ಈ ಪುಟವನ್ನು ಪರಿಶೀಲಿಸಲಾಗಿಲ್ಲ.
216 ಕರ್ಣಾಟಕ ಕವಿಚರಿತೆ. [16ನೆಯ
ಭಿಕ್ಷಾ ಟನಚರಿತೆಯನ್ನು ಬರೆದಿರುವ ಗುರುಲಿಂಗವಿಭು ಇವನೇ ಆಗಿರಬಹುದೋ ಎಂಬ ಸಂಶಯವುಂಟಾಗುತ್ತದೆ. ಮಂತ್ರಿಯಾದುದರಿಂದ ವಿಭು ಎಂಬ ವಿಶೇಷಣವು ಯುಕ್ತವಾಗಿ ತೋರಬಹುದು, ಆದರೆ ಗುರು ಎಂಬ ಉಪಪದವಿಲ್ಲದಿರುವುದರಿಂದಲೂ ಭಿಕ್ಷಾಟನಚರಿತೆಯಲ್ಲಿ ಕವಿಯ ವಿಷಯವಾಗಿ ಆವ ಅಂಶಗಳೂ ಹೇಳಿಲ್ಲವಾದುದರಿಂ ದಲೂ ಆ ಕವಿ ಬೇರೊಬ್ಬನಾಗಿರಬಹುದೆಂದು ತೋರುತ್ತದೆ.
ಇವನ ಗ್ರಂಥ
ಕಬ್ಬಿಗರ ಕೈಪಿಡಿ
ಇದು ವಾರ್ಧಕಪಟ್ಟದಿಯಲ್ಲಿ ಬರೆದಿದೆ; ಪದ್ಯ 100, ಇದರಲ್ಲಿ ಮುಖ್ಯವಾಗಿ ಹಳಗನ್ನಡಪದಗಳ ಅರ್ಥವು ಹೇಳಿದೆ. ಇಲ್ಲಿ ಪ್ರತಿಪಾದಿತವಾದ ವಿಷಯವನ್ನು ಕವಿ ಈ ಪದ್ಯಭಾಗದಲ್ಲಿ ಹೇಳಿದ್ದಾನೆ____
ಮಿಸುವ ಗೂಢಪದಪ್ರಯೋಗದೊಳ್ವಂ ರಸಮ |
ನೊಸರ್ವಚ್ಚಗನ್ನಡದ ಚೆಲ್ವುಮಂ ತದ್ಭವದ |
ಬೆಸುಗೆಯಂ ದೇಶ್ಯಕ್ಕೆಮರ್ದ್ದ ಸೊಂಪಂ ತೊಳಪ ತತ್ಸಮದ ಬಿನ್ನಣವನು ||
ಉಸಿರೆಂದು ಕೋವಿದರ ಬೆಸಸಲಾನಿದಕೆ ಶೋ |
ಭಿಸುವ ಕಬ್ಬಿಗರಕೈಪಿಡಿಯೆಂದು ಪೆಸರನಿ |
ತ್ತೊಸೆದು ಪೇೞ್ದಪೆನು.
ಗ್ರಂಥಾವತಾರದಲ್ಲಿ ಸಂಭಾವಿರೂಪಾಕ್ಷಸ್ತುತಿಯಿದೆ. ಈ ಗ್ರಂಥ ದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ____
ವಂಚನೆಗೆ ಮಾಜೆಂದು ಪೆಸರಕ್ಕು ವಂಶಮಂ |
ಬಂಚಮೆನಲಕ್ಕು ಗಾವಿಲನೆಂದು ಗ್ರಾಮಣಿ ಪ |
ಳಂಚೆಂದು ತಾಗೆಂದು ಸಂಘಟ್ಟನಾರ್ಧ ಪಾಗದಮೆನಲ್ ಪ್ರಾಕೃತಾಖ್ಯಂ ||
ಉಂಡಮೆಂದುದ್ದಮಪ್ಪುದು ಮೇಣಪೂರ್ವಮಂ |
ಪಂಚವೆಂಬುದು ಅವಸೆಯೆನಲಮಾವಾಸ್ಯೆ ಗುಳ |
ವಂಚಿತಂ ಗುಡ ಪಕ್ಕರಕ್ಕೆಯಪ್ಪುದು ನಾಡಿ ನಾಯಿಯೆನೆ ಗೇಟಿಗೆಯಕ್ಕುಂ ||
ತುೞುಲೆಂದು ಮೋಟ್ಠಂದು ಕುಂಬೆಂದುಮೆಗೆಂದು |
ಬೞಿಕ ಮಣಿಯೆನೆ ನಮಸ್ಕಾರಕ್ಕೆ ಪೆಸರಕ್ಕು |
ಮಿಳೆಯ ಪಿರಿಯರ್ ನೇರಿದರ್ ದಿಮ್ಮಿದರ್ ಗನಹರುಱೈ ಸೈದರೆನಿಸಿಕೊಳ್ಗುಂ ||