ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಮಹಾಲಿಂಗದೇವ. 51 ಈತನ ಗ್ರಂಥಗಳಲ್ಲಿ 1. ಪ್ರಭುದೇವರ ಷಟ್ಟಲಜ್ಞಾನಚಾರಿತ್ರವಚನದ ಟೀಕೆ ಇದಕ್ಕೆ ಪಟ್ಟಿ ಲವಿವೇಕ ಎಂಬ ಹೆಸರೂ ಇರುವಂತೆ ತೋರುತ್ತದೆ; ಸ್ಥಲ 6, ವಚನ 694 ಆರಂಭದಲ್ಲಿ ಜಕ್ಕಣಾರನು ಪ್ರಾರ್ಧಿಸಲು ಮಹಾ ಲಿಂಗದೇವನು ತಮ್ಮ ಪರಮಜ್ಞಾನಾನುಭಾವಪ್ರಸನ್ನ ಪ್ರಕಾಶದಿಂ ಪಟ್ಟ ಅವನು ಪ್ರಭುದೇ ವರ ವಚನಂಗಳಿಂದ ಸಂಕಲ್ಪಿಸಿ ಸುಲಲಿತವಾಕ್ಯಾಮೃತವಾಗಿ ಆ ವಸನಂಗಳನು ಟೀಕಿಸಿ ಪರವಾರ್ಧತತ್ವಬೋಧೆಯನು ನಿರೂಪಿಸಿದ ಕ್ರಮವೆಂತೆಂದಡೆ ಎಂದಿದೆ. ಅಂತ್ಯದಲ್ಲಿ ಮಹಾಲಿಂಗದೇವರು ತಮ್ಮ ನಿಜಶಿಷ್ಯ ಭಕ್ತಿಭಂಡಾರಿ ಜಕ್ಕಣಾರಂಗೆ ಸತ್ಸೆ ಮಮಹಾನುಭಾವಸಂಬೋಧಿಯ ಸಂಬಂಧವಿರೂಪಣಕಾರಣಾರ್ಧಂ ವಿರಚಿತಮಪ್ಪ ಪ್ರಭುದೇವರ ಷಟ್ಟ ಲದ ಟೀಕು ಎಂದಿಗೆ, ಮತ್ತೊಂದು ಪ್ರತಿಯ ಕೊನೆಯಲ್ಲಿ - ಇದು ಪ್ರಭುದೇವರ ವಚನದಾಖ್ಯಾನ ಇದನು ಎನ್ನಲ್ಲಿ ತೋದ ಅಲ್ಪ ಮತಿಯಿಂದ ನಾನು ಅನ್ವಯವ ಮಾಡಿದೆನು ಎಂದಿದೆ, ಟೀಕೆಯ ಆರಂಭದಲ್ಲಿ ಬಸವ, ಚೆನ್ನಬಸವ, ಪ್ರಭುದೇವ ಇವರುಗಳ ಸ್ತುತಿ ಇದೆ. ಈ ಗ್ರಂಧದಿಂದ ಬಂದು ವಚನದ ಟೀಕೆಯನ್ನು ತೆಗೆದು ಬರೆಯುತ್ತೇವೆ ವಚನ|| ಶಿಲೆಯೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ, ಗೋಹೇಶ್ವರಾ ನಿಮ್ಮ ಶರಣಸಂಬಂಧ. ಟೀಕೆ || ಶಿಲೆಯೊಳಗಿರ್ಪ ಆಗ್ನಿ ಮೈದೋರಿದಹಾಂಗೆ ಪರಬ್ರಹ್ಮವು ಪಿಂಡಸ್ಟ ವಾಗಿರ್ದ ಕಾಣಿಸದೆಂಬುದೀಗ ಶಿಲೆಯೊಳಗಣ ಪಾವಕನಂತೆ ಎಂಬ ಶಬ್ದಕ್ಕರ್ಧ; ಆವು ದಾನೊಂದು ಪ್ರತಿಬಿಂಬವುದಕದೊಳಗಿರ್ದು ಆವುದಕದ ಗುಣಧರ್ಮಕರ್ಮವ ಹೊ ದದಹಾಂಗೆ ಆ ಪರಬ್ರಹ್ಮವು ಪಿಂಡಸ್ಟವಾಗಿ ರ್ದು ಆ ವಿಂಡದ ಗುಣಧರ್ಮಕರ್ಮವ ಹೊದ್ದ ದಿರ್ಪುದೀಗ ಉದಕದೊಳಗಣ ಪ್ರತಿಬಿಂಬದಂತೆ ಎಂಬ ಶಬ್ದಕ್ಕರ್ಧ; ಬೀಜದೊಳ ಗಿರ್ಪ ವೃಕ್ಷದಹಾಂಗೆ ಆ ಪರಬ್ರಹ್ಮವು ಪಿಂಡಮಧ್ಯದಲ್ಲಿ ಗೂಢವಾಗಿರ್ಪುದೆಂಬುದೀಗ ಬೀಜದೊಳಗಣ ವೃಕ್ಷದಂತೆ ಎಂಬ ಶಬ್ದಕ್ಕರ್ಧ; ಶಬ್ದದೊಳಗೆ ನಿಶ್ಯಬ್ದವಾಗಿರ್ದುದನು