ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

54 ಕರ್ಣಾಟಕ ಕವಿಚರಿತೆ. 15 ನಯ ಳುಳ್ಳ ದೇವರಾಯನಲ್ಲಿ ತಾನು ಮಹಾಪ್ರಧಾನನಾಗಿಯೂ ಅವನಿಗೆ ಆಪ್ತಮಿ ತ್ರನಾಗಿಯೂ ಅವನ ರಾಜ್ಯಾಭ್ಯುದಯಕ್ಕೆ ಕಾರಣಭೂತನಾಗಿಯೂ ಇದ್ದಂ ತೆ ಈ ಪದ್ಯಭಾಗಗಳಲ್ಲಿ ಹೇಳಿದ್ದಾನೆ ಧರೆಗಧಿಕ ಮಹರಾಯರ ಗಂಡನಪ್ರತಿಮ | ಬಿರುದಾಂಕ ಗಜವೇಂಟೆಕಾಲಿ ದೇವೇಂದ್ರಭೂ | ವರನ ಮಹದೃಶ್ವರ ಶರಧಿಕಂದ್ರೋದಯನುದಾರಕರುಣಾಧಾರನು || ನಿರುಪಮಿತಸಪ್ತಾಂಗರಾಜ್ಯವರ್ಧನಕಳಾ | ಧರನಮಲಕೀರ್ತಿಯುತ ಲಕ್ಕಣ್ಣ ದಂಡೇಶ. ಈ ಕಲಿಯುಗದೊಳತಿಪ್‌ಢಮತಿ ದೇವರಾಜೇಂದ್ರನ ಮಹಾಪ್ರಧಾನಂ, ಇಭ ವೇಂಟೆಕಾಟದೇವೇಂದ್ರನುನ್ನತ ಕೆಳೆಯನು. ಈ ದೊರೆ 1419ರಿಂದ 1446 ವರೆಗೆ ಆಳಿದ ವಿಜಯನಗರದ ರಾಜ ನಾದ ಪ್ರೌಢದೇವರಾಯನು, ಈತನಲ್ಲಿ ಕವಿ ಅಧಿಕಾರಿಯಾಗಿದ್ದ ವಿಷಯವು ಕೆಲವು ಶಾಸನಗಳಲ್ಲಿಯೂ ಹೇಳಿದೆ. ಕವಿಗೆ ಲಕ್ಕಣಾಮಾತ್ಯ, ಲಕ್ಕಣ ಒಡೆಯ ಎಂಬ ಹೆಸರುಗಳೂ ಉಂಟು. ಮುಳುಬಾಗಿಲ 2ನೆಯ ಮತ್ತು 96ನೆಯ ಶಾಸನಗಳಲ್ಲಿ(1431) ಈತನು ವಿಷ್ಣು ವರ್ಧನಗೋತ್ರದವನೆಂದೂ ಹೆಗ್ಗಡದೇವ ಒಮ್ಮಾಯಮ್ಮ ಇವರುಗಳ ಮಗನೆಂದೂ ಈ ತನಿಗೆ ಮಾದಣ್ಣದಣ್ಣಾಯಕನೆಂಬ ಒಬ್ಬ ಸಹೋದರನಿದ್ದನೆಂದೂ ದೇವರಾಯನ ಧರ್ಮ ದಿಂದ ವಿರೂಪಾಕ್ಷಪುರದ ವಿರೂಪಾಕ್ಷ ದೇವರಿಗೆ ಸೇವೆಮಾಡಿದನೆಂದೂ ಹೇಳಿದೆ ಕೆ ಲಾರದ 104ನೆಯ ಶಾಸನದಿಂದ(1428) ಈತನು ದೇವರಾಯನಿಗೆ ಧರ್ಮವಾಗಬೇಕೆಂ ದು ಭೂಗಾನವನ್ನು ಮಾಡಿದಂತೆಯೂ, ಬೌರಿಂಗ್ ಪೇಟೆ 72 (1430), 87 (1433) ಈ ಶಾಸನಗಳಿಂದ ಇವನು ಮುಳುವಾಗಿಲುರಾಜ್ಯದಲ್ಲಿ ಅಧಿಕೃತನಾಗಿದ್ದಂತೆಯೂ, ಮಾಲೂ ರು 1ನೆಯ ಶಾಸನದಿಂದ (1434) ಈತನೂ ಇವನ ಸಹೋದರನಾದ ಮಾದಣ ಒಡೆ ಯರೂ ದೇವರಾಯನ ನಿರೂಪದಿಂದ ಬಾಳುವಗೋಪರಾಜನಿಗೆ ತೇಕಲನ್ನು ಬಿಟ್ಟು ಕೊಟ್ಟಂತೆಯ ತಿಳಿಯುತ್ತದೆ. ಕೋಲಾರದ 104ನೆಯ ಶಾಸನದ ಕಾಲವನ್ನೇ ಈತ ನಿಗೆ ಮೇಲೆ ಕೊಟ್ಟಿದ್ದೇವೆ. - ಸಿದ್ದ ನಂಜೇಶನು (ಸು, 1650) ತನ್ನ ಗುರುರಾಜಚಾರಿತ್ರದಲ್ಲಿ ಈ ಕವಿ ಯನ್ನು ಸ್ಮರಿಸಿ ಇವನ ಗ್ರಂಥದಿಂದಲೂ ವಿಷಯಗಳನ್ನು ಸಂಗ್ರಹಿಸಿದಂತೆ ಹೇಳುತ್ತಾನೆ.