ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

316 ಕರ್ಣಾಟಕಕವಿಚರಿತೆ [16ನೆಯ ಭೂಷಣೆಗೂ ಹುಟ್ಟಿದ ಸುಕುಮಾರನ ಕಥೆ ಹೇಳಿದೆ. ಗ್ರಂಥದಲ್ಲಿ ಕಥಾಭಾಗವು ಬಹಳಕಡಮೆ; ಶೃಂಗಾರರಸಪ್ರಧಾನವಾದ ವರ್ಣನೆಯೇ ವಿಶೇಷವಾಗಿದೆ. ಆರಂಭದಲ್ಲಿ ಸದಾಶಿವಸ್ತುತಿ ಇದೆ. ಬಳಿಕ ಕವಿ ಸರಸ್ವತಿ, ಗಣೇಶ ಇವರುಗಳನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ_

                        ಸಮುದ್ರ 

ಸುಕಿ ನಾಭಿ ಝಷ ನೇತ್ರ ತೆರೆ ಪುರ್ಬುರಗ ಬಾಸೆ | ಗಳ ಶಂಖ ಕೂರ್ಮ

                                  ಮೇಗಾಲು || 

ಪುಳಿನದೊಟ್ಟಿಲೆ ಪೊರೆವಾಲಿಗೆ ಸಾಮಾನ್ಯ | ಲಲನೆಯಂತೆಸೆದುರಾವಾರ್ಧಿ ||

                      ಸ್ತ್ರೀವರ್ಣನೆ 

ಕುಂಭಕುಚದ ಕಂಬುಕಂರದ ಕೇಕಿದು | ಹಿಂಬಿನಂಭೋಜಾತಮುಖದ |

ಪೊಂಬಾಟದೊಡೆಯ ಕಾವಂಬಗತಿಯ ಪಕ್ವ | ಬಿಂಬಾಧರೆಯರಿರುತಿಹರು | 

ಲೋಕದೊಳಗೆ ಹಲಲಿಪಿಯುಂಟವಅವ | ಆಕಾರವೆಲ್ಲ ವಿಕಾರ |

ಈಕರ್ಣಾಟಶ್ರೀಕಾರದಿರವ ಪೋ |ಲ್ತಾಕೆಯ ಕರ್ಣವೆಸೆದುದು |
                       ವಿರಹ
ಮಲಯಜಲೇಪ ಮನ್ಮಧಶಾಪ ತಾವರೆ | ಯೆಲೆಯ ವೀಜನ ಮಹಾಜ್ವಲನ |
ತಳಿವ ಪರಾಗ ಜೀವನತ್ಯಾಗ ವೀಣೆಯ | ಲಲಿತಸುಸ್ವರ ಬಹುವೈರ ||
ಮರುಗ ಮಹೋರಗ ಕತ್ತುರಿ ದಳ್ಳುರಿ | ಸುರಗಿ ಸುರಗಿ ವಾಲ ವ್ಯಾಲ |
ಸರಸಿಜ ವಿಷರಜ ತಾಂಬೂಲವೆದೆಶೂಲ | ದಿರವಾದುವಾವಿರಹದೊಳು ||
                         ಸೂಳಗೇರಿ 
ಪಾಪದ ಗಡಿ ದುಃಖದ ಸೀಮೆ ಬಹುವಿಧ | ದಾಪತ್ತಿನ ಪುರ ತೇಜ |
ಪೋಪ ಮಹಾಲಯವೆಂಬಪಕೀರ್ತಿಯ ತಾ | ಪೊತ್ತು ಮೆಟವುದಾಕೇರಿ |
ಗದಕಿನಾಲಯ ರಕ್ಕಿನ ಬೀಡನೃತದ | ಸದನ ವೈಸಿಕದ ಭವನವು |
ಚದುರಿನ ಪೇಟೆ ವ್ಯಾಧಿಯ ತವರ್ಮನೆಯೆಂ | ದೆದೆಗೊಂಡುದಾಸೂಳೆಗೇರಿ ||
                  _____________
       ವರ್ಧಮಾನ ಸು.1600
ಈತನು ನಗರದ 46 ನೆಯ ಶಾಸನವನ್ನು ಬರೆದಂತೆ ಆ ಶಾಸನದ ಕೊನೆಯಲ್ಲಿರುವ