ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಕುಮಾರವ್ಯಾಸ. 6 ಗಿದೆ, ಈ ಊಹೆಯನ್ನು ವೀರಶೈವಗ್ರಂಥಗಳಲ್ಲಿ ಕುಮಾರವ್ಯಾಸನವಿಷಯ ವಾಗಿ ಹೇಳಿರುವ ಒಂದು ಇತಿಹಾಸವು ದೃಢೀಕರಿಸುತ್ತದೆ. ಗುರುರಾ ಜಚಾರಿತ್ರ (ಸು, 1650), ಚೋರಬಸವಂತರಿತ್ರೆ (1763) ಈ ಗ್ರಂಥಗಳಲ್ಲಿ ಈ ಇತಿಹಾಸವು ಹೀಗೆ ಹೇಳಿದೆ. ವಿಜಯನಗರದ ಪ್ರೌಢದೇವರಾಯನು (1419-1446) ತನ್ನ ಆಸ್ಥಾನದಲ್ಲಿ ಕವಿತಾಬ್ರೌಢರಾದ ಕುಮಾರವ್ಯಾಸ, ಚಾಮರಸ ಇವರಿಬ್ಬರನ್ನೂ ಕರೆದು ಭಾರತ ವನ್ನು ಕನ್ನಡದಲ್ಲಿ ಬರೆಯಿರಿ ಎಂದು ಆಜ್ಞಾಪಿಸಲು, ಅವರಿಬ್ಬರೂ ಬರೆದರು, ವಿದ್ಯಾಂ ಸರು ಚಾಮರಸನ ಕಾವ್ಯವನ್ನು ನೋಡಿ ರಸಕಾವ್ಯವಹುದೆಂದು ಕೊಂಡಾಡಲು, ಕುಮಾರವ್ಯಾಸನು ಚಿಂತಾಕ್ರಾಂತನಾಗಿ ತನ್ನ ಹೆಂಡತಿಯೊಡನೆ ನಿಮ್ಮಣ್ಣನಾದ ಚಾನು ರಸನು ಹೇಳಿದ ಕೃತಿಯನ್ನು ನೀನು ತಂದು ಸುಟ್ಟು, ಬೊಟ್ಟಿಟ್ಟರೆ ನಾನು ಬಾಳುವೆನು, ಅಲ್ಲದೊಡೆ ಸಾವೆನು ಎನ್ನಲು ಅವಳು ಹಾಗೆಯೇ ಮಾಡಿ ಗಂಡನನ್ನು ಸಮಾಧಾನಪಡಿ ಸಿದಳು, ಚಾಮರಸನ ಕೃತಿ ನಷ್ಟವಾಗಲು, ಅವನು ಪ್ರಭುಲಿಂಗಲೀಲೆಯೆಂಬ ಬೇ ರೊಂದು ಗ್ರಂಧವನ್ನು ರಚಿಸಿ ದೊರೆಯ ಸಭೆಯಲ್ಲಿ ಓದಲು, ವಿದ್ವಾಂಸರೆಲ್ಲರೂ ಮೆಚ್ಚಿ ದರು; ದೊರೆ ಆನೆಯಮೇಲೆ ಮೆರವಣಿಗೆ ಮಾಡಿಸಿದನು, ಕುಮಾರವ್ಯಾಸನಿಗೆ ಕನ ಕಾಭಿಷೇಕವನ್ನು ಮಾಡುವುದಾಗಿ ದೊರೆ ಮೊದಲು ನಿಶ್ಚಯಿಸಿದ್ದನು. ಆದರೆ ಚಾವ ರಸನು-ಕುಮಾರವ್ಯಾಸನ ಭಾರತವು ಸತ್ತವರ ಕಥೆ, ನನ್ನ ಗ್ರಂಧವು ಸಾಯದ ಪುಣ್ಯ ಪುರುಷರ ಚರಿತೆ-ಎಂದು ಹೇಳಲು, ದೊರೆ ನಿಜವೆಂದು ತಿಳಿದು ಭಾರತವನ್ನು ನಿಸ್ಸಾರ ಗೈದು ಕುಮಾರವ್ಯಾಸನಿಗೆ ಕನಕಸ್ಮಾನವನ್ನು ಪರಿಹರಿಸಿ ಚಾಮರಸನಿಂದ ವೀರಶೈವದೀ ಕ್ಷೆಯನ್ನು ಪಡೆದನು. ಇದರಿಂದ ಕುಮಾರವ್ಯಾಸನು ದೇವರಾಯನ ಆಳಿಕೆಯಲ್ಲಿದ್ದನೆಂದೂ ಪ್ರಭುಲಿಂಗಲೀಲೆಯನ್ನು ಬರೆದ ಚಾಮರಸನ ತಂಗಿಯ ಗಂಡನೆಂದೂ ತಿಳಿಯುತ್ತದೆ. ಈ ಆತಿಹಾಸದ ಪ್ರಕಾರ ಇವನ ಕಾಲವು ಸುಮಾರು 1430 ಆಗುವುದು, ಇದು ಇವನ ನಿಜವಾದ ಕಾಲವೆಂದು ತೋರುತ್ತದೆ. ಈ ಕವಿಯನ್ನು ಕುಮಾರವಾಲ್ಮೀಕಿ (ಸು, 1500), ಲಕ್ಷಕವಿ (1723), ಕೋನಯ್ಯ (ಸು. 1750), ಬೊಟ್ಟೂ ಕುರಂಗ(ಸು, 1760) ಮೊದ ಲಾದ ಕವಿಗಳು ಸ್ತುತಿಸಿದ್ದಾರೆ. 60 ನೆಯ ಪುಟವನ್ನು ನೋಡಿ.