ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ಕರ್ನಾಟಕ ಕವಿಚರಿತೆ. [15 ನೆಯ ಈ ಗ್ರಂಥದ ವಿಷಯವಾಗಿಯೂ ಚಾಮರಸ ಪ್ರಭುಲಿಂಗಲೀಲೆ ಯ ವಿಷಯವಾಗಿಯೂ ಭೈರವೇಶ್ವರ ಕಾವ್ಯದ ಕಥಾಸೂತ್ರರತ್ನಾಕರದಲ್ಲಿ (1672) ಹೀಗೆ ಹೇಳಿದೆ ಕುಂತಲದೇಶದಲ್ಲಿ ವಿದ್ಯಾನಗರಿಯೆಂಬ ಪಟ್ಟಣದಲ್ಲಿ ಪ್ರೌಢರಾಯನಿರ್ಪನು. ಅವನ ಗುರುಗಳು ಮುಕುಂದಪೆದ್ದಿ, ವೃಂದಾಚಾರನು. ಅವರು ವಿಷ್ಣು ಮತವ ಬೋಧಿನುತ ತಮ್ಮ ಭಾರತರಾಮಾಯಣಮಂ ಒಂಬತ್ತು ತಿಂಗಳು ಬೋಧಿಸಿ 18 ಮೆಟ ವಣಿಗೆಯಂ ಮಾಡಿರಲು, ಇತ್ತ ವೀರಶೈವಕೆ ಮುಖ್ಯವಾದ 21 ಗುರುಸಂಪ್ರದಾಯ ಕ್ಕೆ 1 ಶ್ರೇಷ್ಠರಾದ ಕುಮಾರಬಂಕನಾಧದೇವರ ಶಿಷ್ಯರಾದ ಜಕ್ಕಣಾರ್ ಪಂಡಿತರು ತಮ್ಮ ಗುರುನಿರೂಪದಿಂದ ಸಕಲಪುರಾತನರ ವಚನಂಗಳಿಂದ ಏಕೋತ್ತರಶತಸ್ಥಲವಂ ಸೂತ್ರವ ಕಲ್ಪಿಸಿ ಸ್ಥಲವಿಟ್ಟು ವಸ್ತು ಕವರ್ಣಕದಿಂದ ಸಂಗ್ರಹಿಸಿ ಪ್ರಭುದೇವರು ನಿರೂ ಪಿಸಿದ ವಚನಂಗಳಿಗೆಯ ಸೂತ್ರಸ್ಥಲವಿಟ್ಟು ಅರ್ಧಪದ್ಧತಿಯ ವ್ಯಾಖ್ಯಾನವಂ ಮಾಡಿ ಕಲ್ಲಮರದಪ್ರಭುದೇವಾಚಾರರು, ಚಾಮರಸಯ್ಯನೆಂಬ ಆರಾಧ್ಯರು, ಕರಸ್ಥಲದ ನಾಗಿದೇವರು, ವೀರಣ್ಣೂಡೆಯದೇವರು ಮುಖ್ಯವಾದ 101 ವಿರಕ್ತರು ಭಕ್ತರು ಸಹ ವಾಗಿ ಏಕೋತ್ತರಶತಸ್ಥಲವಂ ಪುಷ್ಪಕದೊಳಗಿಟ್ಟು ಸರ್ವಸಂಭ್ರಮದಿಂದ ರಾತ್ರಿಯಲ್ಲಿ ಮೆಳವಣಿಗೆಯಂ ಮಾಡಲು, ಮುಕುಂದಪೆದ್ದಿ ನೋಡಿ ಜಕ್ಕಣ್ಣ ದಂಡೇಶಮಂತ್ರಿ ಪ್ರೌ ಢನ ಸಭೆಗೆ ಬಂದಾಗ ಜಕ್ಕಣ್ಣನಿಗೂ ಅವನಿಗೂ ವಾಗ್ವಾದವಾಗಿ ಜಕ್ಕಣ್ಣನು " ಹರಿ ಯಜೇಂದ್ರಾದಿಮನುಮುನಿಗಳಿಗೆಯ ಪ್ರಮಧರ ಮಹತ್ತ್ವ ತಿಳಿಯದು” ಎನ್ನಲು ಆ ಮಾತಿಗೆ ವೃಂದಾಚಾರನು “ನಮ್ಮ ಭಾರತವ ಸತ್ತವರ ಕಥೆಯೆಂದಿರಿ; ಸತ್ತವರಲ್ಲದೆ ನಿತ್ಯ ರಾದವರ ಕಥೆಯನು ವೀರಶೈವರು ಮಾಡಿದ ನಿಮ್ಮ ಗಣಂಗಳ ಕಥೆಯನು ತಂದಡೆ ರಾಜ ನು ಕೊಡುವ ತ್ರಿಸರವನು ಕಂಕಣವನು ಪಡೆಯಬಹುದು, ಒಂದು ತಿಂಗಳಿಗೆ ಕೊಂಡು ಬನ್ನಿ ” ಎಂದು ಹೇಳಲು, ಬಳಿಕ ಚಿಂತೆಯಿಂದ ಆರಾಧ್ಯಚಾಮಯ್ಯನು ನಿದ್ರೆಗೆ ಯಲು ಸ್ವಪ್ನದಲ್ಲಿ ವೀರಭದ್ರೇಶ್ವರನು ಬಂದು “ ಚಾಮಯ್ಯ ! ನೀನು ಚಿಂತಿ ಸದಿರು. ಪ್ರಭುಲಿಂಗಲೀಲೆ 25ಗತಿ ಎಂದು ದಿನ 1ಕ್ಕೆ 101 ಸದನ ಮಾಡಿ 11 ದಿನಕ್ಕೆ ಸಮ ಪ್ರಿಯಂ ಮಾಡು ” ಎಂದು ನಿರೂಪಿಸಲು, ಚಾಮಯ್ಯನು ತಾ ಕಂಡ ಸ್ವಪ್ನವನು ಶಿವಭಕ್ತರಿಗೆ ಸೇರಿ ಪುಷ್ಪದ ತೋಂಟದಲ್ಲಿ ಕುಳ್ಳಿರ್ದು ಲೀಲೆ ತುಂಬಿದಂತೆ ದಿನ 1ಕ್ಕೆ 101 ಪದನ ಬರೆದು 11 ದಿನಕ್ಕೆ ಸಮಾಪ್ತಿಯಂ ಮಾಡಿ ಜಕ್ಕಣಾರರು ಮೊದಲಾದ 1, $೦ನೆಯ ಪುಟವನ್ನು ನೋಡಿ