ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

148 ಕರ್ಣಾಟಕ ಕವಿಚರಿತೆ. [13 ನೆಯ ಬಿಂದುಮಾತ್ರದ ಸುಖಕೆ | ಮುಂದೆ ಪರ್ವತದಷ್ಟು | ದಂದುಗವ ಹೊತ್ತು ತೋಂತೊಲಿ ಭವಭವದೊ | ಳೊಂದಿ ಸಾವವಗೆ ಸುಖವುಂಟೇ | ತಲೆಹುಲಿತ ನಾಯಂತೆ | ಲಲನೆಯರ ಮೋಹಕ್ಕೆ | ಸಲೆ ಮಚ್ಚಿ ಕೊಂಡು ಇಹಪರವನರಿಯದಿಹ | ಮಲಧಾರಿಗೆತ್ತಣದು ನಿತ್ಯ | ಒಲ್ಲೆನೆನೆ ಒಲಿಸುವುದು | ಬಲ್ಲೆನೆಂಬರ ಮಅವೆ | ಯಲ್ಲಿ ಕೆಡಹುವುದು ಮನವಿದು ಮಾಡಿ ಇಂತ | ರೆಲ್ಲರಂ ತಲೆಯನರಿವುದು || ನಾಯ ಮೊಲೆವಾಲು ತಾ | ನಾಯಕುನ್ನಿಗೆ ಯೋಗ್ಯ ! ಪಾಯಸಕೆ ಯೋಗ್ಯವಹುದೆ ಲೋಭಿಯ ಧನವು | ನಾಯ ಮೊಲೆವಾಲತೆಲಿನಂತೆ || ಸಿಂಗಿರಾಜ, ಸು 1500 ಈತನು ಮಲಬಸವರಾಜಚಾರಿತ್ರವನ್ನು ಬರೆದಿದ್ದಾನೆ, ಅವನು ವೀರಶೈವಕವಿ; ಇವನ ಗುರು ದೇವಿದೇವ, ಮಹಾದೇವಿಯಕ್ಕನ ಪುರಾಣ ವನ್ನು ಬರೆದ ಚೆನ್ನಬಸವಾಂಕನು (ಸು, 1550) ಇವನ ಹೆಸರನ್ನು ಹೇಳುವು ದರಿಂದ ಇವನು ಅವನಿಗಿಂತ ಹಿಂದೆ ಇದ್ದಿರಬೇಕೆಂಬುದು ಸ್ಪಷ್ಟ್ಯವಾಗಿದೆ. ಆದರೆ ಎಷ್ಟು ಹಿಂದೆ ಇದ್ದನೋ ತಿಳಿಯದು, ಸುಮಾರು 1500 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ, ಇವನ ಹೆಸರು ಶೃಂಗಿರಾಜ ಎಂದೂ ದೊರೆಯುತ್ತದೆ. ಇವನ ಗ್ರಂಥ ಮಲಬಸವರಾಜಚಾರಿತ್ರ ಇದು ವಾರ್ಧಕಪಟ್ಟದಿಯಲ್ಲಿ ಬರೆದಿದೆ; ಅಲ್ಲಲ್ಲಿ ಇತರಪಟ್ಟದಿ ಗಳೂ ಇವೆ; ಸಂಧಿ 48, ಪದ್ಯ 1907. ಇದಕ್ಕೆ ನಿಂಗಿರಾಜಪುರಾಣ ಎಂಬ ಹಸರೂ ಉಂಟು. ಇದರಲ್ಲಿ ಬಸವನ 88 ಪವಾಡಗಳು ವರ್ಣಿತವಾಗಿವೆ. ಇವುಗಳಲ್ಲಿ ಪ್ರತಿವಾದಮುಖದಿಂ ನೆಗಳ ಪವಾಡಗಳು 64, ಭಕ್ತಿಚಾರಿತ್ರ ಭಾವನಿಸ್ಥಾ ಪವಾಡಗಳು 24 ಎಂದು ಹೇಳಿದೆ. ಗ್ರಂಥಾವತಾರದಲ್ಲಿ ಕಾಶಿ ವಿಶ್ವನಾಥ, ವೀರೇಶ ಇವರುಗಳ ಸ್ತುತಿ ಇದೆ.