ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

418 ಕರ್ಣಾಟಕ ಕವಿಚರಿತೆ. [17ನೆಯ ಈತನು ಸುಮಾರು 1650 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ. ಪೂರ್ವಕವಿಗಳನ್ನು ಈ ಪದ್ಯದಲ್ಲಿ ಸ್ಮರಿಸಿದ್ದಾನೆ ವಿನುತಕವಿವರನೇಮಿಚಂದ್ರನು | ಘನಕವೀಶ್ವರನೆನಿಪ ಹೊನ್ನನು | ಸನುನಯದ ಕವಿ ರನ್ನ ಕರ್ಣಾನಂದರಸಕವಿತಾ || ಧಸಿಕ ಹಂಪನು ನಾಗವರ್ಮ | ದ್ಯನುಪಮಿತಕವಿಗಳನು ನುತಿಸುವೆ | ಮನಕೆ ಬಂದಂತೆನಗೆ ಕವಿತಾವರವ ಕೊಡಲೆಂದು || ಇವನ ಗ್ರಂಥಗಳಲ್ಲಿ 1. ವರಾಂಗನೃಸ ಚರಿತೆ ಇದು ಭಾಮಿನೀಷಟ್ಸದಿಯಲ್ಲಿದೆ. ನಮಗೆ ದೊರೆತ ಅಸಮಗ್ರ ಪ್ರತಿ ಯಲ್ಲಿ 8 ಆಶ್ವಾಸಗಳಿವೆ. ಪೂರ್ವದ ಮುನೀಶ್ವರರು ಹೇಳಿದ ಈ ಕಥೆ ಯನ್ನು ತಾನು ಕನ್ನಡದಲ್ಲಿ ರಚಿಸಿದಂತೆ ಕವಿ ಹೇಳುತ್ತಾನೆ. ಗ್ರಂಧಾವ ತಾರದಲ್ಲಿ ಪಾರ್ಶ್ವಜಿನನನ್ನು ಸ್ತುತಿಸಿದ್ದಾನೆ. ಬಳಿಕ ಸಿದ್ಧಾದಿಗಳು, ಸರಸ್ವತಿ, ಗಣಧರರು, ಪದ್ಮಾವತಿ ಇವರುಗಳನ್ನು ಸ್ತುತಿಸಿ ಅನಂತರ ಕೊಂಡಕುಂದ ನಿಂದ ಅಕಲಂಕನವರೆಗೆ 1 ಗುರುಗಳನ್ನು ಹೊಗಳಿದ್ದಾನೆ. 2 ಬಿಜ್ಜಳರಾಯ ಚರಿತೆ ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 12, ಪದ್ಯ 12392, ಇದರಲ್ಲಿ ಕಲ್ಯಾಣಪುರದ ದೊರೆಯಾದ “ ಜೈನಶಾಸನವಾರ್ಧಿವರ್ಧನಚಂದ್ರಮ ಜೈನವಂಶಾನ್ವಯತಿಲಕ ಜೈನಮಾರ್ಗಾನಂದಪರನೆಂದೆನಿಸುವ ” ಬಿಜ್ಜಳ ರಾಯನ ಕಥೆ ಹೇಳಿದೆ. ಹಿಂದೆ ವಿಜಯಮ್ಮಿ ತನ್ನ ತಾಯಿಗೆ ಹೇಳಿದ ಈ ಕಥೆಯನ್ನು ಕವಿ ವಿಸ್ತರಿಸಿ ಬರೆದಂತೆ ಹೇಳುತ್ತಾನೆ. - ಬಸವನ ವಿಷಯವಾಗಿ ಕವಿ ಹೀಗೆ ಬರೆದಿದ್ದಾನೆ:- ಬಿಜ್ಜಳರಾಯನು ತನ್ನ ಜೋಯಿಸನಾದ ಮಾದಿರಾಜನ ಮಗಳು ಪದ್ಮಿನಿಯನ್ನು ಮದುವೆಯಾಗಿ ಅವಳ ಅಣ್ಣನಾದ ಬಸವನಿಗೆ ಸೇನಾಪತಿತ್ವವನ್ನು ಕೊಟ್ಟನು. ಅವನು ಕೊಂಡಕುಂದ, ಕವಿಪರಮೇಷ್ರಿ, ಕುಮಾರಸೇನ, ಪೂಜ್ಯಪಾದ, ಜಿನ ಸೇನ, ವರ್ಧಮಾನಯತಿ, ವೀರಸೇನ, ಸಮಂತಭದ್ರ, ಅಕಲಂಕ. 2, ಇನ್ನೊಂದುಪ್ರತಿಯಲ್ಲ ಪದ್ಯ ಸಂಖ್ಯೆ 1371 ಎಂದಿದೆ. -.- - - - - -