ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

411 ತಮಾನ] ದರಣಿಪಂಡಿತ. ಜಿನಸ್ತುತಿ ಸುತ್ರಾಮಾದಿಸುಪರ್ವ ರಾಜಮಕುಟೀಕೋಟೀ ಘವೇಪ್ರಜ್ವಲ | ದ್ರತ್ನಾಂಶೂಚ್ವಯನಿನ್ನು ಗಾಪ್ರವಿಲಸತ್ಪಾದಾಂಬುಜಾತದ್ವಯಂ || ಭೈತ್ರಂ ಸಂಸ್ಕೃತಿಸಾಗರಪ್ರವಹದೊಳ್ ಭಕ್ತರ್ಗೆ ಕಲ್ಪಾಂಘ್ರಿಪಂ ! ನೇತ್ರಾಳೆವ್ರಜಕೀಗೆ ಸಾರಸುಖಮಂ ಸಂತಾಪವಿಚ್ಛೇದಕಂ |

               ಯತಿ 

ಗಣನಿಯಮದಿಂದ ಯತಿಯಂ | ಗಣಿಸುವರಾಗಣವು ಕೆಡಲು ಯತಿಯುಂ ಕೆಡುಗುc|| ಗಣಯತಿಯಿಲ್ಲದ ಕವಿತೆಯು | ತಣಿಸುವುದೇ ವಿಬುಧತ ತಿಯ ನಿಯಮಸ್ಥಳದೊಳ್ |

 ಪಧ್ಯಾ.
ದಳಗಳೊಳಾದ್ಯಂ ಪಾದಂ | ಪೊಳೆಯಲ್ ತ್ರ್ಯಂಶಾಢ್ಯಮಾಗಿ ಪಧ್ಯಾಖ್ಯಂ || ಅಳವಟ್ಟಿತರಾಂಘ್ರಿಗಳೊಳು | ತಿಳಿ ಗಣಗಳ ನಿಯಮವಿಲ್ಲ ಬುಧಮತದಿಂ ||
                ತಾಳ

ಧ್ರುನತಾಳ ಮಟ್ಟತಾಳ೦ | ತಿವುಡಂ ರೂಪಕಮುಮಷ್ಟ ಝಂಪೆಯುಮೇಕಂ | ಶೀವುಗುಮಿಂತೇಚುವಿಧಂ ! ಸೇವಿಸುವರ ವೃತ್ತಬಂಧರಚನೆಗಳಿಂದಂ ||

               ತ್ರಿವುಡೆ 

ಪ್ರಾಸಗಳು ಮೂರಾಗಿ ಲೇಸಿನಿಂ ಬರುತಿರಲು | ಮಾಸದೇ ಮಾತ್ರೆಗಳ ತ್ರಿವುಡೆ ತಾನೊಗಗುಂ ||

           ಧರಣಿವಂಡಿತ, ಸು 1650 

ಈತನು ವರಾಂಗನೃಪಚರಿತೆ, ಬಿಜ್ಜಳರಾಯೆಚರಿತೆ ಇವುಗಳನ್ನು ಬರೆದಿದ್ದಾನೆ. ಇವನು ಜೈನಕವಿ, ಭಾರದ್ವಾಜಗೋತ್ರದವನು; ವಿಷ್ಣು ವರ್ಧನಪುರದ “ವರಕುಲಾಗತವೈದ್ಯ ವಿದ್ಯಾಪರಿಣತನು ಪರವೈದ್ಯಕರಿಹರಿ” ಯಾದ ಧರಣಿಪಂಡಿತನ ಪೌತ್ರನು; ಸದ್ಮಣಪಂಡಿತನ ಪುತ್ರನು “ವಿಸು ವರ್ಧನಪುರದ ಪಾರ್ಶ್ವಜಿನೇಂದ್ರಚಂದ್ರನಚರಣವಾರಿಜಭೃಂಗ" ಎಂದು ಹೇಳಿಕೊಂಡಿದ್ದಾನೆ 53