ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

89 ಕರ್ಣಾಟಕ ಕವಿಚರಿತ [16 ನೆಯ ಎಚ್ಚಡಗಿತು ನೆಲಕೆ ಕೈಗಳ | ಬಿಚ್ಚಿ ಬಿರಿದನು ಪುತ್ರಶೋಕದ || ಹೆಚ್ಚುಗೆಯ ಶಾಪವನು ಹೆಸರಿಡಲುಯೆನರ್ಜುನನ || ಕರ್ಣಾರ್ಜುನರ ಯುದ್ಧ ಮನದೊಳಗೆ ಮೊಗೆದೀಂಟಿದರು ಮ | ಗಿನಲಿ ಸೂಸಿದರಡಿಗಡಿಗೆ ಕ | ಣ್ಣಿನಲ್ಲಿ ಕುಡಿಕುಡಿದುಗುಟಖದರು ಮದಲೆಯ ಮಾತಿನಲಿ || ಮನದೊಳಂಕುರವಾಗಿ ಕಡೆಗ |ಣ್ಣಿನಲ್ಲಿ ಪಲ್ಲವವವಾಗಿ ರಣವಾ | ತಿನಲಿ ತೂತುದು ಕರ್ಣಪಾರ್ಧರ ರೋಷಮಯಜಾಲ || ವಿದುರನೀತಿ ಕೋಪವೆಂಬುದನರ್ಧಸಾಧನ | ಕೋಪವೇ ಸಂಸಾರಬಂಧನ | ಕೋಪದಿಂದುರುತರದ ಸುಕೃತವು ಲಯವನೈದುವುದು | ಕೋಪವನು ವರ್ಜಿಸಲುಬೇಹುದು | ಕೋಪವುಳ್ಳವನಾವನಾಗಲಿ | ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ || ಯತಿ ಕೆಡುಗು ದುಸ್ಸಂಗದಲಿ ಭೂ | ಪತಿ ಕೆಡುಗು ದುರ್ಮ೦ತ್ರಿಯಲಿ ವರ | ಸತ ಕೆಡುಗು ಲಾಲನೆಗಳಲಿ ಕೃಷಿ ಕೆಡುಗುಪೇಕ್ಷೆಯಲಿ || ಮತಿ ಕೆಡುಗು ಮಧುಪಾನದಲಿ ಸ | ದ್ದತಿ ಕೆಡುಗು ದುಶ್ಚರಿತದಲಿ ನಿಜ | ಸತಿ ಕೆಡುಗು ದುರ್ವ್ಯಸನದಲಿ ಭೂಪಾಲ ಕೇಳೆಂದ | ಈತನು ಐರಾವತ ಎಂಬ ಗ್ರಂಥವನ್ನೂ ಬರೆದಿರುವಂತೆ ತೋರು ತದೆ. ಇದರಲ್ಲಿ 4 ಸಂಧಿಗಳ 441 ಪದ್ಯಗಳೂ ಇವೆ. ಗ್ರಂಥಾಂತ್ಯ ದಲ್ಲಿ ಗದುಗಿನವೀರನಾರಾಯಣ ಎಂಬ ಅಂಕಿತವಿದೆ. ಮುದ್ರಿತವಾದ ಭಾ ರತದಲ್ಲಿ ಈ ಸಂಧಿಗಳಿಲ್ಲ. ಈ ಗ್ರಂಥದಲ್ಲಿ ಕುಂತಿ ಐರಾವತಪೂಜೆಮಾ ಡಿದ ಕಥೆ ಹೇಳಿದೆ. ಇದರಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ. ಅಂದು ಗೋಕುಲದೊಳಗೆ ದೇವರು | ರಂದರನು ಬಲುಮನೆಯ ಸುರಿಯಲು | ಮಂದರವ ಕಿಬೆರಳಿನಿಂದಲಿ ನಗಪಿ ಕಾದವನ | ಸೌಂದರಿಯನೆದೊಯ್ದ ದೈತ್ಯನ | ಕಂಧರವ ಕತ್ತರಿಸಿ ಭೂಮಿಯ | ತಂದವನ ಬಲುತೋಟಿ ಬೇಡೆಂದೊದಮದುವು ಕಹಳೆ ||