ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 14i

                           ಕರ್ಣಾಟಕ ಕವಿಚರಿತೆ.
                                                                [18 ನೆಯ
                            ರಾಮನ ವಿರಹ
      ವನಜವನು ಕಂಡರಸ ವನಜಾ | ನನೆಯ ಕಂಡಿರೆಯೆಂದು ಕೈರವ |
      ವನು ನಿರೀಕ್ಷಿಸಿ ಕೈರವಾಕ್ಷಿಯ ಕಾಣಿರೆಲೆ ಎನುತ|| 
      ವಿನುತಕೊಕವ ಕಂಡು ಕೋಕ | ಸ್ತನಿಯ ಕಂಡಿರೆಯೆನುತ ಬೆಸಗೊಂ | 
      ಡನು ಮದಾಳಿಯ ಕಂಡು ಕೇಳಿದನಳಿಕುಳಾಳಕಿಯ || 
      ಕಂಡು ಹಂಸಯ ಹಂಸಗಮನೆಯ | ಕಂಡುದುಂಟೇ ಎಂದು ಕೋಗಿಲೆ |
      ಗಂಡು ಕೋಕಿಲಲಲಿತನಿನದೆಯ ಕಾಣಿರೆಲೆ ಎಂದು ||
      ಮಂಡಲಿಯ ಮಧುರಧ್ವನಿಯ ಗಿಳಿ |ಎಂಡಿನಲ ಕಲಕೀರವಚನದ |
      ಹೆಂಡತಿಯ ನೀಂ ಕಾಣಿರೆಲೆ ಎಂದರಸ ಬೆಸಗೊಂಡ ||
                          2 ಮೈರಾವಣನ ಕಾಳಘಗ
               ಇದೂ ಭಾಮಿನೀಷಟ್ಟದಿಯಲ್ಲಿ ಬರೆದಿದೆ, ಸಂಧಿ 4, ಸದ್ಯ 296.
               ರಾವಣನು ರಾಮನನ್ನು ಸೋಲಿಸಲಿಕ್ಕೆ ಪಾತಾಳಲಂಕೆಯಲ್ಲಿರುವ ಮೈರಾವ
          ಣನ ಸಹಾಯವನ್ನು ಬೇಡಲು ಅವನು ನಿದ್ರೆಮಾಡುತ್ತಿದ್ದ ರಾಮಲಕ್ಷ್ಮಣರನ್ನು 
          ಪಾತಾಳಲಂಕಗಾ ಒಯ್ದು ಕಂಕಣಾದೇವಿಯ ಗುಡಿಯಲ್ಲಿ ಸೆರೆಯಿಟ್ಟನು. ಈ ಸಂಗ 
          ತಿಯನ್ನು ಹನುಮಂತನು ವಿಭೀಷಣನಿಂದ ತಿಳಿದು ಪಾತಾಳಲಂಕೆಗೆ ಹೋಗಿ ಮೈರಾವ
          ಣನನ್ನು ಯುದ್ಧದಲ್ಲಿ ಕೊಂದು ನೀಲಮೇಘನಿಗೆ ಸಟ್ಟವನ್ನು ಕಟ್ಟಿ ರಾಮಲಕ್ಷಣ 
          ರನ್ನು ಬೆಳಗಾಗುವುದರೊಳಗೆ ಪಾಳೆಯಕ್ಕೆ ಕರೆದುಕೊಂಡು ಬಂದನು
          ಎಂಬುದೇ ಇದರ ಕಧಾಗರ್ಭ
              ಗ್ರಂಥಾವತಾರದಲ್ಲಿ ರಾಮಸ್ತುತಿ ಇದೆ. ಬಳಿಕ ಕವಿ ಶಿವ, ಬ್ರಹ್ಮ, 
          ಗಣೇಶ, ಸರಸ್ವತಿ, ಪರಮಹಂಸವಿದ್ಯಾಶಂಕರಗುರು', ವಾಲ್ಮೀಕಿ ಇವರು
          ಗಳನ್ನು ಹೊಗಳಿದ್ದಾನೆ. ಈ ಗ್ರಂಧದಿಂದ ಕೆಲವು ಪದ್ಯಗಳನ್ನು ತೆಗೆದು 
          ಬರೆಯುತ್ತೇವೆ
                            ಚಂದ್ರೋದಯ
           ಓಡಿದುದು ರವಿಕಿರಣವಗಲಕೆ | ರೂಡೀಸಿತು ಬಲುತಿಮಿರ ತಾರೆಗೆ | 
           ಮೂಡಿದುವು ಗಗನದಲಿ ಮೊಗಗುಂದಿದುವು ಕಮಲಗಳು |
           ಜೊಡೊಡೆಯೆ ರವಿವಕ್ಕಿ ಖಗಕುಲ | ಗೂಡ ಸಾರಲು ಚಂದ್ರಮನ ಗೆಟ | 
           ಮೂಡೆ ನಕ್ಕುವು ಕುಮುದ ವಾರಿಧಿ ಹಿಗ್ಗೆ ಹರುಷದಲಿ ||
             ಈ ಗುರು ಶೃಂಗೇರಿಯವನಾದೆ ಪಕ್ಷದಲ್ಲಿ ಇವನ ಕಾಲವು 14 ನೆಯ ಶತಮಾನದ       ಮಧ್ಯಭಾಗವಾಗುತ್ತದೆ, ಕವಿ ಆಕಾಲದವನು ಎಂದು ಕೆಲವರು ಭಾವಿಸಬಹುದು, ಆದರೆ ಕುಮಾರವ್ಯಾಸನನ್ನು ಸ್ಮರಿಸುವುದರಿಂದ ಅಷ್ಟು ಹಿಂದೆಣವನಲ್ಲಿ ಎಂದು ತಿಳಿಯಬೇ ಕಾಗಿದೆ.

ಕಾಗಿದೆ,