಹುದು. ಅಭಿನವಚಂದ್ರ, 1 ಸು 1400 ಈತನು ಬ್ರಾಹ್ಮಣಕವಿ, ಇವನ ತಂದೆ ಕಾಳಪಯ್ಯ, ತಾಯಿ ಅತ್ತಿಮಬ್ಬೆ, ಅಣ್ಣ ಸೋಮದೇವ, ಸ್ಥಳ ಬಾಗೆವಾಡಿ, “ಚಂದ್ರಕವೀಂದ್ರ ವಾಗ್ವಿಲಾಸಂ ನೆಗಲ್ ವಾಜಿಶಾಸ್ತ್ರಮಂ ವಿರಚಿಸುವೆಂ” ಎಂಬುದರಿಂದ ಹಿಂದೆ ವಾಜಿಶಾಸ್ತ್ರವನ್ನು ಬರೆದ ಚಂದ್ರಕವಿಯನ್ನು ಅನುಸರಿಸಿ ಕವಿ ಈ ಗ್ರಂಥವನ್ನು ಬರೆದಂತೆ ತೋರುತ್ತದೆ. ಈ ಚಂದ್ರಕವಿ ಮದನತಿಲಕ ವನ್ನು ಬರೆದ ಚಂದ್ರರಾಜನಾಗಿರಬಹುದು, ಆ ಚಂದ್ರ ಕವಿಯನ್ನು ಅನುಸರಿಸಿ ಅಭಿನವಚಂದ್ರ ಎಂದು ಕವಿ ತನಗೆ ಹೆಸರಿಟ್ಟು ಕೊಂಡಿರ ಬಹುದು, ತನ್ನ ಕವಿತಾಚಾತುರಿಯನ್ನು ಈ ಪದ್ಯಗಳಲ್ಲಿ ಹೇಳಿಕೊಂ ಡಿದ್ದಾನೆ ಪ್ರಹಸಿತಸರಸ್ವತೀಮುಖ | ಕುಹರವಿನಿರ್ಗತನುತಪ್ರಸನ್ನಾ ಳಾಪಂ | ಸಹಜವಿದೆಂಬಂತಿರೆ ವಾ | ಬೃಹಿಮೆಯನಾಂ ಮೆದು ವಿಬುಧರಂ ಮೆಚ್ಚಿಸುವಂ|| ಅರ್ಧಾವಗಾಧವೆನಿಸಿ { ರ್ಪಧ್ರ೦ ಬುಧಜನದ ಮನಕೆವರೆ ಪೇಟಿಲ್ಯ | ನೈರ್ಧ೦ ಕವಿತಾಪ್ರಭವಸ | ಮರ್ಧಿಕೆಯೆನಗುಂಟು ಪೇಳ್ವನೆನ್ನ ಅವನಿತಂ || - ಕುಕವಿಗಳನ್ನು ಈ ಪದ್ಯದಲ್ಲಿ ನಿಂದಿಸಿದ್ದಾನೆ. ಅಗಡಪಿ ಸೆರಿರ ಕೃತಿಯಂ|ತಗುಳುಮವಂ ನುಡಿದು ಕೊರಲ ಸೆರೆ ಬಗಿಎನೆಗಂ| ಬಗುಳು ಬಳಕೆಡದಕಾಲೊಳ್ | ನುಗುಳು ಮನಂ ಗುಬ್ಬಿ ಮಣಿದ ದುಷ್ಕವಿ ಕವಿಯೇ || ಇವನ ಗ್ರಂಥ ಅಶ್ವ ಶಾಸ್ತ್ರ. ಇದು 16 ಅಧ್ಯಾಯಗಳಾಗಿ ಭಾಗಿಸಲ್ಪಟ್ಟಿದೆ; 888 ಪದ್ಯಗಳನ್ನು ಒಳಕೊಂಡಿದೆ. ಪದ್ಯಗಳು ಪ್ರಾಯಿಕವಾಗಿ ಕಂದಗಳಾಗಿವೆ, ಗ್ರಂಥಾವ 1 vol, i, 358,