ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತ. - [16 ನೆಯ ಕರ್ದುಕುವ ಮಹದುಂಬಿಯ ಕೇಳಿಯ ಸಿರಿ | ಯೊದವಿದ ನಗಜಾತೆಯ ನಯ ನಾಂಚಲ | ಮುದವಿತ್ತಾವಗವೆನ್ನ ನಲಂಪಿಂದಲಸದೆ ರಕ್ಷಿಪುದು | ಬಿಗಿಯಪ್ಪುವ ಬಿಂ ತಗ್ಗಿದ ಕುಚ | ಯುಗದೊಳೊಗೆವ ಪುಳಕದ ಘನರಾಗ | ದ್ವಿಗುಣರಸೋದ್ರೇಕದೆ ವಿಗಳಿತಕಾಂಚಿಯ ಕಟ್ಟಂ ಪಡೆದಾ || ನಗೆಗಣೇಲ್‌ ಮಾಣದೆ ಮಾಣೆನ್ನನು ಬಗೆಗೊಳುವಕ್ಕ ಇಳುಸಿರ್ಗೊಳುತಾಶ | ↑ ದಳೊ ಕರಗಿದಳೋ ಮನ್ಮನದೊಳಗಣದಳೊ ಮಲಗಿದಳೊ | ಮಲ್ಲಣ್ಣ, 1413 ಇವನು ರೇವಣಸಿದ್ದೇಶ್ವರಕಾವ್ಯವನ್ನು ಬರೆದಿದ್ದಾನೆ. ಈತನು ವೀ ರಶೈವಕವಿ; “ ಜಾಲವಾದಿಯ ಶಂಕರಶಂಭುವ ಪಾದಪದ್ಮದ ಕೃಪೆಯ ವರ ಕವಿ” ಎಂಬುದರಿಂದ ಇವನ ಸ್ಥಳವು ಜಾಲವಾದಿಯಾಗಿರಬಹುದು, “ರೇ ವಣನ ಕಾವ್ಯವ ನಿರ್ಮಿಸಿದನೈ ಪೂರ್ವಭಿತ್ತಿಯಮೇಲೆ ಚಿತ್ರವನು” ಎಂಬು ದರಿಂದ ಪೂರ್ವಗ್ರಂಥಗಳನ್ನು ನೋಡಿ ಈ ಗ್ರಂಥವನ್ನು ರಚಿಸಿದಂತೆ ತಿಳಿಯುತ್ತದೆ. ಮದರಾಸ್ ಪ್ರಾಜ್ಯ ಕೋಶಾಲಯದಲ್ಲಿರುವ ಈ ಗ್ರಂಥದ ಒಂದುಪ್ರತಿಯಲ್ಲಿ ಗ್ರಂಥವು ಶಕ 1335 ರಲ್ಲಿ, ಎಂದರೆ 1413 ರಲ್ಲಿ ಹುಟ್ಟ ದಂತ ಹೇಳಿದೆ. ಇವನ ಗ್ರಂಥ ರೇವಣಸಿದ್ದೇಶ್ವರಕಾವ್ಯ ಇದು ಭಾಮಿನೀಷಟ್ವದಿಯಲ್ಲಿ ಬರೆದಿದೆ, ಸಂಧಿ 3, ಪದ್ಯ 310' ಆದ ರಲ್ಲಿ ವೀರಶೈವಾಚಾರರು ಐವರಲ್ಲಿ ಒಬ್ಬನಾದ ರೇವಣಸಿದ್ದನ 2 ಚರಿತ್ರವು ಹೇಳಿದೆ. ಆರಂಭದಲ್ಲಿ ಸರಸ್ವತಿಯ ಸ್ತುತಿಯಿದೆ, ಬಳಿಕ ಕವಿ ಗಣಪತಿ, ಬ್ರಹ್ಮವಿಷ್ಣು ಮಹೇಶರು ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಒಂದು ಪದ್ಯವನ್ನು ಉದಾಹರಿಸುತ್ತೇವೆ-- ಮಂತ್ರವಾದಿ ಮಾರಿಯನು ಹಿಡಿತಹೆನು ಮದ್ದಿಲಿ | ನೂಯಿಖಂಡುಗ ಬಡಿಸೆಯುಂಬೆನು | ಮೀ89 ಕಡಲೆಯ ಮೆಲುವೆಯಿಪ್ಪ ದುಖಂಡುಗವ || 1, ಮತ್ತೊಂದು ಪ್ರತಿಯಲ್ಲಿ ಸಂಧಿ 7, ಪದ್ಯ 326 ಎಂದಿದೆ, 2, Vol, I, 162,