ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನಕ್ಕೆ ಹಿಂದೆ] ಚಂದ್ರಕೀರ್ತಿ. 3 ಪರಿಚ್ಛೇದಗಳಾಗಿ ಭಾಗಿಸಲ್ಪಟ್ಟಿದೆ. ಇದರಲ್ಲಿ ಜೈನಮತಕ್ಕೆ ಸಂಬಂಧ ಪಟ್ಟ ರತ್ನತ್ರಯವೆಂಬ ದರ್ಶನಜ್ಞಾನಚಾರಿತ್ರಗಳು ವರ್ಣಿಸಲ್ಪಟ್ಟಿವೆ. ಗ್ರಂ ಥಾವತಾರದಲ್ಲಿ ಚತುರ್ವಿಂಶತಿಜಿನಸ್ತುತಿ ಇದೆ. ಗ್ರಂಥಾಂತ್ಯದಲ್ಲಿ ಈ ಗದ್ಯ ವಿದೆ ಇದು ಭಗವದರ್ಹತ್ಪರಮೇಶ್ವರಪರಮಭಟ್ಟಾರಕವೀತರಾಗಸರ್ವಜ್ಞವದನವನ ಜಸಮುದ್ಧ ತಸದಸದಾತ್ಮಕಪರಮತಭಾವನಾಭಾವಿತಸ್ಕಾಂತ ಶ್ರೀವರ್ಧ ಮಾನಸಿ ದ್ದಾಂತದೇವಚರಣಸರಸೀರುಹಸ್ಮರಣಪರಿಣತಾಂತಃಕರಣಕುಶೇಶಯ ಶ್ರೀಮದಾಯತ ವರ್ಮವಿರಚಿತಮಪ್ಪ ರತ್ನ ಕರಂಡಕದೊಳ. ಈ ಗ್ರಂಧದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ ರತ್ನತ್ರಯ ತತ್ಯದ ರುಚಿ ಸಮ್ಯಕ್ಕ° | ತಂಗಳನೊಳ್ಳಿತಾಗಿಯುವುದು ಬೋಧಂ | ತಂ ತನ್ನೊಳ್ ನೆದಿರೆ | ಸಂಗಳನೋವಿಕಾವುದದುನೆ ಚರಿತ್ರಂ | ಸಲ್ಲೇಖನ ಎಲ್ಲಾ ಪರಿಗ್ರಹಮುಮಣ | ಮಿಲ್ಲದ ಮನದೊಡೆಯನಾಗಿ ಸಲೆ ತಪಮಂ ತ | ಜ್ವಲ್ಲದೆ ಕೆಯ್ಯೋಳ್ವುದು ತಾಂ | ಸಲ್ಲೇಖನೆಯೆಂದು ಪೇರಾಚಾಠ್ಯರ್ಕಳ್ || ವೈರಾಗ್ಯ ಒಳಬುದ್ದುಗದಿಂ ಕ್ಷಣಿಕಂ | ಒಳಧರನಿವಹಂಗಳಿಂದಮಧ್ರುವಮುಳ್ಳಂ| ಗಳ ರಂಜನೆಯಂತಚಿರಂ | ಬಳಸಿದ ಬಂಧುಗಳುಮೊಡಲುಮೊಡವೆಯುಮೆಂತುಂ || ಚತುರಂಗಬ ಮುಮಾಯುಧ | ತತಿಯುಂ ಬರಮಿತ್ತ ದೈವಮುಂ ಬಂಧುಗಳು | ಕ್ಷಿತಿಯುಂ ನಿಜಭುಜವೀರ ಮು | ಮತೀತಮಪ್ಪಂದು ಕಾಯಲಾಅವು ನರರಂ || ಸಂಸಾರಕರಣಂಗಳ | ಹಿಂಸಾರುಚಿ ಕಳವು ಪುಸಿ ಪರಸ್ತ್ರೀಗಮನಂ | ಮಾಂಸಮಧುಮದ್ಯ ಸೇವನೆ | ಸಂಸಯಮೇಂ ದುಃಖಕಾರಣಂಗಳಿ ವಿನಿತುಂ | ಚಂದ್ರಕೀರ್ತಿ, ಸು. 1400 ಈತನು ಪರವಾಗನುಸಾರವನ್ನು ಬರೆದಿದ್ದಾನೆ. ಇವನು ಜೈನಕವಿ, ಗ್ರಂಥಾಂತ್ಯದಲ್ಲಿರುವ ಮುನಿಪತಿ ದರ್ಶನಶುದ್ದಂ | ವಿನುತಯಶಂ ಶೀಲರತ್ನ ನಡಳಿತದೈತ್ಯಂ | ಮನಸಿಜಮದಕರಿಸಿಂಹಂ | ವಿನಯನಿಧಾನಂ ಸರಸ್ವತೀಮುಖತಿಲಕಂ ||