ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಜಕ್ಕಣಾರ್ ಜಕ್ಕಣಾರ್ ಸು. 1430 ಈತನು ನೂರೊಂದು ಸ್ಥಳವನ್ನು ಎಂದರೆ ಏಕೋತ್ತರಶತಸ್ಥಲವನ್ನು ಬರೆದಿದ್ದಾನೆ, ಇವನು ವೀರಶೈವಕವಿ: ಮಹಾಲಿಂಗದೇವನ' (ಸು. 1425) ಶಿಷ್ಯನಾದ ಕುಮಾರಬಂಕನಾಥನ ಕರಜಾತನು, ಇವನಿಗೆ ಜಕ್ಕಣ್ಣ, ಜಕ್ಕಪ್ಪ ಎಂಬ ಹೆಸರೂ ಉಂಟು; ಭಕ್ತಿಭಂಡಾರಿ ಎಂಬ ಬಿರುದಿದ್ದಂತೆ ತಿಳಿಯುತ್ತದೆ. ಇವನು ವಿಜಯನಗರದ ಪ್ರೌಢದೇವರಾಯನಲ್ಲಿ (14191446) ದಂಡನಾಯಕನಾಗಿದ್ದನು ಇವನ ಕಾಲವ ಸುಮಾರು 1430 ಆಗಬಹುದು, ಮಹಾಲಿಂಗದೇವನು ಈತನ ಉಪದೇಕಾರ್ಥವಾಗಿ ಎರಡು ಗ್ರಂಥಗಳನ್ನು ಬರೆದ ಸಂಗತಿ ಹಿಂದೆಯೇ ತಿಳಿಸಿದೆ !, ಕಲ್ಲಮಠದ ಪ್ರಭು ದೇವ, ಪ್ರಭುಲಿಂಗಲೀಲಾಕರ್ತೃ ಚಾಮರಸ, ಕರಸ್ಥಲದ ನಾಗಿದೇವ, ವೀ ರಡೆಯ ಮುಂತಾದ ವಿರಕ್ತರು ಈತನ ಸಮಕಾಲದವರಾಗಿದ್ದಂತೆ ತಿಳಿಯುತ್ತದೆ. ಇವನು ವೀರಶೈವಗ್ರಂಧಗಳ ರಚನೆಗಾಗಿ ಅಪರಿಮಿತವಾದ ದ್ರವ್ಯವನ್ನು ವೆಚ್ಚಮಾಡಿದಂತೆ ಗುಬ್ಬಿ ಯಮಲ್ಲಣಾಕ್ಯನ ವೀರಶೈವಾಮೃತ ಪುರಾಣದಲ್ಲಿ (1530) ಹೇಳಿದೆ. ಇವನ ಗ್ರಂಥ ನೂರೊಂದುಸಲ ಇದರ ವಿಷಯವಾಗಿ ಗ್ರಂಥಾರಂಭದಲ್ಲಿ ಹೀಗೆ ಹೇಳಿದೆ' -- ಈ ಶಾಸ್ತ್ರವು ಕಾಮಿಕಾಗಮದಲ್ಲಿ ಹೇಳಿದೆ ಅದಂ ರೇವಣಸಿದ್ದೇಶ್ವರನು ಅಗ »ಂಗೆ ಬೋಧಿಸಿದಂ, ಅದೇ ವೀರಶೈವರಿಗೆ ಸ್ಥಲಭೇದದಿಂದ ಆಯಿಪ್ರಕಾರವನುಳ್ಳು ದಹುದು. ಮೊದಲಲ್ಲಿ ಭಕ್ತ ಸ್ಥಲ 15, ಮಾಹೇಶ್ವರಸ್ಥಲ 9, ಪ್ರಸಾದಿಸ್ಥಲ 7, ಪ್ರಾಣಲಿಂಗಿಸ್ಟಲ 5, ಶರಣಸ್ಥಲ 4, ಐಕ್ಯಸ್ಥಲ 4, ಅನಂತರ ಲಿಂಗಸ್ಥಲಂಗಳನಾಶ್ರ ಯಿಸಿದಲ್ಲಿ ಅಲ್ಲಿ ಆಚಾರಲಿಂಗಸ್ಥಲ 9, ಗುರುಲಿಂಗಸ್ಥಲ9, ಶಿವಲಿಂಗಸ್ಸಲ9, ಜಂಗಮ ಲಿಂಗಸ್ಥಲ 1೩, ಪ್ರಸಾದಿಲಿಂಗಸ್ಥಲ9, ಮಹಾಲಿಂಗಸ್ಥಲ9, ಅಂತು ಆಂಗಸ್ಥಲ 442 ಲಿಂಗಸ್ಥಲ 57, ಉಭಯಂ ಪಿಂಡಾದಿ ಜ್ಞಾನಶೂನ್ಯಾಂತ 101 ಸ್ಥಲ.” ಅವನೆ ನಿರೂ ಪಿಸಿದ ಪುರಾತನರ ಮಹಾವಚನಂಗಳೊಳಗೆ ಜಕ್ಕಣಾತ್ಯರು ಸಾರಾಯವಾದ ನೂಲೂಂ ದು ಸ್ಥಲವಚನಗಂಳಂ ತೆಗೆದುಕೊಂಡು ಸೂತ್ರವಿಟ್ಟು ಸಂಗ್ರಹಿಸಿದರು, ಅಂತು ಅಂಗಸ್ಥಲ 44ಕ್ಕಂ ಸೇರಿದ ಪದನು 253 ; ಲಿಂಗಸ್ಥಲ 57ಕ್ಕಂ ಸೇರಿದ ಪದನು 297 ; ಉ ಭಯಂ 550 I 50ನೆಯ ಪುಟವನ್ನು ನೋಡಿ 2 52ನೆಯ ಪುಟವನ್ನು ನೋಡಿ