ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಕರ್ಣಾಟಕ ಕವಿಚರಿತೆ. [15 ನೆಯ ಈ ಕಥೆಗಳನ್ನು ತನ್ನ ಹೆಂಡತಿ ಕೇಳಲು ಹೇಳಿದಂತೆ ತಿಳಿಯುತ್ತದೆ. ತನ್ನ ಗ್ರಂಧವು “gತದುರಕರ್ಣಾಟದ ಕಳೆಯವನ ಬಗ್ಗಿನ ಬಗೆ” ಎಂದು ಹೇಳುತ್ತಾನೆ. ಆರಂಭದಲ್ಲಿ ಸಂಪಾನಾಧನ ಸ್ತುತಿ ಇದೆ. ಬಳಿಕ ಕವಿ ತೊಗೆಗಲ್ಲ ವಿನಾಯಕನನ್ನೂ ಸರಸ್ವತಿಯನ್ನೂ ಹೊಗಳಿದ್ದಾನೆ. ಸಂಧಿಗಳ ಆದ್ಯಂತಗಳಲ್ಲಿ ಶಿವಸ್ತುತಿರೂಪವಾದ ಒಂದೊಂದು ವೃತ್ತವಿದೆ, ಪುರ, ಗಿರಿ, ಋತು, ನಂದನ, ರವಿ, ಶಶಿ ಮೊದಲಾದ 18 ಕಾವ್ಯಾಂಗಗಳಲ್ಲಿ ಆದಷ್ಟು ಅಂಗಗಳನ್ನು ಸೇರಿಸಿ ಪೂರ್ವಕವಿಗಳನ್ನು ನೋ೦ತು ಗ್ರಂಥವ ಪೇತ್ವಂ ಎಂದು ಕಥೆಯನ್ನು ಆರಂಭಿಸಿದ್ದಾನೆ. ಇವನ ಬಂಧವು ಲಲಿತವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯಗ ಳನ್ನು ತೆಗೆದು ಬರೆಯುತ್ತೇವೆ ಶಿವಸ್ತುತಿ | ಸುರರೆಲ್ಲರ್ಣ್ಣೆ ಸುರತ್ನ ಭೂಷಣಚಯಂಗೊಟ್ಟಿಂತು ಕುಂಭೀನಸಾ || ಭರಣಂದೊಟ್ಟಿಯೊ ತಾವಕಾಂಘಿಭಜಕರ್ಕ್ಕೇಶ್ವರಮಂ ಸಾರ್ಚಿ ನೀಂ || ತಿರಿಯಲ್ ಕಿಯೋ ನೆಟ್ಟನೆಣ್ಣೆಸೆಗಳಂ ದಿಕ್ಷಾಲಕಗ್ಗಿ ೯ತ್ತು ಸಂ | ಚರಿಸಲ್ ಸಾರ್ದೆಯೊ ರುದ್ರಭೂಮಿಯೆಡೆಗಂ ಪಂಪಾವಧೂಟೀವರಾ || ಸಮುದ್ರ ಹರಿಯೆನೆ ಶಂಖಚಕ್ರಾಂಕಿತ ಶಿವನೆನೆ | ಸುರಸಿಂಧುವಹವಬ್ಬಭವನೆನೆ | ಸರಸತಿಯಾ ನಿಂದ್ರನೆನೆ ಬಳಾಹಕ | ಪರಿವೃತಮುದ್ರ ಪೂರ್ವಸಮುದ್ರ | ತೆರೆಯಿವು ನೀರ್ವಾವಿವು ಸಲಿಲದ ಮದ | ಕರಿಯಿವು ಜಲಗೊಳೋ ಮುಗಿಲಿವು | ನೊರೆಯಿವು ಸಂಕಿವು ಮುತ್ತಿವು ಸಿಡಿವ ನೀ | ರುರುಳಿಯಿವೆಂದdವಡಿಲ್ಲಲ್ಲಿ || - ಚಂದ್ರೋದಯ ಪುಳಕಿಸಿ ಮುತ್ತುಗಳಿ೦ ರಾಗಿಸಿ ಕೆಂಬ | ವಳವಳ್ಳಿಯಿಂ ನೊರೆಯಿಂ ನಕ್ಕು | ವಳಿಗೈಯಿಂ ತಮ್ಮ ಸಲುವವೊಲು | ಬಳೆವುದು ತಿಂಗಳೊಗೆಯಲಾಗ || ಹಂಸ | ತುಡುಕಾಸೆಗೊಲಿದು ಪಕ್ಕವನಲುಗಿಸಿ ಬಾ | ಝಿಡುತ ಬೆಂಬಿಡದ ಮಗಳಿಗೆ | ಒಡನಿವಂಡ ಸವಿದು ಕೊಡುತೆಆಕೆಯೊ | ಳಡಗಿಸಿ ಸಲಹುತಸೆವುವಂಚೆ | ಕೋಗಿಲೆ ಕನರ್ಗೊನರನು ಸವಿದು ಸೊಕ್ಕಿ ತಳಿರ್ಮಿಡಿ | ನನೆತೀವಿದೆಳಮಾವುಗಳನೇಕರಿ | ಮನಸಿಜನುಕ್ಕಡಗಾಳೆಗಳಿಂಚರ | ವೆನೆ ಕೂಗಿದುವು ಕೋಗಿಲೆಗಳು |