ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ ಶತಮಾನ] ಕುಮಾರವ್ಯಾಸ. ಎಂಬ ಗದ್ಯವಿದೆ. ಜೈಮಿನಿಭಾರತವನ್ನು ಬಿಟ್ಟರೆ ಇದೇ ಕನ್ನಡಿಗರ ವಿಶೇಪಾದರಕ್ಕೆ ಪಾತ್ರವಾದ ಗ್ರಂಥವು, ಇದರಿಂದ ಕೆಲವು ಪದ್ಯಗಳನ್ನು ಉದ್ದರಿಸಿ ಬರೆಯುತ್ತೇವೆ-- ದೈವದಿಯ ಸೌಂದಯ್ಯ ಹೊರೆಯ ಸಖಿಯರ ನೋಟ ಮೈಯಲಿ | ಹರಿದು ಒಟಿಲನ್ನು ಚಿತ್ರ ವೀಕೆಯ | ಧರಿಸಿ ಕುಸಿಯನ್ನು ಕಿವಿಗಳಿಗೆ ಮೆಲ್ನುಡಿಯ ಸವಿಸವಿದು || ಅರುಚಿಯಾಗದುನಾಸಿಕವು ಮೈ | ಪರಿಮಳದ ಪೂರದಲಿ ಗಂಧಾಂ | ತರಕೆ ನೆಯದು ರೂಪವೇನೆಂಬೆನು ನಿತಂಬಿನಿಯಾ | ನಳಿನಮುಖಿಯರ ಸಕಲಸೃಷ್ಟಿಗೆ | ಕಳಸವಿದು ಸೌಂದಯ್ಯ ವಸನದ | ವಿಲಸವಿದು ರತಿರಮಣವೈಭವರತ್ನಕೋಶವಿದು || ಲಲನೆಯರ ಸೀಮಂತಮಣಿ ಜಗ | ದೊಳಗೆ ಚೆಲುವಿನ ಕಣಿ ತಪೋಧನ | ಕುಲಜರಿಗೆ ಸೃಣಿಯೆನಲು ಮೆದುದು ರೂಪವಂಗನೆಯಾ || ಹೊಳೆಹೊಳೆದುದಾಭರಣರತ್ನಾ | ವಳಿಯ ರುಚಿ ತನ್ನಣರುಚಿಯ ಮು | ಕುಲರಿಸಿತಂಗಚ್ಛವಿ ತದಂಗಪ್ರಭೆಯನಡಹಾಯ್ದು || ಧಳಧಳಿಸಿದುದು ವದನ ಮುಖಮಂ | ಡಲದ ಕಾಂತಿಯನೊದೆದು ಕಣ್ಣಳ | ಬೆಳಗು ನಿಸಟಂಬರಿದುದೇನೆಂಬೆನು ನಿತಂಬಿನಿಯಾ | ಪರಿಮಳದ ಪರಮಾಣುಗಳ ಸಂ | ವರಿಸಿ ಮುಕ್ತಾಫಲದ ಕೆಂದಾ | ವರೆಯ ಮಅದುಂಬಿಗಳ ವರ್ಣಾ೦ತರವನಳವಡಿಸಿ || ಸರಸವೀಣಾಧ್ವನಿಯ ಹಂಸೆಯ | ಗರುವಗತಿಗಳನಾಯ್ದು ಮನ್ಮಧ | ವರವಿರಿಂಚಿಯೆ ಸೃಜಿಸಿದನು ಪಾಂಚಾಲನಂದನೆ | ಕೊಳ ಉಲಿವ ಕೋಕಿಲಪಾಠಕರ ಮೆಟ | ವಳಿಕುಲದ ಗಾಯಕರ ಹಂಸಾ | ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯದಿರ || ಅಲರ್ದ ಹೊಂದಾವರೆಯ ನವಪರಿ | ಮಳದ ಸಿಂಹಾಸನದಿ ಲಕ್ಷ್ಮಿ | ಲಲನೆಯೋಲಗಸಾಲೆಯಂತಿರೆ ಮೆದುದಾಸರಸಿ || ಅರ್ಜುನನ ಪುತ್ರಶೋಕ ಮುಚ್ಚಿದನು ಕಣ್ಣಳನು ಧೈಯ್ಯದ | ಕಚ್ಚಿನೆದೆ ಕರಗಿದುದು ಶೋಕದ | ಕಿಚ್ಚು ಕೊಂಡುದು ಮನವನಖಿಳೇಂದ್ರಿಯದ ಸುಖವಡಗಿ ||