ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಶತಮಾನ] ನರಹರಿ 40) ಹೇಳಿದೆ.1 ಗ್ರಂಧಾವತಾರದಲ್ಲಿ ಶಿವಸ್ತುತಿ ಇದೆ.ಬಳಿಕ ಕವಿ ಸರಸ್ವತಿ,ಗಣೇಶ ವೀರಭದ್ರ ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇನೆ____

                               ಸೂದ್ಯೋದಯ 

ಬಿರಿಯಲು ರಾಜೀವ ಹರಿಯಲು ತಾರಗೆ | ತೊರೆಯಲು ಶುಕಪಿಕವಿಂಡು | ಧರೆಯೊಳು ಧವಳವು ಮೆಳೆಯಲು ಮೋಹಿಪ | ಪರಿಯಲಿ ತರಣಿ ತೋರಿದನು ||

                                ಉದ್ಯಾನ 

ಧರೆಯೊಳು ದ್ರಾಕ್ಷಿಯು ಸರಿಯಿಲ್ಲವೆಂದಿರೆ : ನೆರೆದು ಸೋಲಿಸಲು ಖರ್ಜೂರ | ಸ್ಥಿರವಾಗಿ ಸ್ವಾದನ ವಿರಚಿಸೆನಲು ಕೇಳಿ | ಹರುಷದಿ ನಗಲು ದಾಳಿಂಬ | |ಬುಡವನಿಬ್ಬಗಿಮಾಡಿಯೊಡೆದು ಬೆಳಲಕಾಯಿ|ಪೊಡವಿಯೊಳೆದಿರಿಲ್ಲವೆನಲು | ಸಡಗರ ಸಾಕೆಂದು ನುಡಿವ ಹಿಪ್ಪಲಿ ನಾಚಿ | ಯೊಡಲೆಲ್ಲ ಮುಳ್ಳುದೆ ಬೀಜ'ದುವು||

                                 ಸ್ತ್ರೀವರ್ಣನೆ 

ಪವಳವೊ ಮಧುರಸಕವಳದ ಘಟಿಕೆಯೊ | ಸವಿಸುಧೆರತ್ನಾಧರವೋ | ನವರತ್ನ ಚೀಲವೊ ಕಪ್ಪುರದ ಕರಡಿಗೆಯೊ | ಯುವತಿಯ ಬುಂದುಗೆವಾಯೋ || ಪಾಶವೊ ಇನಿಯರ್ಗೆ ಬೀಸುವ ಬಲೆಗಳೊ | ಮೋಸದ ಲತೆಯ ತೋಳುಗಳೊ | ಕೀಸದ ಕೇದಗೆ ಭಾಸುರಗಳೆಗಳೊ | ಲೇಸಾದ ನಖವೊ ವ್ಯಗ್ರಗಳೋ ||

                                      ----
                          ನರಹರಿ, ಸು 1650 
           ಈತನು ಪ್ರಹ್ಲಾದಚರಿತ್ರೆಯನ್ನು ಬರೆದಿದ್ದಾನೆ. ಇವನು ಬ್ರಾಹ್ಮ ಕವಿಯೆಂದು ತೋರುತ್ತದೆ. ಕಾವೇರೀತೀರದಲ್ಲಿರುವ ಬಲ್ಲಳಪುರದ ಪ್ರಭುವೆಂದೂ ವೀರವೈಷ್ಯವಸಂಗಪಗಳ ಕುಮಾರನೆಂದೂ " ಪೊಸರ ಸಾಲಂಕಾರ ಜಾಣ್ಣುಡಿ | ಯೆಸೆವ ಪದಬಂಧಗಳ ಶಬ್ದದ ಗಸಣಿಯಲಿ'ತವನಲ್ಲ” ಎಂದೂ ಹೇಳಿಕೊಂಡಿದ್ದಾನೆ. ನೀನೇ ನನ್ನ ನಾಲಗೆಯಲ್ಲಿದ್ದು ನುಡಿಸಬೇಕೆಂದು ಗರುಡಗಿರಿವಾಸನನ್ನು ಪ್ರಾರ್ಥಿಸುವುದರಿಂದ ಈತನ ಊರಾದ ಬಲ್ಲಳಪುರಕ್ಕೆ ಸಮೀಪದಲ್ಲಿಯೇ ಗರುಡಗಿರಿ ಇದ್ದಿರಬಹುದು, ಇವನು ಸುಮಾರು 1650 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ.

_1, ಇವನ ಸ್ಥಳ ಬೊಮೂರು ಎಂದು ಹೇಳಿದೆ. ಇದು ಶ್ರೀರಂಗಪಟ್ಟಣದ ದಕ್ಷಿಣಕ್ಕೆ ಇರುವ ಬೊಮ್ಮರಾಗಿರಬಹುದೋ ಏನೋ ತಿಳಿಯದು. 51