ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಚಾಮರಸ. 59 ಭಕ್ತರುಸಹವಾಗಿ ಪ್ರೌಢರಾಯನ ಸಭೆಗೆ ಪ್ರಭುಲಿಂಗಲೀಲೆಯಂ ಕೊಂಡು ಪೋಗಿ ಓದಿ ಸಲು ಪ್ರೌಢರಾಯನು ಮೆಚ್ಚಿ ಕಂಕಣಿಸರವನು ಕೊಟ್ಟು ಜಕ್ಕಣಾರರ ಮನ್ನಿಸಲು ಜಕ್ಕಣಾರರು, ಕಲ್ಲಮರದಪ್ರಭುದೇವರು, ಚಾಮಯ್ಯ ಮೊದಲಾದ ಶಿವಭಕ್ತರು ಪ್ರಭುಲಿಂಗಲೀಲೆಯಂ ಮೆಳವಣಿಗೆಯಂ ಮಾಡಿ ಸುಖದಲ್ಲಿರ್ದರು. ಚಾಮರಸ, ಸು. 1430 | ಈತನು ಪ್ರಭುಲಿಂಗಲೀಲೆಯನ್ನು ಬರೆದಿದ್ದಾನೆ. ಇವನು ವೀರಶೈವ ಕವಿ, ಆರಾಧ್ಯ ಬ್ರಾಹ್ಮಣನು; ಜಕ್ಕಣಾರನ ' ಸಮಕಾಲದವನು, ಪ್ರೌಢ ದೇವರಾಯನ (1419-1446) ಸಭೆಯಲ್ಲಿ ತನ್ನ ಗ್ರಂಧವನ್ನು ಓದಿ ಮಯ್ಯಾ ದೆಯನ್ನು ಪಡೆದಂತೆ ತಿಳಿವುದರಿಂದ ” ಈತನ ಕಾಲವು ಸುಮಾರು 1430 ಆಗಬಹುದು. ಪ್ರೌಢದೇವರಾಯನ ಕಾಲದಲ್ಲಿ ವಿಜಯನಗರದಲ್ಲಿದ್ದ 101 ವಿರಕ್ತರೊಳಗೆ ಇವನೊಬ್ಬನು ಎಂದು ವೀರಶೈವಗ್ರಂಥಗಳಿಂದ ತಿಳಿಯು ತದೆ. ಗುರುರಾಜಚಾರಿತ್ರದಲ್ಲಿ (ಸು 1650) .ಈತನಿಗೆ ವೀರಶೈವಾಚಾರ್ ಸಾರೋದ್ಧಾರ, ಅನ್ಯಮತಕೊಳಾಹಳ ಎಂಬ ವಿಶೇಷಣಗಳು ಹೇಳಿವೆ. ಕವಿ ಈ ಗ್ರಂಥದಲ್ಲಿ ತನ್ನ ಹೆಸರನ್ನು ಹೇಳಿಕೊಂಡಿಲ್ಲದಿದ್ದರೂ ಇತರಗ್ರಂ ಧಗಳಿಂದ ಇದು ಏತತ್ತವೆಂಬುದು ವ್ಯಕ್ತವಾಗುತ್ತದೆ. ರಾಘವಾಂಕ ಚಾರಿತ್ರದಲ್ಲಿ ಈತನು ಉದ್ದನೆಯ ವೀರೇಕನಿಂದ ವೀರಶೈವೋಪದೇಶವನು ಪಡೆದು ಪ್ರಭುಲಿಂಗಲೀಲೆಯನ್ನು ರಚಿಸಿದಂತೆ ಹೇಳಿದೆ. ಇವನ ಗ್ರಂಥ ಪ್ರಭುಲಿಂಗಲೀಲೆ ಇದು ಭಾಮಿನೀಸಮ್ಪದಿಯಲ್ಲಿ ಬರೆದಿದೆ; ಗತಿ 25, ಪದ್ಯ 1111. ಇದ ರಲ್ಲಿ ಪ್ರಭುದೇವನ ಅಥವಾ ಅಲ್ಲಮನ ಚರಿತವು ಹೇಳಿದೆ. ಈ ಗ್ರಂಧ ರಚನೆಯ ವಿಷಯವಾಗಿ ಭೈರವೇಶ್ವರಕಾವ್ಯದ ಕಥಾಸೂತ್ರರತ್ನಾಕರದಲ್ಲಿ (1672) ಹೇಳಿರುವ ಅಂಶಗಳನ್ನು ಹಿಂದೆಯೇ ತಿಳಿಸಿದ್ದೇವೆ. ಇದೇ ವಿಷ ಯವಾಗಿ ಗುರುರಾಜಚಾರಿತ್ರದಲ್ಲಿ ಹೀಗೆ ಹೇಳಿದೆ - ನೈಪಾಸ್ವಾನದೊಳು ಇವರ್ತಮಾನದಿ ಕವಿತಾಪ್ರೌಢರಾರೆಂದೆನೆ ಕುಮಾರ ವ್ಯಸಕವಿ, ಚಾಮರಸರು ಎಂದಿವರಂ ಕರೆದು ಭುವನನುತಭಾರತವ ಕರ್ಣಾಟಭಾ -_1 57 ನೆಯ ಪುಟವನ್ನು ನೋಡಿ 2 58ನೆಯ ಪುಟವನ್ನು ನೋಡಿ, 3 Vol 1, 148