ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಕರ್ಣಾಟಕ ಕವಿಚರಿತೆ. 115 ನಯ ಈ ಗ್ರಂಥದಿಂದ ಸ್ವಪ್ರಶಂಸಾರೂಪವಾದ ಕವಿಯ ಒಂದುಪಡ್ಯ ವನ್ನು ಉದ್ಧರಿಸಿ ಬರೆಯುತ್ತೇವೆ ಚತುರಾಸ್ಯಂ ಜಡಜಸ್ಟನಂಗಜಹರಂ ಕಾಡೊಳ್ ಸಮಂತಿರ್ಪನ | ಚ್ಯುತನೆಂದುಂ ಸಿರಿಯಿಂದೆ ಗರ್ವಿತನವಂ ಭೂಭಾರಕಜ್ಞಾನಿ ಗೀ || ಪ್ರತಿ ಪಾಣ್ಡಂ ? ಗೊರವಂಕಳಾವಳಿಯನೆಂದಿಂತೆಲ್ಲಿಯುಂ ನಿಲ್ಲದ | ಪ್ರತಿಮಳ ಸತ್ಯ ವಿಮಲ್ಲನೊಳ್ ಮೊಗದೆ ನಿಂದ ವಾಣಿ ಸಲೀಲೆಯಿಂ || ನೀಲಕಂಠಶಿವಾಚಾರ್, ಸು 1400 ಈತನು ಬರೆದಿರುವ ಬ್ರಹ್ಮಸೂತ್ರವ್ಯಾಖ್ಯಾನರೂಪವಾದ ಕ್ರಿಯಾಸಾ ರವೆಂಬ ಸಂಸ್ಕೃತಗ್ರಂಥದ 19ನೆಯ ಉಪದೇಶದ ಕೊನೆಯಲ್ಲಿರುವ “ಅಧ್ಯ ನಾಮಧ್ವಪತೇ ಶ್ರೇಷ್ಠ ನ್ಯಾಧ್ವನಃ ಪಾರಮನೀವೇತಿ ಮಂತ್ರೇಣ ಕೃತಕಲಾ ಸನ್ನಿಧಾನಸ್ಯ ಲಿಂಗಸ್ಯ ದೀಕ್ಷಾಪೂರ್ವಕಧಾರಣಮಿತ್ಯಾಗಮಪ್ರಕಾರೊ ಭಾಷಾಪ್ರಬಂಧೀಸ್ಮತ್ತೇವಲೋಕನೀಯಃ” ಎಂಬ ಭಾಗದಿಂದ ಇವನು ಒಂದು ಕನ್ನಡಗ್ರಂಥವನ್ನೂ ಬರೆದಿರುವಂತೆ ತಿಳಿಯುತ್ತದೆ. ಈತನು ವೀರಶೈವಕವಿ, ಇವನ ತಂದೆ ಮಲ್ಲಯದೇವ, ತಾಯಿ ಚೆನ್ನಮಾಂಬೆ, ಮಲ್ಲಣಕ್ಯನ ವೀರಶೈವಾಮೃತಪುರಾಣದಲ್ಲಿ (1530) ಈ ತನ ಕ್ರಿಯಾಸಾರರಿಂದ ಅನುವಾದವಾಡಿರುವುದರಿಂದ ಈತನು ಅವನ ಕಾಲಕ್ಕೆ ಹಿಂದೆ ಇದ್ದಿರಬೇಕು, ಎಷ್ಟು ಹಿಂದೆ ಇದ್ದನೋ ತಿಳಿಯದು, ಸು ಮಾರು 1400 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ,