ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

69 ಶತಮಾನ] ಕರಸ್ಥಲದ ನಾಗಿದೇವ. ಶ್ರೀಗಿರೀಂದ್ರ, ಸು, 1430 ಈತನು ಜಕ್ಕಣಾರನ (ಸು, 1430) ವಿಕೋತ್ತರಶತಸ್ಥರಿಗೆ ಟೀಕೆ ಯನ್ನು ಬರೆದಿದ್ದಾನೆ. ಇವನು ವೀರಶೈವಕವಿ, ವಾರಾಣಸೀಂದ್ರನ' ಶಿಷ್ಯ ನು; ಸರಿಯಾಳತ್ರಿಪುರಾರಿಯ ಮಗನು, ಇವನ ಟೀಕೆಯ ಕೊನೆಯಲ್ಲಿ ರುವ ವಾರಾಣಸೀಂದ್ರನ ಉಪದೇಶದಿಂದ ಜಕ್ಕಣ್ಣನು ಬರೆದ ಏಕೋ ತರಶತಸ್ಥಲಿಗೆ ಶ್ರೀಗಿರೀಂದ್ರನು ಬರೆದ ವ್ಯಾಖ್ಯಾನ-ಎಂಬ ವಾಕ್ಯದಿಂದ ಇವನು ಜಕ್ಕಣಾರ್ನ ಸಮಕಾಲದವನು ಎಂದು ವ್ಯಕ್ತವಾಗುತ್ತದೆ. ಕರಸ್ಥಲದ ನಾಗಿದೇವ, ಸು, 1430 ಇವನು ಒಂದು ತ್ರಿಪದೀಗ್ರಂಧವನ್ನು ಬರೆದಿದ್ದಾನೆ. ಇದಕ್ಕೆ ಕರ ಸ್ಥಲದ ನಾಗಿದೇವಿ ವಿಧಿ ಎಂದು ಹೆಸರು. ಇವನು ವೀರಶೈವಕವಿ; ಅಕ್ಕ ಸಾಲೆಯಜಾತಿಯವನು, ಕರಸ್ಥಲದ ವೀರಣೆಡೆಯನ ಶಿಷ್ಯನು, 101 ವಿರ ಕರಲ್ಲಿ ಒಬ್ಬನು, ಈತನು ಬ್ರೌಢದೇವರಾಯನ (1419-1446) ಕಾಲ ದಲ್ಲಿದ್ದಂತ ಚೆನ್ನಬಸವಪುರಾಣದಲ್ಲಿ (1584) ಹೇಳಿದೆ. ಇವನು ಜಕ್ಕೆ ಸಾರ್, ಕಲ್ಲಮಠದಪ್ರಭುದೇವ, ಚಾಮರಸ ಇವರ ಸಮಕಾಲದವನು ಇವನಿಗೆ ಕರಸ್ಥಲದ ನಾಗಲಿಂಗ ಎಂಬ ಹೆಸರೂ ಉಂಟು. ಇವನ ಗ್ರಂಥ ಕರಸ್ಥಲದ ನಾಗಿದೇವಿ ವಿಧಿ. ಇದು ತ್ರಿಪದಿಯಲ್ಲಿ ಬರೆದಿದೆ, ಪದ್ಯ 31. ಇವು ಗೂಢಾರ್ಥವುಳ್ಳ ಪದ್ಯಗಳು, ವೀರಶೈವಸಿದ್ಧಾಂತವನ್ನು ಬೋಧಿಸುತ್ತವೆ. ಇವಕ್ಕೆ ಸರ್ವತ ಶಿವಯೋಗಿಯಿಂದ (ಸು, 1650) ರಚಿತವಾದ ಒಂದು ಕನ್ನಡವ್ಯಾಖ್ಯಾನವೂ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವ-- ಎಂಟುಮೊನೆಯಮೇಲೆ ಏm ದುರ್ಗವ ಮm | ದಾಂಟಿ ಅರಣ್ಯವ ಸುಡುತಲಿ ದಾಂಟಿ ಅರಣ್ಯವ ಸುಡುತಲಿ ನರಿನಾಯ | ಬೇಂಟೆಯನಾಡಿ ಮೆದುದು || ಹಸಿವತೃಷೆವಿಷಯವ ಹೊಸದು ಭಸ್ಮವ ಮಾಡಿಕಿಸುಕುಳದ ಗಂಟಿ ಕಡೆಗೊದ್ದು ಕಿಸುಕುಳದ ಗಂಟ ಕಡೆಗೆದ್ದು ಸಂಸಾರ | ಹಸಗೆಟ್ಟಿತೆಂದು ನಗುತಿರ್ದೆ || 1, soನೆಯ ಪುಟವನ್ನು ನೋಡಿ, , ಸಂಧಿ 63, ಪದ್ಯಗಳು 7-20,