ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತ [18 ನೆಯ ಅಷ್ಟಮದಂಗಳೆಲ್ಲವನು ದಹನವ ಮಾಡಿದನೆಂಬುದೀಗ ಎಂಟುಕರಿಗಳ ಸುಟ್ಟು ಎಂಬ ಶಬ್ದಕ್ಕರ್ಧ; ಇಂತು ಜ್ಞಾನಮುಖದಿಂದ ದೇಹಭಾವವಯದು ಶಿವಭಾವಧ್ಯಾನದಿಂದ ಜನನಮರಣವ ಪರಿಹರಿಸಿ ಭವಸಾಗರವ ಜಯಿಸಿದ ಶರಣನೆಂಬುದೀಗ ಕಂಟಕಂಗಳ ಗೆಲಿ ದು ದಾಂಟದೆನು ಸಂಸಾರಸಾಗರವನು ಎಂಬ ಶಬ್ದಕ್ಕರ್ಧ. ತಾತ್ಪಯ್ಯ || ಇಂತು ಜ್ಞಾನದಿಂದ ದೇಹವಾಸನೆಯದು ಆ ಶಿವಜ್ಞಾನ ದಿಂದವೆ ಭವವಿರಹಿತವಹುದಲ್ಲದೆ ಮಿಕ್ಕಿನ ಅಟ್ಟಾಂಗಯೋಗಂಗಳ ತನುದಂಡನೆಯ ಕರ್ಮಂಗಳಿಂದ ದೇಹನಾಸನೆಯರಿಯದೆಂದು ಪ್ರಭುದೇವರು ಸಿದ್ಧರಾಮಯ್ಯದೇವರಿಗೆ ಉಪದೇಶಿಸಿದರೆಂಬುದೀವಶನಾರ್ಧ, -2 = ಕುಮಾರವ್ಯಾಸ ಸು, 1430 ಈತನು ಭಾರತದಲ್ಲಿ ಮೊದಲು 10 ಪರ್ವಗಳನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ; ಮಾಧ್ವನೆಂದು ಕೆಲವರು ಹೇಳುತ್ತಾರೆ. ಇವನ ಸ್ಥಳ ಕೋಳಿವಾಡು ಎಂದೂ ಇವನ ಪೂರ್ವಿಕರು ಕುಲಕ್ರಮವಾಗಿ ಸೇನಬೋವರೆಂದೂ ಇವನ ನಿಜವಾದ ಹೆಸರು ನಾರಣಪ್ಪ ಎಂದೂ ಗದುಗಿನ ಪ್ರಾಂತದ ಜನರಲ್ಲಿ ಪ್ರವಾದವಿದೆ. ಈತನು ಗದುಗಿನ ವೀರನಾ ರಾಯಣದೇವರ ಭಕ್ತನು, ಆ ದೇವರ ಅಂಕಿತದಲ್ಲಿಯೇ ತನ್ನ ಗ್ರಂಥವನ್ನು ಬರೆದಿದ್ದಾನೆ. ವಿಜಯನಗರದ ದೊರೆಯಾದ ಕೃಹ್ಮದೇವರಾಯನ (1509 -1529) ಆಳಿಕೆಯ ಆರಂಭದಲ್ಲಿ ಈ ಗ್ರಂಥವು ಹುಟ್ಟಿ ತಂದು ಮೆ|| ರೈಸ್, ಮ| ಕಿಟ್ಟಲ್ ಮುಂತಾದವರು ಬರೆದಿರುವುದನ್ನು ಎಲ್ಲರೂ ಒಪ್ಪಿಕೊಂಡಿರು ವಂತ ತೋರುತ್ತದೆ. ಈ ಹೇಳಿಕೆಗೆ ಸರಿಯಾದ ಆಧಾರವಿರುವಂತೆ ಕಾಣು ವುದಿಲ್ಲ, ತಿಮ್ಮಣ್ಣ ಕವಿ ಈ ಕೃಹ್ಮದೇವರಾಯನ ಆಜ್ಞಾನುಸಾರವಾಗಿ ಬರೆ ದಿರುವ ಕೃತ್ಮರಾಜಭಾರತದ ಆದಿಭಾಗದಲ್ಲಿ ಕುಮಾರವ್ಯಾಸನ ಭಾರತವು ಈ ದೊರೆಯ ಆಳಿಕೆಯಲ್ಲಿ ಹುಟ್ಟಿದಂತ ಹೇಳಿಲ್ಲ. ತಿಮ್ಮಣ್ಣ ಕವಿಯನ್ನು ಕುರಿತು ದೊರೆ “ಲೇಸೆನಿಸಿ ಮೊದಲಾ ಕುಮಾರವ್ಯಾಸ ದಕಪರ್ವಗಳ ಹೇ ದ ಭಾರತದ ಉ69ದ ಪರ್ವಗಳ ನೀ ಸಕಲಜನ ಮೆಚ್ಚುವಂತೆ ಪೇಟ” ಎನ್ನುತ್ತಾನೆ, “ಮೊದಲಾ ಕುಮಾರವ್ಯಾಸ” ಎಂಬುದರಿಂದ ಈದೊರೆಯ ಕಾಲಕ್ಕೆ ಹಿಂದೆಯೇ ಆ ಭಾರತವು ಹುಟ್ಟಿರಬೇಕೆಂದು ಊಹಿಸಬಹುಧಾ