ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಕರ್ಣಾಟಕ ಕವಿಚರಿತ. [15 ನೆಯ ತಾರದಲ್ಲಿ ವಿಷ್ಣು ಸ್ತುತಿ ಇದೆ. ಬಳಿಕ ಕವಿ ಶಿವ, ಬ್ರಹ್ಮ, ಸೂರ್ಯ, ಗಣಪತಿ, ಲಕ್ಷ್ಮಿ , ಮಹಿಷಾಸುರಮರ್ದಿನಿ ಇವರುಗಳನ್ನು ಸ್ಮರಿಸಿದ್ದಾನೆ. ತನ್ನ ಕವಿತಾಶಕ್ತಿಯನ್ನು ತೋರಿಸಲು ಈ ಗ್ರಂಥವನ್ನು ಪದ್ಯರೂಪವಾಗಿ ಬರೆದಂತೆ ಈ ಪದ್ಯದಲ್ಲಿ ಹೇಳಿದ್ದಾನೆ ಕನ್ನಡಕವಿ ನಿಜಕವಿತೆಯ | ಬನ್ನಣಮಂ ಮೆಳೆವುದರಿದೆ ಪದ್ಯದೊಳದರಿಂ | ಬಿನ್ನ ಮನಸಲೆಂದಾ ! ನೆನ್ನ ರ್ಧಿಯ ವಾ ಜಿಶಾಸ್ತ್ರಮಂ ವಿರಜಸುವೆ || ಅಧ್ಯಾಯಗಳ ಅಂತ್ಯದಲ್ಲಿ ಗ್ರಂಧಕ್ಕೆ ಚಂದ್ರಮತ ಎಂಬ ಹೆಸರು ಹೇಳಿದೆ. ಈ ಗ್ರಂಥದಿಂದ ಇನ್ನೂ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆ ಯುತ್ತೇವೆ ತೆರೆಯಿಲ್ಲದೆ ಸರೆಯಿಲ್ಲದೆ | ನರೆಯಿಲ್ಲದೆ ಕಿರಿಯವಾಗಿ ತೆಳ್ಳನೆ ಮೊನೆಯಾ | ಗಿರೆ ಕಿವಿಗಳೊಳಗೆ ನುಣಾ | ಗಿರೆ ಕಟಮುಂ ವಿಕಟವಾಗದಿರೆ ಹರಿ ಶುಭದಂ || ವಾಜೆಯೆ ಮೊದಲಾ ವಿಜಯ | ಕ್ರಾಜೆಯೊಳರಸಂಗೆ ಬುದ್ದಿವಂತಂಗದಂ | ವಾಜೆಗಳನೆಯೇ ಪೊರೆವುದು ಪೂಜಿಸುವುದು ವಿಜಯಲಕ್ಷ್ಮಿಯಂ ಬಯಸುವವಂ|| ಶೃಂಗಿಯ ಬೇರುಂ ವಾಣಿಒ | ದಿಂಗುಂ ಬೆಳ್ಳುಳ್ಳಿ ತಿಗಡೆ ಸೈಂಧು ಮಿಾ ಸಂ | ಚಾಂಗಮುಮಂ ಸಮನಾಗಿ ತು | ರಂಗಕ್ಕಿಕ್ಕುವುದು ಸರ್ವಶ್ರಲಾಪಹರಂ || ತುರಗಕ್ಕೆ ಲದ್ದಿ ಪೊಅಮಡದಿರೆ ಪುಣಿಸೆಯ ಸಣ್ಣ ಬತ್ತಿಯೊಳ್ ಸೈಂಧವಮಂ || ಬೆರಸಿ ಗುದಮುಖದೊಳಿಡೆ ಬಾ | ಹಿರಮಕ್ಕುಂ ಕರಿನವಾಗಿ ಬಿಗಿದಿರ್ದ ಮಲಂ || ಆಯತವರ್ಮ, ಸು, 1400 ಈತನು ಕನ್ನಡರತ್ನಕರಂಡಕವನ್ನು ಬರೆದಿದ್ದಾನೆ. ಇವನು ಜೈನ ಕವಿ ; ವರ್ಧಮಾನಸಿದ್ದಾಂತದೇವನ ಶಿಷ್ಯನು. ಇವನ ವಿಷಯವಾಗಿ ಇವನ ಗ್ರಂಥದಿಂದ ಇನ್ನೇನೂ ತಿಳಿವುದಿಲ್ಲ. ಇವನ ಕಾಲವನ್ನು ನಿಶ್ಚಯಿ ಸುವುದಕ್ಕೂ ಸರಿಯಾದ ಆಧಾರವಿಲ್ಲ ; ಸುಮಾರು 1400 ರಲ್ಲಿ ಇದ್ದಿರ ಬಹುದೆಂದು ತೋರುತ್ತದೆ. ಇವನ ಗ್ರಂಥ ಕನ್ನಡ ರತ್ನ ಕರಂಡಕ. ಇದು ಚಂಪೂಗ್ರಂಥ ; ಸಮ್ಯಗ್ದರ್ಶನಸ್ವರೂಪನಿರೂಪಣ, ಸತ್ಯ ಗೌಜ್ಞಾನಸ್ವರೂಪನಿರೂಪಣ, ಸಮ್ಯಕ್ಷಾರಿತ್ರಸ್ವರೂಪನಿರೂಪಣ ಎಂದು