ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ಕರ್ಣಾಟಕ ಕವಿಚರಿತೆ. [15 ನೆಯ ರತಿಯೊಳುಸುರಿ ನೀವೆಂದೊರೆಯಲು ಇರ್ವರೂ ಬೇಟೆಯೊಂದೊಂದು ಕೃತಿವೇಲುತಿರೆ ಕಬ್ಬಿಗರು ಬಂದು ಚಾಮಣ್ಣ ನಿನ್ನ ಕಾವ್ಯವ ನೋಟ್ಬವು ಎನಲು ಪುಸ್ತಕವ ತಂದು ಕಾಳೆಗದ ಕಧನದ ಓಲೆಯ ಹೆಬ್ಬೆರಳು ಹಿಳಿದು ಹಿಂಡೆ ರಕ್ತಂ ಬೀಟ ಸರ್ವರೂ ರಸಕಾವ್ಯವಹುದೆಂದು ಕೊಂಡಾಡಿ ಪೋದರು. ಆ ವಾರ್ತೆಯನು ಕುಮಾರವ್ಯಾಸನು ಕೇಳಿ ಚಿಂತಾಕ್ರಾಂತನಾಗಿ ತನ್ನ ಹೆಂಡತಿಯೊಡನೆ ನಿಮ್ಮಣ್ಣನು ಹೇರಿದ ಕೃತಿಯನು ನೀನು ತಂದು ಸುಟ್ಟು ಬೊಟ್ಟಿಟ್ಟೂಡೆ ನಾನು ಬಾಳ್ವನು ಅಲ್ಲದೊಡೆ ಸಾವೆನು ಎನಲು ಅವಳು ಅಂತೆಗೈದಳು. ಚಾಮರಸನ ಕೃತಿ ನಷ್ಟವಾಯಿತು, ಅವನು ಚಿಂತೆಯಲ್ಲಿರೆ ಈಶ್ವರನು ಸ್ವಪ್ನದಲ್ಲಿ ಬಂದು ಅನ್ಯದೈವವ ಕೀರ್ತಿಸುವುದುಂಟೆ? ” ಎನಲು ಚಾಮ ರಸನು ಸಂಸಾರವನು ಬಿಟ್ಟು ಪಂಪೆಗೆ ಹೋಗಿ ದೀಕ್ಷೆಯ ಪಡೆದು ನಿಜಭಕ್ತನಾಗಿದ್ದನು. ಭಾರತವನೆರೆದಾ ಕುಮಾರವ್ಯಾಸಂಗೊಸೆದು | ಭೂರಮಣನೊಲಿದು ಕನಕಸ್ಸಾನಮಂ ಮಾದ್ರೂ | ಡಾರಂಭಿಸಿ ಸತ್ತವರ ಕಥೆಗುಂಟೆ ಕನಕಸ್ಸಾನ ತೆಗೆಯೆನ್ನಲು | ಧಾರಿಣಿಯೊಳುಳ್ಳ ಕಥೆಯಲ್ಲಿ ಸತ್ತವರ ಕಥೆ | ತೋಈ ಬದುಕಿದರ ಕಥೆಯೊಳವೆ ಎನಲೊಳವೆಂದು | ಚಾರುದ್ರಭುಲಿಂಗಲೀಲೆಯನೊರೆದು ಮೆಸಿದಂ ಲೀಲೆಯಾ ಚಾಮರಸನು || ಇಲ್ಲಿ ಹೇಳಿರುವ ದೊರೆ ಪ್ರೌಢದೇವರಾಯನೇ ಆಗಿರಬೇಕು. ಈ ಇತಿಹಾಸವು ನಿಜವಾಗಿದ್ದ ಪಕ್ಷದಲ್ಲಿ ಭಾರತವನ್ನು ಬರೆದ ಕುಮಾರವ್ಯಾ ಸನು ಚಾಮರಸನ ಭಾವನೆಂದೂ ಪ್ರೌಢದೇವರಾಯನ ಕಾಲದಲ್ಲಿ ಇದ್ದನೆಂ ದೂ ನಂಬಬೇಕಾಗುತ್ತದೆ. ಈ ಗ್ರಂಥವು ತೆಲುಗಿನಲ್ಲಿಯೂ ಅರವಿನಲ್ಲಿಯೂ ಪದ್ಯರೂಪವಾಗಿ ಭಾಷಾಂತರ ಮಾಡಲ್ಪಟ್ಟಿದೆ. ಗ್ರಂಥಾವತಾರದಲ್ಲಿ ಗುರುಗೊಗೇಶ್ವರಲಿಂಗದ ಸ್ತುತಿ ಇದೆ. ಬಳಿಕ ಕವಿ ಬಸವನಿಂದ ಗಾಣದ ಕನ್ನಪಯ್ಯನವರೆಗೆ ! ಪುರಾತನರನ್ನು ಸ್ತುತಿಸಿ ದ್ದಾನೆ, ತನ್ನ ಗ್ರಂಥದ ವಿಷಯವಾಗಿಯೂ ಅದನ್ನು ಅಧಿಕರಿಸುವವರ ವಿಷಯವಾಗಿಯೂ ಹೀಗೆ ಹೇಳಿದ್ದಾನೆ _1 ಸಂಗನಬಸವ ಚೆನ್ನಸಂಗನ ಬಸವ, ಸಿದ್ದರಾಮ, ಮಹದೇವಿಯಕ್ಕ ಮಡಿವಳ ಮಾಚಿದೇವ ಮರುಳುಶಂಕರದೇವ ಕಿನ್ನರಿಯಬೊಮ್ಮಣ್ಣ, ಏಲೇಶ್ವರದ ಕೇತಯ್ಯಗಾಣದ ಕನ್ನಪಯ್ಯ