ಈ ಪುಟವನ್ನು ಪರಿಶೀಲಿಸಲಾಗಿದೆ
78 ಕರ್ಣಾಟಕ ಕವಿಚರಿತೆ. [15 ನೆಯ
ಸರಿಯದಿಹುದೆ ಧಮ೯ ತನುವ | ಕಳೆಯದಿಹುದೆ ಸದ್ದಿ ಚಿತ್ತ | ವಲುಗೆದಿಹುದೆ ಮುಕ್ತಿ ಮಣಿದು ನುಡಿದ ವಕ್ಕಣೆ || ಹೊಳೆಯದಿಹುದೆ ಸತ್ಯ ರೋಷ | ದಳೆಯದಿಹುದೆ ಶಾಂತಿ ಕಪಟ | ಮೊಳೆಯದಿಹುದೆ ಸೌಖ್ಯವಿದನು ತಿಳಿದುಲವ ಕೃತಾರ್ಧನು || ಶಮದಮಾದಿಗುಣವಿಶಿಷ್ಟ | ವಿಮಲಚಿತ್ರಪುಷ್ಪನಷ್ಟ | ಮಮತೆಹೀನ ದುಃಖಸುಖಸಮಾನವಾಗಿಯೇ || ಭ್ರಮಣಭವವಿಕಾರನಾಟ್ಯ | ವಿಮುಖನಾಗಿ ತನ್ನ ತಾನೆ | ಸಮವನದನನ್ಯ ಸುಖದೊಳಿರ್ಪನವ ಕೃತಾರ್ಧನು || --------------- 6. ಅವಧೂತಗೀತೆ ಇದು ವಿರಕ್ತಿಬೋಧಕವಾದ ಹಾಡಿನ ರೂಪದಲ್ಲಿದೆ; ಹಾಡು 101. ಅಂತ್ಯದಲ್ಲಿ ಅವಧೂತಲಕ್ಷಣವು ಹೇಳಿದೆ ಗ್ರಂಥಾದಿಯಲ್ಲಿ ಬಸವಸ್ತುತಿ ಇದೆ. ಇದರಿಂದ ಒಂದೆರಡು ನುಡಿಗಳನ್ನು ತೆಗೆದು ಬರೆಯುತ್ತೇವೆ---- ಹಸುಗರಿಯದೆ ಸೊಣಗಳು ಮತಿಗೆಟ್ಟು| ಮುಸುರೆಯ ಮಡಕೆಯೊಳಗೆಮೊಗವಿಟ್ಟು | ದೆಸೆಗಾಣದೆ ಬಾಧೆಗೆ ತನುಗೊಟ್ಟು | ಪೆಸರ್ಗೊಳಲಿದು ಸಂಸಾರದ ಗುಟ್ಟು || ವಡಬ ಜಡಂ ಗುಣಮಹಿಸಂತಾನ | ಸುಡುವ ವಿಷಂ ಪೀಯೂಷಸಮಾನ| ಪೊಡೆವ ಸಿಡಿಲ್ ಮಂಜುಳವರಗಾನ | ಮೃಡಗುರುಕರುಣಕಟಾಕ್ಷದ ಭಾನ || ---------------------- 7. ಮನೋವಿಜಯಕಾವ್ಯ ಇದು ಕುಸುಮಪಟ್ಟದಿಯಲ್ಲಿ ಬರೆದಿದೆ; ಪ್ರಕರಣ 9; ಪದ್ಯ 355. ಈ ಗ್ರಂಥದಲ್ಲಿ--ಸುವಿವೇಕನೆಂಬ ಜ್ಞಾನಿ ಸಂಸಾರಕಲಸಿ ಗುರುವಿಡಿದು ತನ್ನ ನಿಜ ತಾನಾದ ಸಂಗತಿ ಹೇಳಿದೆ. ಇದರ ಉತ್ಕೃಷ್ಟತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ---- ಸದುಗುರುಕಟಾಕ್ಷದಿಂ | ದುದಿಸಿದ ನಿಜಾನುಭವ | ದುದಯದಿಂದಖಿಲಾದ್ಯರನುಮತದೊಳು || ವಿದಿತವೇನಾಗಮೋ | ಕ್ರದೊಳುಪನಿಷತ್ತುಗಳೊ | ಳೂದವಿಸಿದ ಸಮ್ಮತಿಯ ಸಂಗ್ರಹವಿದು ||