ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ವಿರತಮಹಲಿಂಗದೇವ 147 ತವಾಗಿದೆ. ಕವಿ ಅನೇಕಸಂಸ್ಕೃತಶ್ಲೋಕಗಳನ್ನು ಉದಾಹರಿಸಿ ಅವು ಗಳಿಗೆ ಟೀಕೆಯನ್ನು ಬರೆದಿದ್ದಾನೆ. ಗ್ರಂಧಾವತಾರದಲ್ಲಿ ಬಸವಸ್ತುತಿ ಇದೆ. ಬಳಿಕ ಕವಿ ಶಿವ, ವೀರಭದ್ರಾಪರಾವತಾರವಾದ ಮಾಚಿದೇವ, ತೋಂಟ ದಸಿದ್ದಲಿಂಗ, ಬೋಳಬಸವ ಇವರುಗಳನ್ನು ಸ್ತುತಿಸಿ ಶ್ರೀಮದಮಂದಾನಂದಸಂದೋಹ ಮಂದಿರ ಸುಂದರಾಕೃತಿಗಂಗಸಂಗವಿನಿರ್ಮು ಕ್ರೋ ಲಿಂಗಾಂಗಿಜಂಗಮಪ್ರಿಯನಿಜಾನಂದಬಸವಳಂಗಾಭಿಸಂಜ್ ಕೋ ಮಹಾನಿದಂ ಕೃತರ್ವಾ ಬುಧಭೂಷಣಂ ಮಾಚಿದೇ ಮನೋವಿಲಾಸಂ ಎಂದು ತನ್ನ ಸಂಗತಿಯನ್ನು ಹೇಳಿ ಗ್ರಂಥವನ್ನು ಆರಂಭಿಸಿದ್ದಾನೆ. ಪ್ರಕ ರಣಗಳ ಕೊನೆಯಲ್ಲಿ ಈ ಗದ್ಯವಿದೆ ಇತಿ ಶ್ರೀವೇದವೇದಾಂತಶಿವಾಗಮತಿಪುರಾಣೇತಿಹಾಸಸಾರಭೂತ ವೀರಶೈ ವಾಚಾರಸಾರೋದ್ವಾರೇ ಶ್ರೀಮದಾನಂದಬಸವಲಿಂಗಶಿವಯೋಗಿವಿರಚಿತೇ ಶಿವಾಧಿಕ್ಯಕ ಧನೇ ಮಾಚಿದೇವಮನೋವಿಲಾಸೇ ವಿರತಮಹಲಿಂಗದೇವ ನು. 1500 ಈತನು ಗುರುಬೋಧಾಮೃತವನ್ನು ಬರೆದಿದ್ದಾನೆ. ಇವನು ವೀರ ಶೈವಕವಿ. ನಮಗೆ ದೊರೆತ ಈ ಗ್ರಂಥದ ಪ್ರತಿ ಶಕ 1557ನೆಯ ಭಾವ ವರ್ಷದಲ್ಲಿ (1634) ಪ್ರತಿಮಾಡಲ್ಪಟ್ಟಂತೆ ತಿಳವುದರಿಂದ ಗ್ರಂಥವು ಆ ಕಾ ಲಕ್ಕೆ ಹಿಂದೆ ಹುಟ್ಟಿರಬೇಕು, ಕವಿಯ ಕಾಲವು ಸುಮಾರು 1500 ಆಗಿರ ಬಹುದೆಂದು ಊಹಿಸುತ್ತೇವೆ. ಇವನ ಗ್ರಂಧ ಗುರುಬೋಧಾಮೃತ ಇದು ತ್ರಿಪದಿಯಲ್ಲಿ ಬರೆದಿದೆ... ಕೆಲವು ಕಂದವೃತ್ತವಚನಗಳೂ ಇವೆ; ಒಟ್ಟು 1021 ; ಸ್ಥಲ 5, ಈಗ್ರಂಥವು ಗುರುಶಿಷ್ಯಸಂವಾದರೂಪ ವಾಗಿ ವೈರಾಗ್ಯವನ್ನು ಬೋಧಿಸುತ್ತದೆ ಆದಿಯಲ್ಲಿ ಶಿವಸ್ತುತಿ ಇದೆ. ಇದ ರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ. ಮಧುವಿನೊಳು ನೊಣ ಬಿದ್ದು ! ಒದೆದುಕೊಂಬಂದದಲಿ | ಉದಯಾಸ್ತಮಾನ ಕುದಿದು ಕೋಟಲೆಗೊಂಬ | ಅಧಮಗೆಲ್ಲಿಯದು ನಿಜಸುಖ |